ಬೆಂಗಳೂರು: ನಗರದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಕಿಡಿಗೇಡಿಗಳು ಜೆರಾಕ್ಸ್ ನೋಟ್ ನೀಡಿ ಜನರಿಗೆ ಮೋಸಮಾಡುತ್ತಿದ್ದಾರೆ. ಕಾಟನ್ಪೇಟೆಯಲ್ಲಿ ಜೆರಾಕ್ಸ್ ಮಾಡಿದ ನೋಟು ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳೀಯರು ಕಾಟನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೊರಗಿನಿಂದ ಬೆಂಗಳೂರಿಗೆ ಬಂದ ಕಿಡಿಗೇಡಿಗಳು ನೋಟನ್ನು ಜೆರಾಕ್ಸ್ ಮಾಡಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕಿಡಿಗೇಡಿಗಳು ಜೆರಾಕ್ಸ್ ಮಾಡಿದ 100 ರೂ. ನೋಟು ಕೊಟ್ಟು ಯಾಮಾರಿದ್ದಾರೆ. ಸಣ್ಣ ಹೋಟೆಲ್, ಬೀಡ ಅಂಗಡಿ, ಜನರಲ್ ಸ್ಟೋರ್ ಹೀಗೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಜೆರಾಕ್ಸ್ ನೋಟುಗಳನ್ನ ನೀಡಿದ್ದಾರೆ. ಹೊರಗಿನಿಂದ ಬಂದು ಲಾಡ್ಜ್ನಲ್ಲಿ ಉಳಿದುಕೊಂಡವರು ಈ ಕೃತ್ಯ ಎಸಗಿರಬುದು ಎಂಬ ಅನುಮಾನವಿದೆ. ಹೆಚ್ಚು ಜನರಿರುವ ಸಮಯ ನೋಡಿ ಜೆರಾಕ್ಸ್ ನೋಟು ಕೊಟ್ಟು ಮೋಸ ಮಾಡಿದ್ದಾರೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.
ಘಟನೆ ಸಂಬಂಧ ಕಾಟನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಕಾಟನ್ ಪೇಟೆ ಸುತ್ತ ಮುತ್ತ ಎರಡು ಪೊಲೀಸ್ ಠಾಣೆಗಳಿದ್ದೂ ಈ ರೀತಿ ಮೋಸ ನಡೆಯುತ್ತಿದೆ ಎಂದು ಆಶ್ಚರ್ಯವಾಗುತ್ತಿದೆ. ಅಂಗಡಿಯವರಿಗೆ ಹಾಗೂ ಅಂಗಡಿಗೆ ಬರುವ ಗಿರಾಕಿಗಳಿಗೆ ಮೋಸವಾಗುತ್ತಿದೆ. ಕೂಡಲೇ ಅವರನ್ನು ಪತ್ತೆ ಹಚ್ಚೆಬೇಕು. ಬಹುಷಃ ಇದು ದೊಡ್ಡಜಾಲ ಇರಬಹುದು ಎಂದು ಕಾಟನ್ ಪೇಟೆಯ ಬೀದಿಬದಿ ವ್ಯಾಪಾರಿ ರಾಮಚಂದ್ರಪ್ಪ ಶಂಕೆ ವ್ಯಕ್ತಪಡಿಸಿದ್ದಾರೆ.