ಕಡಲೆಕಾಯಿ ಪರಿಷೆ ಚಾಲನೆಗೆ ಕ್ಷಣಗಣನೆ, ಕಳೆಗಟ್ಟಿದ ಬಸವನಗುಡಿ

  • ಕಡಲೆಕಾಯಿ ಪರಿಷೆ ಆರಂಭ, ಕಳೆಗಟ್ಟಿದ ಬಸವನಗುಡಿ, ಸೋಮವಾರ ತೆಪ್ಪೋತ್ಸವ ಉದ್ಘಾಟನೆ
  • ಸಕಲ ಸಿದ್ಧತೆಗಳು ಪೂರ್ಣ, ಭದ್ರತೆಗೆ ಪೊಲೀಸ್‌ ಸಿಬ್ಬಂದಿ ನಿಯೋಜನೆ
  • ವ್ಯಾಪಾರಸ್ಥರಿಗೆ ಸುಮಾರು 2 ಸಾವಿರ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲು ಫುಟ್‌ಪಾತ್‌ ಬದಿಯಲ್ಲಿಅನುಕೂಲ ಕಲ್ಪಿಸಲಾಗಿದೆ

ಬೆಂಗಳೂರು: ಕಡಲೆ ಕಾಯಿ ಪರಿಷೆಗೆ ಬಸವನಗುಡಿ ಕಳೆಗಟ್ಟಿದ್ದು, ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.

ಕಾರ್ತೀಕ ಮಾಸದ ಕಡೇ ಸೋಮವಾರದಂದು ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಜನಸಾಗರ ಹರಿದು ಬಂದಿತ್ತು. ಇಂದು ಬೆಳ್ಳಂಬೆಳಗ್ಗೆಯೇ ಬುಲ್ ಟೆಂಪಲ್ ರಸ್ತೆಯಲ್ಲಿ ಜನರು, ವಾಹನಗಳ ಓಡಾಟದಿಂದ ಹಬ್ಬದ ಕಳೆಗಟ್ಟಿದೆ. ವ್ಯಾಪಾರಿಗಳು, ರೈತರು ಕಡಲೆಕಾಯಿ ಮಾರಾಟ ಆರಂಭಿಸಿದ್ದಾರೆ. ಬೊಂಬೆ, ಪೀಪಿ, ಮಕ್ಕಳ ಆಟಿಕೆ ಸಾಮಾಗ್ರಿಗಳು, ಗೃಹ ಉಪಯೋಗಿ ವಸ್ತುಗಳು ಸೇರಿದಂತೆ ಅಲಂಕಾರಿಕ ವಸ್ತುಗಳ ಮಾರಾಟ ಆರಂಭಗೊಂಡಿದೆ. ದೊಡ್ಡ ಗಣಪತಿ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಲಕ್ಷಾಂತರ ಜನ ಸೇರುವ ಸಾಧ್ಯತೆ ಇದೆ.

ಒಂದೇ ಲಿಂಕ್‌ನಲ್ಲಿ ಜನಶಕ್ತಿ ಮೀಡಿಯಾದ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ನ್ನು ನೋಡಬಹುದು

2 ಸಾವಿರ ತಾತ್ಕಾಲಿಕ ಅಂಗಡಿಗಳು: ವ್ಯಾಪಾರಸ್ಥರಿಗೆ ಸುಮಾರು 2 ಸಾವಿರ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲು ಫುಟ್‌ಪಾತ್‌ ಬದಿಯಲ್ಲಿಅನುಕೂಲ ಕಲ್ಪಿಸಲಾಗಿದೆ. ಸುಮಾರು 1 ಕಿ.ಮೀ ಸರಹದ್ದು ವ್ಯಾಪ್ತಿಯಲ್ಲಿಅಲಂಕಾರಿಕ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಮುನ್ನೆಚ್ಚೆರಿಕೆ ಸಲುವಾಗಿ ಅಗ್ನಿಶಾಮಕ ವಾಹನ/ಸಿಬ್ಬಂದಿ ನಿಯೋಜಿಸಲಾಗಿದೆ. ಬೆಸ್ಕಾಂನಿಂದ ವಿದ್ಯುತ್‌ ಸರಬರಾಜು, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಕರ್ಯಗಳ ಕುರಿತು ಸಂಬಂಧಪಟ್ಟವರಿಂದ ಮಾಹಿತಿ ಪಡೆದುಕೊಂಡರು.

ಭಾನುವಾರ ಸಂಜೆ ಕಡಲೆಕಾಯಿ ಪರಿಷೆ ಉದ್ಘಾಟನೆಯಾದರೆ, ಸೋಮವಾರ ಸಂಜೆ ಕೆಂಪಾಂಬುದಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಇದೊಂದು ಸಾಂಪ್ರದಾಯಿಕ ಕಾರ್ಯಕ್ರಮವಾಗಿದ್ದು, ಪರಿಷೆಗೆ ಕಳೆ ನೀಡಲಿದೆ. ಬ್ಯೂಗಲ್ ರಾಕ್‌ ಉದ್ಯಾನವನ ಮತ್ತು ನರಸಿಂಹಸ್ವಾಮಿ ಉದ್ಯಾನವನದಲ್ಲಿ ನ.20 ರಿಂದ 22ರವರೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Donate Janashakthi Media

Leave a Reply

Your email address will not be published. Required fields are marked *