ಕಲಬುರಗಿ| ಗುತ್ತಿಗೆದಾರ‍ರನ್ನು ಕಾಮಗಾರಿಗೆ ಸಂಬಂಧ ನಾಯಾಲಯ ವಿಚಾರಣೆ

ಲಬುರಗಿ: ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಗುತ್ತಿಗೆದಾರ‍ರನ್ನು ಆಮಗೆತಿಯಲ್ಲಿ ನಡೆದಿರುವ ಕಾಮಗಾರಿಗೆ ಸಂಬಂಧಿಸಿದಂತೆ ಮಾನ್ಯ ನಾಯಾಲಯ ವಿಚಾರಣೆ ನಡೆಸಿ ತರಾಟೆಗೆ ತೆಗೆದುಕೊಂಡಿದೆ.

ನಗರದ ಲಾಲಗೇರಿ ಕ್ರಾಸ್ ಬಳಿ 4೦೦ ಮೀಟರ್ ರಸ್ತೆಯ ಕಾಮಗಾರಿ ಹಾಗೂ ಒಳಚರಂಡಿ ನಿರ್ಮಾಣ ಕಾರ್ಯ ನಾಲ್ಕು ತಿಂಗಳಾದರೂ ಮುಗಿಸದೇ ಆಮೆಗತಿಯಲ್ಲಿ ನಡೆದಿರುವ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದ ವಿರುದ್ಧ ನ್ಯಾಯವಾದಿ ಹಾಗೂ ಸಮಾಜ ಸೇವಕರೊಬ್ಬರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಾರ್ವಜನಿಕ ಹಿತಾಸ್ತಕಿ ಮೇರೆಗೆ ದೂರು ಸಲ್ಲಿಸಲಾಗಿದ್ದನ್ನು ಮಾನ್ಯ ನ್ಯಾಯಲಯವು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ತಕ್ಷಣವೇ ಅರ್ಜಿಯ ದೂರು ಸ್ವೀಕರಿಸಿ, ತಕ್ಷಣವೇ ಸಂಬಂಧಿಸಿದ ಪಾಲಿಕೆಗೆ ಗಂಟೆಯೊಳಗೆ ಈ ಮೇಲ್ ನೋಟೀಸ್ ಕಳುಹಿಸಿ ತುರ್ತಾಗಿ ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿ ತದನಂತರ ವಿಚಾರಣೆ ನಡೆಸಿ ಪಾಲಿಕೆ ಆಯುಕ್ತರು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

ನಗರದ ಲಾಲಗೇರಿ ಕ್ರಾಸ್ ಬಳಿ 4೦೦ ಮೀಟರ್ ಒಳಚರಂಡಿ ಹಾಗೂ ರಸ್ತೆ ಸುಧಾರಣೆ ಕಾಮಗಾರಿ ನಾಲ್ಕು ತಿಂಗಳಿನಿಂದ ನಡೆದಿದ್ದು, ಆದರೆ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದಲ್ಲದೇ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದಿರುವುದನ್ನು ಜತೆಗೆ ವಾರದೊಳಗೆ ಮಹಾದಾಸೋಹಿ ಶರಣಬಸವೇಶ್ವರರ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸುವುದರಿಂದ ಸಾರ್ವಜನಿಕರಿರಿಗೆ ತೀವ್ರ ತೊಂದರೆಯಾಗುತ್ತದೆ.

ಇದನ್ನೂ ಓದಿ: ವಾಟರ್ ಮ್ಯಾನ್‍ ಗಳನ್ನು ಸರಕಾರಿ ನೌಕರರನ್ನಾಗಿಸಲು ಅವಕಾಶವಿಲ್ಲ: ಬೈರತಿ ಸುರೇಶ್

ಜೀವಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಂಬುದಾಗಿ ಕಂಡ ನ್ಯಾಯವಾದಿ ವೈಜನಾಥ ಝಳಕಿ ಅವರು ಮಾರ್ಚ್ 11ರಂದು ಸಾಯಂಕಾಲ 4 ಗಂಟೆಗೆ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದರು. ದೂರು ಸ್ವೀಕರಿಸಿದ ತಕ್ಷಣ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಅವರು ಪಾಲಿಕೆ ಆಯುಕ್ತರಿಗೆ ನೋಟಿಸ್ ಕಳುಹಿಸಿ ಮಾರ್ಚ್ 12ರ ಮಧ್ಯಾಹ್ನ 3ಕ್ಕೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದರು. ಇದರ ನಡುವೆ ಮಾರ್ಚ 12ರಂದು ಬೆಳಿಗ್ಗೆ ಕಾಮಗಾರಿ ಸ್ಥಳಕ್ಕೆ ನ್ಯಾಯಾಧೀಶರು ಖುದ್ದಾಗಿ ತೆರಳಿ ವಾಸ್ತವ ಸ್ಥಿತಿಗತಿ ಅರಿತರು.

ತದನಂತರ ಮಧ್ಯಾಹ್ನ 3 ಕ್ಕೆ ವಿಚಾರಣೆ ನಡೆಸಿದ ಪಾಲಿಕೆ ನ್ಯಾಯಾಧೀಶರು ಕಾಮಗಾರಿ ವಿಳಂಭಕ್ಕೆ ತರಾಟೆಗೆ ತೆಗೆದುಕೊಂಡರು. ವಿಚಾರಣೆಗೆ ಹಾಜರಾದ ಪಾಲಿಕೆ ಆಯುಕ್ತರು ಹಾಗೂ ಗುತ್ತಿಗೆದಾರರು ಕಾಮಗಾರಿಯನ್ನು ನಾಲ್ಕು ದಿನದೊಳಗೆ ಅಂದರೆ ಮಾರ್ಚ್ 16ರೊಳಗೆ ಪೂರ್ಣಗೊಳಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟರು.

ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ತಲುಪಿದ ತಕ್ಷಣ ಕಾಮಗಾರಿ ಸ್ಥಳಕ್ಕೆ ಒಮ್ಮೇಲೆ 1೦೦ ಕಾರ್ಮಿಕರನ್ನು ಕಳುಹಿಸಿ ಕಾಮಗಾರಿ ವೇಗ ಹೆಚ್ಚಿಸಲಾರಂಭಿಸಲಾಗಿದೆ.

ಒಟ್ಟಾರೆ ಕಲಬುರಗಿ ಮಹಾನಗರ ಇತಿಹಾಸದಲ್ಲಿ ನಾಲ್ಕು ತಿಂಗಳಿನಿಂದ ಮುಗಿಯದ ಕಾಮಗಾರಿ ಮಾನ್ಯ ನ್ಯಾಯಾಲಯದ ನಿರ್ದೇಶನದಿಂದ ನಾಲ್ಕು ದಿನದೊಳಗೆ ಮುಗಿಯುಂತಾಯಿತು. ನ್ಯಾಯವಾದಿ ವೈಜನಾಥ ಝಳಕಿ ಅವರು ಸಾರ್ವಜನಿಕ ಇಂತಹ ಸಮಸ್ಯೆಗಳಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸದಾ ಸಿದ್ಧ ಎಂದಿದ್ದಾರೆ.

ಇದನ್ನೂ ನೋಡಿ: Karnataka Legislative Assembly Live Day 09 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *