ವಾರಸುದಾರಿಕೆ ತೆರಿಗೆ : ಪ್ರಧಾನ ಮಂತ್ರಿಗಳ ಬರಡು ದೂಷಣೆಗಳು-ಅರಿವಿನ ಕೊರತೆ

ಪ್ರೊ. ಪ್ರಭಾತ್ ಪಟ್ನಾಯಕ್

ವಾರಸುದಾರಿಕೆಯ ಅಥವ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ವಿಧಿಸುವುದು ದೇಶದ ಸ್ವಾತಂತ್ರ್ಯ ಹೋರಾಟದ ಭಾಗವಾಗಿದೆ. ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳನ್ನು ಗಲ್ಲಿಗೇರಿಸಿದ ಕೇವಲ ಮೂರು ದಿನಗಳ ನಂತರ ಮಾರ್ಚ್ 26 ರಂದು ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಕರಾಚಿ ಅಧಿವೇಶನದ ನಿರ್ಣಯ ನೀಡಿದ ಆರ್ಥಿಕ ಸಮಾನತೆಯ ಆಶ್ವಾಸನೆಯ ಈಡೇರಿಕೆಗೆ ಇದು ಅತ್ಯಗತ್ಯ. ವಾರಸುದಾರಿಕೆಯ ತೆರಿಗೆ, ಅದರ ಜತೆಗೆ ಸಂಪತ್ತಿನ ತೆರಿಗೆ ಅಸಮಾನತೆ ತೀವ್ರವಾಗಿ ಏರಿರುವ ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯ. ಇದರ ವಿರುದ್ಧದ ಪ್ರಧಾನಿಗಳ ಬರಡು ದೂಷಣೆಗಳು ನಮ್ಮ ವಸಾಹತುಶಾಹಿವಿರೋಧಿ ಹೋರಾಟದ ಕಾರ್ಯಸೂಚಿಯ ಬಗ್ಗೆ ಅರಿವಿನ ಕೊರತೆಯನ್ನು ತೋರಿಸುತ್ತವೆ. ಇದು ವ್ಯಥೆಪಡಬೇಕಾದ ಸಂಗತಿ. ದೇಶ

ವಾರಸುದಾರಿಕೆ ತೆರಿಗೆಯ ಕುರಿತು ನರೇಂದ್ರ ಮೋದಿಯವರ ನುಡಿಮುತ್ತುಗಳು ಎಂತಹ ಕ್ಷುಲ್ಲಕ ಮಟ್ಟದಲ್ಲಿವೆಯೆಂದರೆ, ಒಬ್ಬ ಪ್ರಧಾನಮಂತಿಯ ಬಾಯಿಂದ ಇವನ್ನು ಕೇಳುವುದು ಅದ್ಭುತವೇ ಸರಿ. ಕಾಂಗ್ರೆಸ್ ಪಕ್ಷದ ಸ್ಯಾಮ್ ಪಿತ್ರೋಡಾ ಅವರು ಈ ತೆರಿಗೆಯ ಸಾಧ್ಯತೆಯನ್ನು ಪ್ರಸ್ತಾಪಿಸಿದ್ದಾರೆ, ಅದಕ್ಕೆ ಮೋದಿಯವರ ಪ್ರತಿಕ್ರಿಯೆಯು ಒಂದು ತರ್ಕಬದ್ಧ ವಾದವಲ್ಲ, ಬದಲಿಗೆ ಅದು ಈ ಪ್ರಸ್ತಾವನೆಯನ್ನು ಹಾಸ್ಯಾಸ್ಪದವಾಗಿಸುವ ಉದ್ದೇಶಪೂರ್ವಕವಾದ ಮತ್ತು ಸಪ್ಪೆ ವ್ಯಾಖ್ಯಾನಗಳಿಂದ ಕೂಡಿದೆ (ಮುಂದಿಡಬಹುದಾಗಿದ್ದ ಬೇರೆ ಹಲವು ತರ್ಕಬದ್ಧ ವಾದಗಳಿದ್ದವು). ಇದರಿಂದಾಗಿ ಗಂಭೀರವಾಗಿ ಚರ್ಚಿಸಬೇಕಾಗಿರುವ ವಿಷಯವನ್ನು ದುರುದ್ದೇಶಪೂರಿತವಾಗಿ ಪ್ರಹಸನದ ಮಟ್ಟಕ್ಕೆ ಇಳಿಸಲಾಯಿತು. ಅವರ ಎರಡು ಟಿಪ್ಪಣಿಗಳೆಂದರೆ: ಪಿತ್ರಾರ್ಜಿತ ತೆರಿಗೆ ಇದ್ದಲ್ಲಿ ಆ ಸಭೆಯಲ್ಲಿದ್ದ ಮಹಿಳೆಯರ ಮಂಗಳಸೂತ್ರಗಳನ್ನು ಕಸಿದುಕೊಳ್ಳಬೇಕಾಗುತ್ತದೆ; ಮತ್ತು ನಿಮ್ಮ ಸಾವಿನ ನಂತರವೂ ಕಾಂಗ್ರೆಸ್ ನಿಮ್ಮನ್ನು ಬಿಡುವುದಿಲ್ಲ. ಇವುಗಳಲ್ಲಿ ಮೊದಲನೆಯದು ಸ್ಪಷ್ಟವಾಗಿ ತಪ್ಪು; ಏಕೆಂದರೆ ಒಂದು ನಿರ್ದಿಷ್ಟ ಮಟ್ಟದ ಮೇಲಿನ ಸಂಪತ್ತಿಗೆ ಮಾತ್ರ ಈ ಪಿತ್ರಾರ್ಜಿತ ಆಸ್ತಿಯ ತೆರಿಗೆಯನ್ನು ವಿಧಿಸಲಾಗುತ್ತದೆ; ಮತ್ತು ಎರಡನೆಯದು, ತರ್ಕವೇ ಅಲ್ಲ, ಕೇವಲ ಸಭಿಕರ ಧಿಕ್ಕಾರವನ್ನು ಆಹ್ವಾನಿಸಲಿಕ್ಕಾಗಿಯೇ ಹೇಳಿರುವಂತದ್ದು. ಇದರಲ್ಲಿ ಯಾವುದೇ ವಾದವಿಲ್ಲ: ವ್ಯಕ್ತಿಯ ಮರಣದ ನಂತರ ಅವರ ಸಂತತಿ ಆನುವಂಶಿಕವಾಗಿ ಪಡೆಯುವುದರ ಮೇಲೆ ತೆರಿಗೆ ವಿಧಿಸುವಲ್ಲಿ ಯಾವುದೇ ತಪ್ಪಿಲ್ಲ.

ಪ್ರಸ್ತುತ ಹಂತದಲ್ಲಿ ದೊಡ್ಡ ಹಣಕಾಸಿನ ಪ್ರಯತ್ನ ನಡೆಸಬೇಕಾದುದರ ಹಿಂದಿರುವ ತರ್ಕವನ್ನು ಪರಿಶೀಲಿಸುವ ಮೂಲಕ ಪ್ರಾರಂಭಿಸೋಣ. ನವ ಉದಾರೀಕರಣದ ವರ್ಷಗಳು, ಆದಾಯ ಮತ್ತು ಸಂಪತ್ತಿನ ಅಸಮಾನತೆಗಳ ತೀವ್ರ ಹೆಚ್ಚಳವನ್ನು ಕಂಡಿವೆ ಎಂಬುದನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗುತ್ತಿದೆ; ಭಾರತದಲ್ಲಂತೂ ಇದು ಹಲವರನ್ನು ವಂಚಿತಗೊಳಿಸಿದೆ. ವಿಶೇಷವಾಗಿ ಎನ್‌ಡಿಎ ಆಡಳಿತದ ಅವಧಿಯಲ್ಲಿ ಇಂತಹ ವಂಚನೆ ತೀವ್ರವಾಗಿದೆ; 2014-15 ರಿಂದ ಗ್ರಾಮೀಣ ನಿಜಕೂಲಿಗಳು ಸ್ಥಗಿತಗೊಂಡಿವೆ ಎಂಬುದನ್ನು ಈಗ ಎಲ್ಲರೂ ಒಪ್ಪುತ್ತಾರೆ. ಸೂಕ್ತ ಬೆಲೆ ಸೂಚ್ಯಂಕವನ್ನು ಬಳಸಿದರೆ, ನಿಜಕೂಲಿಗಳಲ್ಲಿ ವಾಸ್ತವವಾಗಿ ಕುಸಿತವನ್ನು ಕಾಣಬಹುದು (ಈ ಅಂಕಣದಲ್ಲಿ ಪ್ರಕಟವಾಗಿರುವ ಲೇಖನವನ್ನು ನೋಡಿ). ಇದು ಕಾರ್ಮಿಕರ ಚೌಕಾಶಿ ಸಾಮರ್ಥ್ಯದಲ್ಲಿ ಗಮನಾರ್ಹ ಇಳಿಕೆಯನ್ನು ಸೂಚಿಸುತ್ತದೆ ಎಂದೂ ವಾದಿಸಬಹುದು. ಇಂತಹ ಕಡಿತ ನಿರುದ್ಯೋಗದ ಪ್ರಮಾಣ ಹೆಚ್ಚುವ ಮೂಲಕ ಸಂಭವಿಸಬಹುದು, ಇದು ಶ್ರಮಶಕ್ತಿಯಲ್ಲಿ ಹೆಚ್ಚಿದ ನಿರುದ್ಯೋಗವಾಗಿ ಕಾಣುತ್ತದೆ, ಕಡಿಮೆ ಉದ್ಯೋಗವನ್ನು ತೋರಿಸುತ್ತದೆ. ಇಳಿಮುಖವಾಗುತ್ತಿರುವ ನಿಜಕೂಲಿಗಳ ಜತೆಗೆ ಹೆಚ್ಚಿದ ನಿರುದ್ಯೋಗದ ಪ್ರಸ್ತುತ ಅವಧಿಯಲ್ಲಿ ಕಂಡು ಬರುವ ವಂಚನೆ ಕಳೆದ ಅರ್ಧ ಶತಮಾನದಲ್ಲಿಯೇ ಕಂಡಿರದಷ್ಟು. ದೇಶ

ದುಡಿಮೆಗಾರರಿಗೆ ವಿಶ್ವಾಸದ್ರೋಹ

ನವ-ಉದಾರವಾದಿ ಅರ್ಥವ್ಯವಸ್ಥೆಯು ಸ್ವಾಭಾವಿಕವಾಗಿ ಕೆಲಸ ಮಾಡುವುದರಿಂದ ಇಂತಹ ಫಲಿತಾಂಶ ಉಂಟಾಗುವುದಾದರೆ, ಅದರ ಕೆಲಸವನ್ನು ಹಣಕಾಸು ಮಧ್ಯಪ್ರವೇಶದ ಮೂಲಕ ಮಾರ್ಪಡಿಸುವುದು ಅಗ್ಯವಾಗುತ್ತದೆ. ಇದನ್ನು ದಾರಿದ್ರ್ಯಕ್ಕೆ ತಳ್ಳಲ್ಪಟ್ಟವರಿಗೆ ವರ್ಗಾವಣೆ ಮಾಡಲು ಅಥವಾ ಅವರಿಗೆ ಸೇವೆಗಳನ್ನು ಒದಗಿಸಲು ಶ್ರೀಮಂತರ ಮೇಲೆ ತೆರಿಗೆಗಳನ್ನು ಹೇರುವ ಮೂಲಕ ಮಾಡಬೇಕು. ಇಂತಹ ತೀವ್ರ ವಂಚನೆಯ ಪರಿಸ್ಥಿತಿಯಲ್ಲಿ ಈ ರೀತಿಯ ಹಣಕಾಸಿನ ಮಧ್ಯಪ್ರವೇಶವನ್ನು ತಪ್ಪಿಸುವುದು ದುಡಿಯುವ ಜನರಿಗೆ ಮಾಡುವ ವಿಶ್ವಾಸದ್ರೋಹಕ್ಕಿಂತ ಕಡಿಮೆಯಿಲ್ಲ. ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸುವುದು ಸರ್ಕಾರದ ಕರ್ತವ್ಯವಾಗಿದೆ ಮತ್ತು ಅಂತಹ ತೆರಿಗೆಗಳು ನೇರ ತೆರಿಗೆಗಳಾಗಿರಬೇಕು, ಏಕೆಂದರೆ ಪರೋಕ್ಷ ತೆರಿಗೆಗಳು ಹೆಚ್ಚಾಗಿ ಬಡವರ ಮೇಲೆಯೇ ಬೀಳುತ್ತವೆ.

ಅಂತಹ ನೇರ ತೆರಿಗೆಗಳು ಆದಾಯ ಅಥವಾ ವೆಚ್ಚದಂತಹ ಹರಿವು(flow)ಗಳ ಮೇಲೆ ಅಥವಾ ಸಂಪತ್ತು ಅಥವಾ ಪಿತ್ರಾರ್ಜಿತದಂತಹ ‘ದಾಸ್ತಾನು’ (stock)ಗಳ ಮೇಲೆ ಇರಬಹುದು. ಭಾರತ ಇಂತಹ ದಾಸ್ತಾನುಗಳ ಮೇಲೆ ಯಾವುದೇ ನೇರ ತೆರಿಗೆಯನ್ನು ಹೊಂದಿಲ್ಲ; ನಮ್ಮ ಎಲ್ಲಾ ನೇರ ತೆರಿಗೆಗಳು ಹರಿವಿನ ಮೇಲೆಯೇ ಇವೆ. ಈಗ, ಹೆಚ್ಚುವರಿ ತೆರಿಗೆ ಆದಾಯವನ್ನು ಸಂಗ್ರಹಿಸಲು ಇಂತಹ ದಾಸ್ತಾನುಗಳ ಮೇಲಿನ ತೆರಿಗೆಯನ್ನು ತಪ್ಪಿಸಬೇಕಾದರೆ, ಹರಿವಿನ ಮೇಲೆ ತೆರಿಗೆಯನ್ನು ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ. ಆದರೆ ಹಲವಾರು ಕಾರಣಗಳಿಗಾಗಿ ಇದು ಸೂಕ್ತವಲ್ಲ: ಮೊದಲನೆಯದಾಗಿ, ಹರಿವಿನ ಮೇಲೆ ಹೆಚ್ಚುವರಿ ತೆರಿಗೆಯ ಮೂಲಕ ನಿರ್ದಿಷ್ಟ ಪ್ರಮಾಣದ ಸಂಪನ್ಮೂಲಗಳನ್ನು ಸಂಗ್ರಹಿಸಬೇಕಾದರೆ, ಅದನ್ನೇ ಸಂಪನ್ಮೂಲಗಳನ್ನು ದಾಸ್ತಾನುಗಳ ಚರಾಂಶಗಳ ಮೇಲೆ ತೆರಿಗೆಯ ಮೂಲಕ ಸಂಗ್ರಹಿಸುವುದಕ್ಕಿAತ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ; ಎರಡನೆಯದಾಗಿ, ಸಂಪತ್ತಿನ ತೆರಿಗೆಯು ಹೂಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಅದರಿಂದಾಗಿ, ಉದ್ಯೋಗದ ಮೇಲೆ ಪರಿಣಾಮ ಬೀರುವುದಿಲ್ಲ (ಏಕೆಂದರೆ ಇದು ಹೂಡಿಕೆಯ ಮೇಲೆ ಪ್ರಭಾವ ಬೀರುವ ಯಾವುದೇ ಚರಾಂಶಗಳ, ಉದಾಹರಣೆಗೆ ಮಾರುಕಟ್ಟೆಯ ನಿರೀಕ್ಷಿತ ಬೆಳವಣಿಗೆ, ಅಥವಾ ತೆರಿಗೆಯ ನಂತರದ ಲಾಭದ ದರ, ಅಥವಾ ಬಡ್ಡಿ ದರಗಳನ್ನು ತಟ್ಟುವುದಿಲ್ಲ). ಆದರೆ ಲಾಭಗಳ ಮೇಲೆ ತೆರಿಗೆ ವಿಧಿಸುವುದರಿಂದ ಸಣ್ಣ ಬಂಡವಾಳಶಾಹಿಗಳು ನಡೆಸುವ ಹೂಡಿಕೆಯನ್ನು ಕಡಿಮೆಯಾಗಬಹುದು; ಮೂರನೆಯದಾಗಿ, ಇತ್ತೀಚಿನ ವರ್ಷಗಳಲ್ಲಿ ಸಂಪತ್ತಿನ ಅಸಮಾನತೆಗಳು ವಿಪರೀತವಾಗಿ ಹೆಚ್ಚಾಗಿರುವ ಕಾರಣ, ಈ ಹೆಚ್ಚಳವನ್ನು ಸಂಪತ್ತು ಮತ್ತು ಪಿತ್ರಾರ್ಜಿತಗಳ ಮೇಲೆ ಸೂಕ್ತ ತೆರಿಗೆಯ ಮೂಲಕ ಹೇಗಾದರೂ ಪರಿಹರಿಸಬೇಕಾಗಿದೆ. ದೇಶ

ಇದನ್ನು ಓದಿ : ಮೋದಿಗೆ ಅಡುಗೆ ಮಾಡುತ್ತೇನೆಂದ ಮಮತಾ ಬ್ಯಾನರ್ಜಿ: ಈ ಬಗ್ಗೆ ಯಾರು ಯಾರು ಏನೆಂದರು?

ಬಂಡವಾಳಶಾಹಿಗಳ’ವಿಶೇಷ’ ಗುಣ?

ವಾಸ್ತವವಾಗಿ ಪಿತ್ರಾರ್ಜಿತ  ಆಸ್ತಿಗಳ ಮೇಲೆ ತೆರಿಗೆಯನ್ನು ವಿಧಿಸುವುದನ್ನು ಆರಂಭಿಸುವುದು ಸಂಪತ್ತಿನ ಮೇಲೆ ತೆರಿಗೆಯನ್ನು ಆರಂಭಿಸುವುದಕ್ಕಿಂತ ನೈತಿಕ ದೃಷ್ಟಿಯಿಂದ ಹೆಚ್ಚು ಪ್ರಭಾವಶಾಲಿಯಾಗಿದೆ. ಇದಕ್ಕೆ ಕಾರಣ ಹೀಗಿದೆ: ಬಂಡವಾಳಶಾಹಿಯನ್ನು ರಕ್ಷಿಸ ಬಯಸುವ ಎಲ್ಲಾ ಬರಹಗಾರರು ಸಮಾಜದಲ್ಲಿ ಇತರರಿಗೆ ಇಲ್ಲದ ಕೆಲವು ವಿಶೇಷ ಗುಣಗಳನ್ನು ಬಂಡವಾಳಶಾಹಿಗಳು ಹೊಂದಿರುವುದರಿAದ, ಅವರನ್ನು ಭಿನ್ನವಾಗಿ ಪರಿಗಣಿಸಬೇಕಾಗುತ್ತದೆ ಎಂಬ ವಾದ ಹೂಡುತ್ತಾರೆ; ಮತ್ತು ಈ ಗುಣವನ್ನು ಹೊಂದಿರುವುದೇ ಲಾಭ ಎಂಬ ಒಂದು ವಿಶೇಷ ರೀತಿಯ ಆದಾಯವನ್ನು ಅವರು ಗಳಿಸುತ್ತಾರೆ ಹೇಗೆ ಎಂಬುದಕ್ಕೆ ವಿವರಣೆ ನೀಡುತ್ತದೆ ಮತ್ತು ಅದನ್ನು ಸಮರ್ಥಿಸುತ್ತದೆ. ಇದು ಲಾಭದ ಮೂಲವನ್ನು ಕಾರ್ಮಿಕರ ಶೋಷಣೆಯಲ್ಲಿ ಗುರುತಿಸುವ ಮಾರ್ಕ್ಸ್ ವಾದಿ ದೃಷ್ಟಿಕೋನಕ್ಕೆ ಸಂಪೂರ್ಣವಾಗಿ ವಿರುದ್ಧವಾದ ದೃಷ್ಟಿಕೋನವಾಗಿದೆ. ಆದರೆ, ಈ ವಿಶೇಷ ಗುಣವು ನಿಖರವಾಗಿ ಯಾವುದು ಎಂಬ ಬಗ್ಗೆ ಬಂಡವಾಳಶಾಹಿಯ ರಕ್ಷಕರಲ್ಲಿ ಯಾವುದೇ ಸಹಮತಿಯಿಲ್ಲ: ಶುಂಪೀಟರ್ “ನವೀನಗೊಳಿಸುವ ಸಾಮರ್ಥ್ಯ” ಎಂದು ಹೇಳಿದರೆ, ಇತರರು ಅಪಾಯಗಳನ್ನು ಎದುರಿಸಲು ಮುಂದಾಗುವ ಸಾಮರ್ಥ್ಯ, ಇತ್ಯಾದಿ ಎನ್ನುತ್ತಾರೆ.

ಬಂಡವಾಳಶಾಹಿಯು ಒಬ್ಬ ವ್ಯಕ್ತಿಯು ಲಾಭದ ರೂಪದಲ್ಲಿ ಗಳಿಸುವ ಸಂಪತ್ತನ್ನು ಹೊಂದಲು ಅರ್ಹನಾಗಿಸುವ ಅಂತಹ ವಿಶೇಷ ಗುಣವನ್ನು ಹೊಂದಿದ್ದಾನೆ ಎನ್ನುವುದನ್ನು ವಾದಕ್ಕಾಗಿ ಒಪ್ಪಿಕೊಳ್ಳೋಣ. ಆದರೆ, ಇದರರ್ಥ ಆತನ ಮಕ್ಕಳೂ ಈ ವಿಶೇಷ ಗುಣವನ್ನು ಹೊಂದಿದ್ದಾರೆಂದೇನೂ ಅರ್ಥವಲ್ಲವಲ್ಲ. ಅವರು ಈ ಸಂಪತ್ತನ್ನು ಹೊಂದುವ ಯಾವುದೇ ಅರ್ಹತೆಯನ್ನು ಪಡೆದುಕೊಳ್ಳುವ ಮೊದಲು, ಅವರು ಸಹ ಅಂತಹ ವಿಶೇಷ ಗುಣವನ್ನು ಹೊಂದಿದ್ದಾರೆ ಎಂಬುದನ್ನು ಸಮಾನ ಅವಕಾಶದಿಂದ ಆರಂಭಿಸಿ ಸ್ವತಂತ್ರವಾಗಿ ಪ್ರದರ್ಶಿಸಬೇಕು ತಾನೇ.

“ನೆನಪಿರಲಿ ಮಗಾ, ಬಡವರು ಮಾತ್ರವೇ,

ವಾರಕ್ಕೆ 70 ದಿನಗಳ ಕೆಲಸ ಮಾಡಬೇಕು!”

ಪ್ರೊ. ಪ್ರಭಾತ್ ಪಟ್ನಾಯಕ್

ವ್ಯಂಗ್ಯಚಿತ್ರ: ಸ್ಯಾನಿಟರಿ ಪ್ಯಾನಲ್ಸ್

ಉದಾಹರಣೆಗೆ, ನನ್ನ ಅಜ್ಜ ಕೆಲವು ವಿಶೇಷ ಗುಣಗಳನ್ನು ಹೊಂದಿದ್ದರಿಂದ, ಆತ ಗಳಿಸಿದ ಸಂಪತ್ತಿಗೆ, ನಾನು ಅಂತಹ ಯಾವುದೇ ಗುಣವನ್ನು ಯಾವುದೇ ರೀತಿಯಲ್ಲಿ ಪ್ರದರ್ಶಿಸದಿದ್ದರೂ, ಅರ್ಹನಾಗುತ್ತೇನೆ ಎಂಬುದು, ಬಂಡವಾಳದ ಮಾಲೀಕತ್ವವು ಒಂದು ವಿಶೇಷ ಗುಣದ ಪ್ರತಿಫಲವಾಗಿದೆ ಎಂಬ ಬಂಡವಾಳಶಾಹಿ ತತ್ವಕ್ಕೇ ವಿರುದ್ಧವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಹೊಂದಬಹುದು ಎಂಬುದು ಬಂಡವಾಳಶಾಹೀ ತಾನೇ ಪ್ರತಿಪಾದಿಸುವ ತತ್ವಕ್ಕೆ ವಿರುದ್ಧವಾಗಿದೆ. ಇದು ವಾಸ್ತವವಾಗಿ ಆಸ್ತಿಯ ಮಾಲೀಕತ್ವ ಮತ್ತು ಅದರಿಂದಾಗಿ ಲಾಭ ಎಂದು ಕರೆಯಲ್ಪಡುವ ಆದಾಯದ ಗಳಿಕೆಯು, ಅದನ್ನು ಹೊಂದಿರುವವರ ಕೆಲವು ವಿಶೇಷ ಗುಣಗಳಿಂದಾಗಿ ಎಂಬ ಪ್ರತಿಪಾದನೆಯನ್ನು ನಿರಾಕರಿಸುವುದಕ್ಕೆ ಪುರಾವೆಯಾಗುತ್ತದೆ.

ಆದ್ದರಿಂದ ಅನೇಕ ದೊಡ್ಡ ಬಂಡವಾಳಶಾಹೀ ಅರ್ಥವ್ಯವಸ್ಥೆಗಳಲ್ಲಿ ಈ ವ್ಯವಸ್ಥೆಗೆ ನ್ಯಾಯಸಮ್ಮತತೆಯನ್ನು ಒದಗಿಸಲು ಪಿತ್ರಾರ್ಜಿತ ಆಸ್ತಿಗಳ ಮೇಲೆ ತೆರಿಗೆ ಬಂಡವಾಳಿಗರಿಗೆ ಏನೇನೂ ಇಷ್ಟವಿಲ್ಲದಿದ್ದರೂ, ಇದನ್ನು ಸಹಿಸಿಕೊಳ್ಳಲಾಗಿದೆ. ಉದಾಹರಣೆಗೆ ಜಪಾನ್‌ನಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ದರಗಳು 55 % ದಷ್ಟರ ವರೆಗೂ ಇವೆ. ಭಾರತದಲ್ಲಿ ಈಗ ನಾವು ವಾರಸುದಾರಿಕೆ ತೆರಿಗೆಯನ್ನು ಹೊಂದಿರದೇ ಇರುವುದು, ನಮ್ಮಲ್ಲಿ ಸಂಪತ್ತು ತೆರಿಗೆ ಎಂದು ಹೇಳಬಹುದಾದ ಏನ್ನೂ ಹೊಂದಿಲ್ಲ ಎಂಬುದಕ್ಕೆ ಅನುಗುಣವಾಗಿದೆ. ಏಕೆಂದರೆ ಪಿತ್ರಾರ್ಜಿತ ಆಸ್ತಿಯ ತೆರಿಗೆಯು ಸ್ವತಃ ಮಹತ್ವದ್ದಾಗಿದೆಯಲ್ಲದೆ, ಸಂಪತ್ತು ತೆರಿಗೆಗೆ ಪೂರಕವೂ ಆಗಿದೆ. ಅದಿಲ್ಲದಿದ್ದರೆ, ಸಂಪತ್ತಿನ ಮೇಲೆ ತೆರಿಗೆಯಿಂದ ತಪ್ಪಿಸಿಕೊಳ್ಳಲು, ಕುಟುಂಬದ ಮುಖ್ಯಸ್ಥನ ಮರಣದ ಮುಂಚೆಯೇ, ಆತನ ಸಂತತಿಯಲ್ಲಿ ಹಂಚಿ ಬಿಡುವುದು ನಡೆಯಬಹುದು. ದೇಶ

ಆದ್ದರಿಂದ ಸಂಪತ್ತನ್ನು, ಸಾವಿನ ನಂತರ ಮಾತ್ರವಲ್ಲ, ಅದಕ್ಕೂ ಮುಂಚೆಯೇ ಸಂತತಿಗೆ ಅಥವಾ ಸ್ನೇಹಿತರಿಗೆ ಕೊಡಮಾಡುವುದನ್ನು ವಾರಸುದಾರಿಕೆಯ ಮೇಲೆ ತೆರಿಗೆ ವಿಧಿಸುವ ಮೂಲಕ ಕಂಡು ಹಿಡಿಯಬೇಕು. ಇದು ಒಂದು ನಿರ್ದಿಷ್ಟ ವಿನಾಯಿತಿ ಮಿತಿಯ ಮೇಲೆ ಮಾತ್ರ ವಿಧಿಸುವ, ಹೆಚ್ಚುತ್ತ ಹೋಗುವ ತೆರಿಗೆಯಾಗಿರಬೇಕು (ಈ ಮೂಲಕ ಏಕಸ್ವಾಮ್ಯ ಬಂಡವಾಳಶಾಹಿಗಳು ಮತ್ತು ಬಿಲಿಯಾಧಿಪತಿಗಳು ಮಂಗಳಸೂತ್ರವನ್ನು ಆವಾಹಿಸುವ ಮೂಲಕ ಅದರ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸಲು ಅವಕಾಶವಿಲ್ಲದಂತಾಗಬೇಕು); ಮತ್ತು ಇದನ್ನು, ಮೇಲೆ ಉಲ್ಲೇಖಿಸಿದಂತೆ, ವ್ಯಕ್ತಿಯ ಮರಣದ ನಂತರ ಮಾತ್ರವಲ್ಲ, ವ್ಯಕ್ತಿಯ ಜೀವಿತಾವಧಿಯಲ್ಲಿಯೂ ಸಹ ವಾರಸುದಾರಿಕೆಯ ಕ್ರಿಯೆಯನ್ನು ಕಾರ್ಯಗತಗೊಳಿಸಿದಾಗಲೆಲ್ಲಾ ಅಗತ್ಯವಾಗಿ ಅನ್ವಯಿಸಬೇಕು.

ಸಂಪತ್ತು ತೆರಿಗೆ ಮತ್ತು ವಾರಸುದಾರಿಕೆ ತೆರಿಗೆ ಇವೆರಡರ ವಿರುದ್ಧದ ಸಾಮಾನ್ಯ ವಾದವೆಂದರೆ ಅವುಗಳನ್ನು ಜಾರಿಗೊಳಿಸುವುದು ಕಷ್ಟ, ಆದ್ದರಿಂದ ಅವುಗಳಿಂದ ಆದಾಯ ಸಂಗ್ರಹ ಬಹಳ ಕಡಿಮೆ. ಆದರೆ ಈ ಸಂಗತಿ, ಭಾರತದಲ್ಲಿ ಸಂಭವಿಸಿದAತೆ ಅವನ್ನು ಪರಿತ್ಯಜಿಸುವುದಕ್ಕೆ ಸಮರ್ಥನೆಯಾಗಲಾರದು; ಬದಲಿಗೆ, ಇಂತಹ ತೆರಿಗೆಗಳು ಪರಿಣಾಮಕಾರಿಯಾಗುವಂತೆ ವಿಧಿ-ವಿಧಾನಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಮತ್ತು ಅವನ್ನು ತಿದ್ದುಪಡಿ ಮಾಡಬೇಕು. ಜಪಾನ್‌ನಂತಹ ಇತರ ದೇಶಗಳು ಅವುಗಳನ್ನು ಹೇಗೆ ಕಾರ್ಯಗತಗೊಳಿಸುತ್ತವೆ ಎಂಬುದನ್ನು ಸಹ ಈ ಸಂದರ್ಭದಲ್ಲಿ ಅಧ್ಯಯನ ಮಾಡಬಹುದು. ದೇಶ

ವಸಾಹತುಶಾಹಿವಿರೋಧಿ ಹೋರಾಟದ ಭಾಗ

ಪ್ರಾಸಂಗಿಕವಾಗಿ, ಪಿತ್ರಾರ್ಜಿತ ತೆರಿಗೆಯನ್ನು ವಿಧಿಸುವುದು ನಮ್ಮ ವಸಾಹತುಶಾಹಿ-ವಿರೋಧಿ ಹೋರಾಟದ ಕಾರ್ಯಸೂಚಿಯ ಭಾಗವಾಗಿತ್ತು. ಕಾಂಗ್ರೆಸ್‌ನ 1931 ರ ಕರಾಚಿ ಕರಾಚಿ ಅಧಿವೇಶನದ ನಿರ್ಣಯವು ಭಾರತದಲ್ಲಿ ಎಲ್ಲಾ ನಾಗರಿಕರಿಗೆ ಕಾನೂನಿನ ಮುಂದೆ ಸಮಾನತೆ, ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು, ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳ ಒಂದು ಪಟ್ಟಿಯನ್ನು. ಮತ್ತು ಯಾವುದೇ ನಿರ್ದಿಷ್ಟ ಧರ್ಮವನ್ನು ಪ್ರೋತ್ಸಾಹಿಸದ ಒಂದು ಜಾತ್ಯತೀತ ಪ್ರಭುತ್ವದ ಚಿತ್ರಣ ನೀಡಿತ್ತು. “ಒಂದು ನಿರ್ದಿಷ್ಟ ಕನಿಷ್ಠಕ್ಕಿಂತ ಹೆಚ್ಚಿನ ಆಸ್ತಿಯ ಮೇಲೆ ಹೆಚ್ಚುತ್ತ ಹೋಗುವ ಪ್ರಮಾಣದಲ್ಲಿ ಮರಣ ತೆರಿಗೆಯನ್ನು ವಿಧಿಸಲಾಗುವುದು” ಎಂದೂ ಅದು ಸ್ಪಷ್ಟವಾಗಿ ಹೇಳಿತ್ತು. ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳನ್ನು ಗಲ್ಲಿಗೇರಿಸಿದ ಕೇವಲ ಮೂರು ದಿನಗಳ ನಂತರ ಮಾರ್ಚ್ 26 ರಂದು ನಡೆದ ಕರಾಚಿ ಅಧಿವೇಶನದ ನಿರ್ಣಯ ಕಾಂಗ್ರೆಸ್ ಸಂಘಟನೆಯ ಒಳಗೆ ಮತ್ತು ಹೊರಗೆ ರಾಜಕೀಯ ಜೀವನದಲ್ಲಿ ಎಡಪಂಥೀಯರ ಪ್ರಭಾವ ಬೆಳೆದು ಬರುತ್ತಿದ್ದುದನ್ನು, ಮತ್ತು ಇದಕ್ಕೆ ಸಾರ್ವತ್ರಿಕ ಬೆಂಬಲವನ್ನು ಬಿಂಬಿಸಿತ್ತು. ಜವಾಹರಲಾಲ್ ನೆಹರೂ ಮಂಡಿಸಿದ ಈ ನಿರ್ಣಯವನ್ನು ಗಾಂಧಿಯವರು ಎಚ್ಚರಿಕೆಯಿಂದ ಪರಿಶೀಲಿಸಿದರು ಮತ್ತು ಅನುಮೋದಿಸಿದ್ದರು; ಮತ್ತು ಈ ನಿರ್ಣಯವನ್ನು ಅಂಗೀಕರಿಸಿದ ಕರಾಚಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಲ್ಲಭಭಾಯಿ ಪಟೇಲ್ ವಹಿಸಿದ್ದರು, ಹೀಗೆ ಪಿತ್ರಾರ್ಜಿತ ಆಸ್ತಿ ತೆರಿಗೆಯ ವಿರುದ್ಧದ ಪ್ರಧಾನ ಮಂತ್ರಿಯವರ ಬರಡು ದೂಷಣೆಗಳು ನಮ್ಮ ವಸಾಹತುಶಾಹಿ-ವಿರೋಧಿ ಹೋರಾಟದ ಕಾರ್ಯಸೂಚಿಯ ಬಗ್ಗೆ ಅರಿವಿನ ಕೊರತೆಯನ್ನು ತೋರಿಸುತ್ತವೆ. ಇದು ವ್ಯಥೆಪಡಬೇಕಾದ ಸಂಗತಿ. ದೇಶ

ವಾರಸುದಾರಿಕೆಯ ತೆರಿಗೆ, ಅದರ ಜತೆಗೆ ಸಂಪತ್ತಿನ ತೆರಿಗೆ ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯವಾಗಿದೆ. ಇದು ದೇಶದಲ್ಲಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆಯನ್ನು ತಡೆಗಟ್ಟಲು ಮಾತ್ರವಲ್ಲದೆ ಒಂದು ಕಲ್ಯಾಣ ಪ್ರಭುತ್ವವನ್ನು ಕಟ್ಟಲು ಸಹ ಅತ್ಯಗತ್ಯವಾಗಿದೆ. ಇಂತಹ ಒಂದು ಪ್ರಭುತ್ವದ ಸ್ಥಾಪನೆ ಕರಾಚಿಯ ನಿರ್ಣಯ ಆಶ್ವಾಸನೆ ನೀಡಿದ್ದ ಆರ್ಥಿಕ ನ್ಯಾಯವನ್ನು ಸಾಧಿಸಲು ಒಂದು ಅಗತ್ಯ ಹೆಜ್ಜೆಯಾಗಿದೆ.

ಕಾಂಗ್ರೆಸ್ ನಿಮ್ಮ ಹೆಂಡತಿಯ ಮಂಗಳಸೂತ್ರವನ್ನು ಕಿತ್ತುಕೊಳ್ಳುತ್ತದೆ…”

“…ನಿಮ್ಮ ಎಮ್ಮೆಯನ್ನು ಕಿತ್ತುಕೊಳ್ಳುತ್ತದೆ….”

ಪಾಕಿಸ್ತಾನ! ಪಾಕಿಸ್ತಾನ! ಪಾಕಿಸ್ತಾನ!”

“ನಾನೊದು ಪ್ರಶ್ನೆ ಕೇಳಲೇ?”

“ಖಂಡಿತ”

“ ನಿಮ್ಮಪ್ರಕಾರ ನಮ್ಮ ಬುದ್ಧಿಮತ್ತೆಯ ಮಟ್ಟ ಎಷ್ಟಿರಬಹುದು”

ಪ್ರೊ. ಪ್ರಭಾತ್ ಪಟ್ನಾಯಕ್

ವ್ಯಂಗ್ಯಚಿತ್ರ ಕೃಪೆ: ಅಲೋಕ್‍ ನಿರಂತರ್

“ಒಂದು ಜಾಗತಿಕ ಸಣ್ಣತನದ ಸೂಚ್ಯಂಕ

ಎಂಬುದಿದ್ದರೆ ಅದರಲ್ಲಿ ನಾವು

ಮೊದಲ ಸ್ಥಾನದಲ್ಲಿರುತ್ತೇವೆ”

ವ್ಯಂಗ್ಯಚಿತ್ರ: ಸಜಿತ್ ಕುಮಾರ್,

ಡೆಕ್ಕನ್ ಹೆರಾಲ್ಡ್

ಇದನ್ನು ನೋಡಿ : ಎರಡು ಕೋಟಿ ಉದ್ಯೋಗ : ಎಲ್ಲಿ ಹೋದವು? ಮೋದಿ ಸರ್ಕಾರದ ಉತ್ತರವೇನು? Janashakthi Media

Donate Janashakthi Media

Leave a Reply

Your email address will not be published. Required fields are marked *