ಕಾರಿಡಾರ್‌ ರಸ್ತೆಗೆ ಭೂಸ್ವಾದೀನ: ನ್ಯಾಯ ಸಮ್ಮತ ಪರಿಹಾರಕ್ಕೆ ಸಂತ್ರಸ್ತರ ಪ್ರತಿಭಟನೆ

ಕೋಲಾರ: ಬೆಂಗಳೂರು-ಚೆನ್ನೈ ಕಾರಿಡಾರ್ ರಸ್ತೆಗೆ ಜಿಲ್ಲೆಯಲ್ಲಿ ಭೂಸ್ವಾದೀನ ಪಡಿಸಿಕೊಂಡಿರುವ ಜಮೀನುಗಳಿಗೆ ನ್ಯಾಯ ಸಮ್ಮತವಾದ ಪರಿಹಾರ ನೀಡುವಂತೆ ಒತ್ತಾಯಿಸಿ ಜಮೀನು ಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕೆಪಿಆರ್ ಎಸ್ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತರ ಜಮೀನನ್ನು ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ರಸ್ತೆ ನಿರ್ಮಾಣಕ್ಕಾಗಿ ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಐದು ತಾಲ್ಲೂಕುಗಳಲ್ಲಿ ಸರಿಸುಮಾರು 65 ಗ್ರಾಮಗಳ ನೂರಾರು ರೈತರ ಜಮೀನುಗಳನ್ನು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೇಂದ್ರ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ 2016 ರಲ್ಲಿ ಜಮೀನುಗಳನ್ನು ವಶಪಡಿಸಿಕೊಂಡಿರುವ ಆದೇಶ ಮಾಡಿದ್ದಾರೆ ಭೂಸ್ವಾಧೀನ ಕಾಯ್ದೆ 2013 ಜಾರಿಯಲ್ಲಿ ಇದ್ದರೂ ಸಹ ಇದರ ಅಡಿಯಲ್ಲಿ ಭೂಸ್ವಾಧೀನಕ್ಕೆ ಹೋಗದೇ ಹಳೆಯ ರೈತ ವಿರೋಧಿ ರಾಷ್ಟ್ರೀಯ ಹೆದ್ದಾರಿಗಳ ಕಾಯ್ದೆ 1956 ಅಡಿಯಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿದ್ದು, ರೈತರ ಜಮೀನಿಗೆ ಮಾರುಕಟ್ಟೆ ದರ’’ ನಿಗದಿಪಡಿಸುವ ಬದಲು ರಾಜ್ಯ ಸರ್ಕಾರದ ಮಾರ್ಗಸೂಚಿ ದರ ಆಧಾರದಲ್ಲಿ ಪರಿಹಾರ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಹೊರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕೊಳತೂರು ಗ್ರಾಮದ ಜಮೀನಿಗೆ ಮಾರ್ಗಸೂಚಿ ದರ ಒಂದ ಎಕರೆಗೆ 1.10 ಕೋಟಿ ರೂ. ನಿಗದಿಯಾಗಿದ್ದು, ಕೋಲಾರ ಜಿಲ್ಲೆಯ ಅನೇಕ ಗ್ರಾಮಗಳ ಜಮೀನಿಗೆ ಮಾರ್ಗಸೂಚಿ ದರ ಒಂದು ಎಕರೆಗೆ ಕೇವಲ 1 ಲಕ್ಷ ದಿಂದ 3-4 ಲಕ್ಷ ರೂ.ಗಳಾಗಿದೆ. ಇದು ಸಾಲದೂ ಎಂಬಂತೆ ಪಿ – ನಂಬರ್ ಜಮೀನುಗಳಿಗೆ ಮತ್ತು ಬಗರ್ ಹುಕ್ಕುಂ ಸಾಗುವಳಿ ಭೂಮಿಗೆ ಪರಿಹಾರ ನಿರಾಕರಿಸಲಾಗುತ್ತಿದೆ ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸರಕಾರವೇ ಕಡಿಮೆ ಪರಿಹಾರ ಸಿಗುವ ಗ್ರಾಮಗಳ ರೈತರಿಗೆ ನ್ಯಾಯಸಮ್ಮತವಾದ ಪರಿಹಾರವನ್ನು ನಿಗದಿ ಮಾಡುವ ಮಾನದಂಡಗಳನ್ನು ರೂಪಿಸಿ ಗ್ರಾಮದಿಂದ ಗ್ರಾಮಕ್ಕೆ ಜಮೀನಿನ ದರಗಳಲ್ಲಿ ಇರುವ ಅಗಾದ ಅಂತರವನ್ನು ಸರಿಪಡಿಸಬೇಕು
ಪಿ – ನಂಬರ್ ಗಳು ಮತ್ತು ಇನಾಮ್ತಿ ಜಮೀನುಗಳ ಸಮಸ್ಯೆಗಳನ್ನು ಬಗೆಹರಿಸಿ ಸಂತ್ರಸ್ಥ ರೈತರಿಗೆ ಪರಿಹಾರ ನೀಡಬೇಕು.ಬಗರ್ ಹುಕ್ಕುಂ ಸಾಗುವಳಿ ಭೂಮಿಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಸಂದರ್ಭದಲ್ಲಿ ನೀಡಿರುವ ಮಾದರಿಯ ಪರಿಹಾರ ನೀಡಬೇಕು ಮರ ಗಿಡಗಳು, ಪಂಪ್‍ಹೌಸ್, ಪೈಪ್ ಲೈನ್, ತೆರೆದ ಬಾವಿಗಳು, ಕೋಳಿ ಫಾರಂಗಳಿಗೆ ಮತ್ತು ಬೋರ್‍ವೆಲ್‍ಗಳಿಗೆ ತಾರತಮ್ಯವಿಲ್ಲದೇ ನ್ಯಾಯಸಮ್ಮತವಾದ ಮೌಲ್ಯಗಳನ್ನು ನಿಗದಿ ಮಾಡಬೇಕು. ಅದಲು ಬದಲು ಆಗಿರುವ ಮನೆ ಮತ್ತು ಇತರೆ ಮಾಲ್ಕಿಗಳನ್ನು ಸರಿಪಡಿಸಬೇಕು ಎಂದರು.

ಭೂಮಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ರೈತರಿಗೆ ಪರಿಹಾರದ ಜೊತೆಗೆ ಪರ್ಯಾಯ ಕೃಷಿ ಭೂಮಿಯನ್ನು ನೀಡಬೇಕು ಎಕ್ಸ್ ಪ್ರೆಸ್ ಹವೈ ನಿರ್ಮಾಣವಾಗುವ ಸಂದರ್ಭದಲ್ಲಿ ಸರ್ವೀಸ್ ರಸ್ತೆಗಳನ್ನು ಅಳಡಿಸಲು ಮತ್ತು ಅಗತ್ಯ ಇರುವ ಕಡೆಗಳಲ್ಲಿ ಕೆಳ ಸೇತುವೆ, ಮೇಲ್ಸತುವೆ ನಿರ್ಮಾಣ ಮಾಡಬೇಕು ಈ ರಸ್ತೆಗಾಗಿ ಸಾವಿರಾರು ಗಿಡ ಮರಗಳು ನಾಶವಾಗಲಿದೆ, ಇದಕ್ಕೆ ಪರ್ಯಾಯವಾಗಿ ಹೆದ್ದಾರಿ ಪ್ರಾಧಿಕಾರ ಮರ ಬೆಳೆಸಲು ಅದ್ಯತೆ ನೀಡಬೇಕು ಐತಾಂಡಹಳ್ಳಿ ಗ್ರಾಮದಲ್ಲಿ ಜಂಕ್ಷನ್‍ಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರ್ಯಾಯವಾಗಿ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದರು.

ಹೋರಾಟದ ನೇತೃತ್ವವನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ್, ಕೆಪಿಆರ್ ಎಸ್ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಸಿಐಟಿಯು ಜಿಲ್ಲಾ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಮುಖಂಡರಾದ ಕೆ.ಎನ್.ಮುನಿವೆಂಕಟೇಗೌಡ, ಎಂ. ಬಾಬು, ಗಂಗಮ್ಮ, ಎನ್ ಎನ್ ಶ್ರೀರಾಮ್, ವಿ.ನಾರಾಯಣರೆಡ್ಡಿ, ದೇವರಾಜ್, ಕಲಾವಿದ ಸ್ವಾಮಿ, ಗೋವಿಂದಪ್ಪ, ವಿ. ರಮೇಶ್, ಅಮರೇಶ್, ಜಿ.ಎಂ.ವೆಂಕಟೇಶ್, ಅಪ್ಪಾಜಿಗೌಡ, ರೈತರು ಇದ್ದರು.

Donate Janashakthi Media

Leave a Reply

Your email address will not be published. Required fields are marked *