ಫೆಬ್ರುವರಿ-ಮಾರ್ಚ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಾದ ಉತ್ತರ ಪ್ರದೇಶಕ್ಕೆ ಮತ್ತೆ-ಮತ್ತೆ ಪ್ರಧಾನಿಗಳ ಭೇಟಿ, ಕೋಟಿ-ಕೊಟಿ ರೂ.ಗಳ ಪ್ರಕಟಣೆಗಳ ಜತೆಗೆ ವಿಪಕ್ಷಗಳ ಕಟುಟೀಕೆಗಳು, ಅವುಗಳ ನಡುವೆ ಪುಣ್ಯಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್ ದಂಧೆ, ಮತ್ತು ದ್ವೇಷ ಪ್ರಚಾರ, ಕರ್ನಾಟಕದಲ್ಲಿ ಮತಾಂತರ-ನಿಷೇಧ ಮತ್ತು ಮಹಾಸೋಂಕಿನ ಕರಿನೆರಳಲ್ಲಿ ಇನ್ನೊಂದು ಹೊಸವರ್ಷ ಆರಂಭವಾಗಬೇಕಾದ ಸನ್ನಿವೇಶ-ಇವು ಈ ವಾರ ವ್ಯಂಗ್ಯಚಿತ್ರಕಾರರ ಗಮನ ಸೆಳೆದ ವಿಷಯಗಳು.
2022 ರ ಹೊಸ ವರ್ಷದ ಆಚರಣೆಗಳನ್ನೂ ಕೊರೊನ ನಿರ್ಬಂಧ ಆವರಿಸಿದೆ. ಹೊಸ ರೂಪಾಂತರಿ ಒಮೈಕ್ರಾನ್ ನ ಭಯದ ಹಿನ್ನೆಲೆಯಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಇತ್ಯಾದಿ ಮಾತು ಕೇಳಬರುತ್ತಿದೆ.
ಪಿ.ಮಹಮ್ಮದ್, ಫೇಸ್ ಬುಕ್
ಆರೋಗ್ಯ ಸಮಸ್ಯೆಗಳಿರುವ ಹಿರಿಯ ನಾಗರಿಕರಿಗೆ ಮತ್ತು ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ ‘ಬೂಸ್ಟ್ರರ್ ಡೋಸ್’ ಕೊಡುವುದಾಗಿ ಪ್ರಧಾನಿಗಳು ಡಿಸೆಂಬರ್ 25ರಂದು ಪ್ರಕಟಿಸಿದ್ದಾರೆ.
ಆದರೆ ಡಿಸೆಂಬರ್ 27 ರ ವೇಳೆಗೂ ದೇಶದ ವಯಸ್ಕ ಜನಸಂಖ್ಯೆಯಲ್ಲಿ ಪೂರ್ಣವಾಗಿ ಎರಡೂ ಡೋಸ್ ಲಸಿಕೆ ಪಡೆದವರ ಪ್ರಮಾಣ 42.2% ಮಾತ್ರವೇ ಎಂದು ಅಂಕಿ-ಅಂಶಗಳು ಹೇಳುತ್ತಿವೆ.
“ನಮ್ಮ ಬಳಿ ಈಗ ಇರುವುದು ಯೋಗಿ ಆದಿತ್ಯನಾಥರಿಗೆ
‘ಬೂಸ್ಟರ್ ಡೋಸ್’ಗಳು ಮಾತ್ರ”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿಯೂ ಲಸಿಕೀಕರಣದ ದರ ಮೊದಲವೇ ವಾರಕ್ಕಿಂತಲೂ ಕೆಳಗಿಳಿದಿದೆ ಎಂದೂ ವರದಿಯಾಗಿದೆ -ಸರಾಸರಿ 79ಲಕ್ಷದಿಂದ 63ಲಕ್ಷಕ್ಕೆ !
ಹೊಸ ವರ್ಷದ ಆರಂಭದ ವೇಳೆಗೆ ಎಲ್ಲ ವಯಸ್ಕರಿಗೂ ಎರಡೂ ಡೋಸ್ ಲಸಿಕೆಗಳನ್ನು ಕೊಡಲಾಗುವುದು ಎಂಬ ಗುರಿಯನ್ನು, ನಂತರ ಸದ್ದಿಲ್ಲದೆ 60%ಕ್ಕೆ ಇಳಿಸಲಾಯಿತು. ಆದರೆ ಈಗ ಕಾಣುತ್ತಿರುವ ಲಸಿಕೀಕರಣದ ದರದಲ್ಲಿ ಅದೂ ಕೂಡ ದೂರದ ಮಾತೇ. 42% ವಯಸ್ಕರಿಗೆ ಮಾತ್ರ ಪೂರ್ಣ ಲಸಿಕೀಕರಣ ಸಾಧ್ಯವಾಗಬಹುದಷ್ಟೇ ಎಂದು ಅಂದಾಜು(ಎನ್ಡಿಟಿವಿ.ಕಾಂ, ಡಿ.23)
ಏಕೆಂದರೆ ಈ 60%ದ ಗುರಿಯನ್ನು ತಲುಪಬೇಕಾದರೆ ಪ್ರತಿದಿನ ಸರಾಸರಿ 6.11ಕೋಟಿ ಲಸಿಕೆಗಳನ್ನು ಹಾಕಬೇಕು. ಆದರೆ ಡಿಸೆಂಬರ್ 16ರಿಂದ 22ರ ಅವಧಿಯಲ್ಲಿ ಲಸಿಕೀಕರಣದ ಸರಾಸರಿ ದರ ದಿನಕ್ಕೆ ಕೇವಲ 60ಲಕ್ಷ .
ಅಂದರೆ ಈ ಬಾರಿಯೂ ಬೂಸ್ಟರ್ ಡೋಸ್ ಸಿಗುವುದು ರೂಪಾಂತರಿ ವೈರಸ್ಗೇ’! ವಿಶೇಷವಾಗಿ ಕಳೆದ ವರ್ಷದಂತೆ ಚುನಾವಣಾ ರ್ಯಾಲಿಗಳ ಮೂಲಕ….
ಪಾರ್ಟೀ ಟೈಮ್
ಡೆಲ್ಟಾ ವೈರಸ್ ಒಮೈಕ್ರಾನ್ ವೈರಸ್ಗೆ: “ನನಗೆ ಮಾರ್ಚ್–ಎಪ್ರಿಲ್ 2021ರಲ್ಲಿ ನನ್ನ
ಬೂಸ್ಟರ್ ಡೋಸ್ ಸಿಕ್ಕಿತು. ನಿನಗೆ ನಿನ್ನದು ಫೆಬ್ರವರಿ–ಮಾರ್ಚ್ 2022ರಲ್ಲಿ ಸಿಗಬಹುದು”
(ಸಂದೀಪ ಅಧ್ವರ್ಯು, ಟೈಂಸ್ ಆಫ್ ಇಂಡಿಯ)
***
ಮೇಲೆ ಹೇಳಿದ ವ್ಯಂಗ್ಯಚಿತ್ರಕಾರರು ಚಿತ್ರಿಸಿರುವಂತೆ ಫೆಬ್ರುವರಿ-ಮಾರ್ಚ್ 2022ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಉತ್ತರಪ್ರದೇಶದ ‘ಯೋಗಿ ಆದಿತ್ಯನಾಥರಿಗೆ ಒಂದಲ್ಲ ಹಲವು ಬೂಸ್ಟರ್ ಡೋಸುಗಳನ್ನು ಸ್ವತಃ ಪ್ರಧಾನಿಗಳೇ ಕೊಡುತ್ತಿದ್ದಾರೆ.
ಯುಪಿ +ಯೋಗಿ= ಉಪಯೋಗಿ ಎಂಬ ಹೊಸ ಸೂತ್ರ ವನ್ನು ಅವರು ಕಂಡುಹಿಡಿದಿದ್ದಾರೆ.
ನಮಗೆ ಗೊತ್ತೇ ಇರಲಿಲ್ಲವಲ್ಲ,
ಈ ಮಾಹಿತಿಗಾಗಿ ಥ್ಯಾಂಕ್ಯೂ ಪ್ರಧಾನ ಮಂತ್ರಿಗಳೇ!
ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್
ಶಹಜಾನ್ಪುರದಲ್ಲಿ ಗಂಗಾ ಎಕ್ಸ್ ಪ್ರೆಸ್ ಹೆದ್ದಾರಿಗೆ ಶಂಕುಸ್ಥಾಪನೆ ಮಾಡುತ್ತ ಅವರು ಈ ಹೊಸ ಸೂತ್ರವನ್ನು ಜನಗಳಿಗೆ ತಿಳಿಸಿದ್ದಾರೆ.
ಈ ಹೆದ್ದಾರಿ ಸೇರಿದಂತೆ ಉತ್ತರಪ್ರದೇಶಕ್ಕೆ ಇತ್ತೀಚಿನ ದಿನಗಳಲ್ಲೇ ಒಟ್ಟು ರೂ.1,01,695 ಕೋಟಿ ಮೊತ್ತದ ಪ್ರಾಜೆಕ್ಟ್ ಗಳ ಸುರಿಮಳೆ-
“ಅವರು ನಮ್ಮ ಪ್ರಧಾನಿ”
ಹೆದ್ದಾರಿಗಳು, ಪ್ರಾಜೆಕ್ಟ್ ಗಳು, ಧಾಮಗಳು, ಕಲ್ಯಾಣ ಯೋಜನೆಗಳು…
(ಸುಭಾನಿ, ಡೆಕ್ಕನ್ ಕ್ರಾನಿಕಲ್)
ಇದರಲ್ಲಿ ಎರಡು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳು, ಮತ್ತು ಎರಡು ಎಕ್ಸ್ ಪ್ರೆಸ್ ಹೆದ್ದಾರಿಗಳು ಸೇರಿವೆ. ಇವಕ್ಕೇ 70ಸಾವಿರ ಕೋಟಿ ರೂ.ಗಳು!
ಇವು ಯಾರಿಗೆ ‘ಉಪಯೋಗಿ’ ಎಂದು ಊಹೆಗೆ ಬಿಟ್ಟದ್ದು. ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗಳು ಒತ್ತಟ್ಟಿಗಿರಲಿ, ಈ ಎಕ್ಸ್ ಪ್ರೆಸ್ ಹೆದ್ದಾರಿಗಳಲ್ಲಿ ವಲಸೆ ಕಾರ್ಮಿಕರು ನಡೆದು ಹೋಗಲು ಅವಕಾಶ ಇರುತ್ತದೆಯೋ ಗೊತ್ತಿಲ್ಲ.
ಈ 1 ಲಕ್ಷ ಕೋಟಿ ರೂ.ಗಳು ಎಲ್ಲಿಂದ ಬರುತ್ತವೆ ಎಂಬ ಪ್ರಶ್ನೆ ನಮಗಷ್ಟೇ ಅಲ್ಲ….
“ಉತ್ತರಪ್ರದೇಶ ನಂ.1 ರಾಜ್ಯ”
“ಇವಕ್ಕೆಲ್ಲ ಯಾರು ತೆರುತ್ತಾರೋ!”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
ಈ ನಡುವೆ ಕಳೆದ ಏಳುವರ್ಷಗಳಲ್ಲಿ ಚುನಾವಣೆ ಸಮೀಪಿಸುತ್ತಿರುವಂತೆ ಕಾಣಿಸಿಕೊಳ್ಳುವ ವಿದ್ಯಮಾನ ಈ ಬಾರಿಯೂ ಕಾಣಿಸಿಕೊಳ್ಳಲಾರಂಭಿಸಿದೆ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ (ಐ.ಟಿ,-ಇ.ಡಿ.)ಗಳ ಚುನಾವಣಾ ಡ್ಯೂಟಿ ಆರಂಭವಾಗಿದೆ, ಅಂದರೆ ಸಮಾಜವಾದಿ ಪಕ್ಷದ ಮುಖಂಡರ ಆಪ್ತರ/ಸಹಾಯಕರ ಮೇಲೆ ಐಟಿ-ಇಡಿ ದಾಳಿಗಳು ಆರಂಭವಾಗಿವೆಯಂತೆ!
***
‘ಯುಪಿ-ಯೋಗಿ’ ಉತ್ತರ ಪ್ರದೇಶದಿಂದ ಮತ್ತೊಂದು ಸುದ್ದಿ ಬಂದಿದೆ- ರಾಮಜನ್ಮಭೂಮಿ ಅಯೋಧ್ಯೆಯ ಭೂಹಗರಣದ್ದು. ಸುಪ್ರಿಂ ಕೋರ್ಟ್ ನವಂಬರ್ 9, 2019ರಂದು ರಾಮಮಂದಿರ ನಿರ್ಮಾಣಕ್ಕೆ ಅನುಮತಿಯ ತೀರ್ಪು ನೀಡಿದ ಮೇಲೆ ಶ್ರೀರಾಮನ ನಾಡಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಜೋರಾಗಿದೆಯಂತೆ.
ಪ್ರಭು, ತಾವೇನೋ ಮರ್ಯಾದಾ ಪುರುಷೋತ್ತಮ
ಆಗಿರಬಹುದು, ನಾವೇನೂ ಅಲ್ಲವಲ್ಲ.
(ರಾಜೇಂದ್ರ ಧೋಡಪ್ಕರ್, ಫೇಸ್ ಬುಕ್)
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಇದುವರೆಗೆ ಸುಮಾರು 70 ಎಕ್ರೆ ಜಾಗ ಪಡೆದಿದ್ದರೆ, ರಾಮಮಂದಿರ ಸ್ಥಳದ 5 ಕಿ.ಮೀ. ವ್ಯಾಪ್ತಿಯೊಳಗೆ ಒಬ್ಬ ಶಾಸಕರು, ಮೇಯರ್, ಒಬಿಸಿ ಆಯೋಗದ ಒಬ್ಬ ಸದಸ್ಯರು ತಮ್ಮಸ್ವಂತ ಹೆಸರಿನಲ್ಲಿ ಮತ್ತು ಡಿಸಿ, ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್, ಉಪ ಡಿಜಿಪಿ, ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ರಾಜ್ಯ ಮಾಹಿತಿ ಆಯುಕ್ತರ ಸಂಬಂಧಿಗಳ ಹೆಸರಿನಲ್ಲಿ ಜಮೀನು ಖರೀದಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ತನಿಖಾ ವರದಿ ಹೇಳಿದೆ.
ಈ ಸುದ್ದಿಗೆ ವ್ಯಕ್ತವಾದ ಆಕ್ರೋಶದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರಕಾರ ಈ ಬಗ್ಗೆ ತನ್ನ ತನಿಖೆ ನಡೆಸಿ ಒಂದು ವಾರದ ಒಳಗೆ ವರದಿ ನೀಡುವಂತೆ ಹೇಳಿದೆಯಂತೆ. ಆದರೆ ಅದೇ ಸರಕಾರದ ಒಬ್ಬ ಮಂತ್ರಿಗಳು ಇವು ನಿರಾಧಾರ ಆರೋಪಗಳು ಎಂದಿದ್ದಾರಂತೆ.
ದೇವರು ನಮ್ಮ ಗಿರಾಕಿ, ಮತ್ತು ನಾವು ಒಬ್ಬ ಪ್ರಾಮಾಣಿಕ ಆಸ್ತಿವ್ಯವಹಾರ
ನಡೆಸುವವರಾಗಿ ನಮಗೆ ಸಿಗಬೇಕಾದ್ದನ್ನು ಪಡೆದಿದ್ದೇವೆ ಅಷ್ಟೇ
(ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)
ಹೌದು, 2019ರ ನಂತರದ ನ್ಯೂಇಂಡಿಯಾದಲ್ಲಿ ಇದಕ್ಕೆಲ್ಲ ತನಿಖೆ ನಡೆಸುತ್ತಾರೆಯೇ? ತನಿಖೆ ನಡೆಸಿದರೂ ಏನು ಉಪಯೋಗ?
“ದೇವರೇ, ಭೂಮಿ ಕಬಳಿಸಿದವರಿಗೆ ವನವಾಸವಾಗಲಿ”
“ಬೇಡಪ್ಪಾ! ಅವರು ಅರಣ್ಯ ಭೂಮಿಯನ್ನೇ ಕಬಳಿಸುತ್ತಾರೆ”
(ಇ.ಪಿ.ಉನ್ನಿ, ಇಂಡಿಯನ್ ಎಕ್ಸ್ ಪ್ರೆಸ್)
***
ಈ ಸುದ್ದಿಯೊಂದಿಗೇ ವಿಧಾನಸಭಾ ಚುನಾವಣೆಗಳಿಗೆ ಸಿದ್ಧವಾಗುತ್ತಿರುವ ಇನ್ನೊಂದು ದೇವಭೂಮಿಯಿಂದ ಮತ್ತೊಂದು ಕಳವಳಕಾರೀ ಸುದ್ದಿ ಬಂದಿದೆ. ಉಗ್ರ ದ್ವೇಷ ಭಾಷಣಗಳ ವೀಡಿಯೋಗಳು ವೃರಲ್ ಆಗಿವೆ. ಮಾಜಿ ಪ್ರಧಾನಿಗಳ ವಿರುದ್ಧವೂ ಭಯೋತ್ಪಾದಕ ಮಾತುಗಳು ಹಾರಾಡಿದ್ದರೂ ಹಾಲಿ ಪ್ರಧಾನಿಗಳು ಮೌನವಾಗಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ
“ದ್ವೇಷಿಸಿ! ಕೊಲ್ಲಿರಿ! ಸಾಯಿಸಿ!”
ಸ್ಯಾನಿಟರಿ ಪ್ಯಾನಲ್ಸ್, ಫೇಸ್ ಬುಕ್
ಡಿಸೆಂಬರ್ 17ರಿಂದ 19 ರ ವರೆಗೆ ಹರಿದ್ವಾರದಲ್ಲಿ ನಡೆದ ‘ಧರ್ಮ ಸಂಸದ್’ನಲ್ಲಿ ಸತತವಾಗಿ ಮೂರು ದಿನ, ಹಿಂದೂಗಳು ಶಸ್ತ್ರ ಹಿಡಿಯಬೇಕು, ಮುಸ್ಲಿಮರ ವಿರುದ್ಧ ಯುದ್ಧ ನಡೆಸಬೇಕು, ಪ್ರಭಾಕರನ್ ಆಗಬೇಕು, ಬಿಂದ್ರನ್ ವಾಲೆ ಆಗಬೇಕು ಎಂದೆಲ್ಲ ‘ಯತಿ’ಗಳು, ‘ಸಾಧ್ವಿ’ಗಳು ಮುಂತಾದ ಭಾಷಣಕಾರರು ಆಹ್ವಾನ ಮಾಡಿದರು ಎಂದು ವ್ಯಾಪಕವಾಗಿ ವೈರಲ್ ಆಗಿರುವ ವೀಡಿಯೋಗಳು ತೋರಿಸುತ್ತಿವೆ ಎನ್ನಲಾಗಿದೆ. ಆಳುವ ಪಕ್ಷದ ಒಬ್ಬ ಮುಖಂಡರೂ ಈ ‘ಧರ್ಮಸಂಸದ್’ನಲ್ಲಿ ಭಾಗವಹಿಸಿದ್ದರು ಎಂದೂ ವರದಿಯಾಗಿದೆ.
ಆದರೂ ಪೋಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿದ್ದು ನಾಲ್ಕು ದಿನಗಳ ನಂತರವೇ. ಅದೂ, ಮೊದಲಿಗೆ ಇತ್ತೀಚೆಗೆ ಹಿಂದೂಧರ್ಮಕ್ಕೆ ಮತಾಂತರಗೊಂಡಿರುವ ಒಬ್ಬ ಭಾಷಣಕಾರರ ಮೇಲೆ ಮಾತ್ರ! ಈ ಬಗ್ಗೆಯೂ ಟೀಕೆಗಳು ಬಂದ ಮೇಲೆ ಮತ್ತಿಬ್ಬರ ಹೆಸರನ್ನೂ ಸೇರಿಸಲಾಗಿದೆಯಂತೆ. ಆದರೆ ಒಂದು ವಾರ ಕಳೆದರೂ ಯಾವ ಬಧನವೂ ಆಗಿಲ್ಲ, ತನಿಖೆ ಸಾಗಿದೆಯಂತೆ,,. ಗುಜರಾತಿನ ಮುನ್ವವರ್ ಫಾರೂಕಿಯಂತೆ ಜೋಕೇನೂ ಮಾಡಿಲ್ಲವಲ್ಲ, ಕೇವಲ ದ್ವೇಷ ಭಾಷಣ ತಾನೇ…
“ನಿಮಗೆ ತಪ್ಪು ತಿಳುವಳಿಕೆ ಆಗಿದೆ!
ನಾನೇನೂ ಜೋಕ್ ಉದುರಿಸುತ್ತಿರಲಿಲ್ಲ, ಸಾರ್!’
“ನಾನು ದ್ವೇಷವನ್ನು ಹರಡುತ್ತಿದ್ದೆ ಅಷ್ಟೇ!”
(ಸತೀಶ್ ಆಚಾರ್ಯ, ಫೇಸ್ ಬುಕ್)
***
ಈ ಘಟನೆಯಿಂದ ಹಿಂಸಾಚಾರವೇನೂ ನಡೆದಿಲ್ಲವಾದ್ದರಿಂದ ಯುಎಪಿಎ ಬಳಸಿಲ್ಲ ಎಂದು ಉತ್ತರಾಖಂಡದ ಡಿಜಿಪಿ ಸಮರ್ಥಿಸಿಕೊಂಡಿದ್ದಾರೆ.
ಮುನವ್ವರ್ ಜೋಕ್ ಉದುರಿಸುವ ಮೊದಲೇ ಪೋಲಿಸ್:
“ಅವನನ್ನು ಬಂಧಿಸಿ! ಅವನ ಶೋಗಳನ್ನು ರದ್ದು ಮಾಡಿ!”
ಹತ್ಯಾಕಾಂಡದ ಸಾರ್ವಜನಿಕ ಭಾಷಣಗಳ ನಂತರ–ಪೋಲಿಸ್:
“ಹಿಂಸಾಚಾರ ಭುಗಿಲೇಳುವ ವರೆಗೆ ಕಾಯೋಣ, ಆಗ ನಾವು ಹಿಂಸಾಚಾರ
ಮತ್ತು ದ್ವೇಷ ಭಾಷಣದಿಂದ ಪೀಡಿತರಾದವರನ್ನು ಬಂಧಿಸಬಹುದು”
(ಆಲ್ಮೋಸ್ಟ್ ಬಾಬ್ಬಿ, ಟ್ವಿಟರ್)
ಇದಕ್ಕೆ ಮೊದಲು ಗೃಹ ವ್ಯವಹಾರಗಳ ಮಂತ್ರಾಲಯ ದಂಡ ಶಾಸನಗಳಲ್ಲಿ “ರಾಷ್ಟ್ರ-ವಿರೋಧಿ’ ಎಂದರೇನು ಎಂಬ ಬಗ್ಗೆ ನಿರ್ವಚನೆ ಕೊಟ್ಟಿಲ್ಲ ಎಂದು ಸಂಸತ್ತಿನಲ್ಲಿ ಹೇಳಿತ್ತು.
ಬಹುಶಃ ದ್ವೇಷ ಭಾಷಣಗಳ ಬಗ್ಗೆಯೂ ಕೊಟ್ಟಿಲ್ಲವೇನೋ…
“ಒಂದು ನಿರ್ವಚನೆಯ ಕೊರತೆಯಿಂದಾಗಿ
ನಾವು ಅವರ ಧರಿಸುವ ಬಟ್ಟೆಯನ್ನು
ನೋಡಿ ಮುಂದುವರೆಯುತ್ತೇವೆ!”
(ಆರ್.ಪ್ರಸಾದ್, ಇಕನಾಮಿಕ್ ಟೈಮ್ಸ್)
***
ಇಲ್ಲಿ ಕರ್ನಾಟಕದಲ್ಲೂ ಮುಖ್ಯಮಂತ್ರಿಗಳು ಪ್ರಧಾನಿಗಳ ‘ಉಪಯೋಗಿ’ ಸರ್ಟಿಫಿಕೇಟಿಗೆ ಅರ್ಹರಾಗುತ್ತಿದ್ದಾರೆ.
***
ಕೊನೆಯದಾಗಿ, ಹಣಕಾಸು ಮಂತ್ರಿಗಳು ಅಗತ್ಯ ವಸ್ತುಗಳ ಬೆಲೆಯೇರಿಕೆಯ ಸಮಸ್ಯೆಯನ್ನು ಕೈಗೆತ್ತಿಕೊಳ್ಳುತ್ತಾರಂತೆ.. ಹೇಗೆ? ಈ ವ್ಯಂಗ್ಯಚಿತ್ರಕಾರರ ಊಹೆ ಹೀಗಿದೆ:
“ನನ್ನ ಕುಟುಂಬ ಈರುಳ್ಳಿ ತಿನ್ನುವುದಿಲ್ಲ. ಈಗ ನಾನು
ಟೊಮೆಟೊ, ಬೇಳೆ, ಅನ್ನ ತಿನ್ನುವುದನ್ನೂ ನಿಲ್ಲಿಸುತ್ತೇನೆ..”
(ಪಂಜು ಗಂಗೊಳ್ಳಿ, ಫೇಸ್ ಬುಕ್)
ಮತ್ತು…. ಸಂಸತ್ತು ಈಗಿನ ಪರಂಪರೆಯಂತೆ ತರಾತುರಿಯಿಂದ ಮತ್ತೊಂದು ತಿದ್ದುಪಡಿಯನ್ನು ಪಾಸು ಮಾಡಿ, ವೋಟರ್ ಐಡಿ ಯನ್ನು ಆಧಾರ್ ನೊಂದಿಗೆ ಜೋಡಿಸಿದೆ. ಆದರೆ ಹಸಿವಿನ ಸೂಚ್ಯಂಕವನ್ನು ಮತ್ತು ನಿರುದ್ಯೋಗ ಮಾಹಿತಿಯನ್ನು ವೋಟರ್ ಐಡಿ ಮತ್ತು ಆಧಾರ್ ನೊಂದಿಗೆ ಏಕೆ ಜೋಡಿಸಬಾರದು ಎಂದು ಈ ವ್ಯಗ್ಯಚಿತ್ರಕಾರರು ಪ್ರಶ್ನಿಸುತ್ತಾರೆ:
ಸತೀಶ್ ಆಚಾರ್ಯ, ಫೇಸ್ ಬುಕ್