ಕಾರ್ಪೋರೇಟ್ ಲಾಭಕೇಂದ್ರಿತ ನೀತಿಗಳೆ ಜನತೆ ಸಂಕಷ್ಟಕ್ಕೆ ಕಾರಣ

ತುಮಕೂರು ಜ 24 : ಕೇಂದ್ರ–ರಾಜ್ಯ ಸರ್ಕಾರಗಳು ಸಂವಿಧಾನ ಬದ್ದ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಗಾಳಿಗೆ ತೂರಿ, ಬೆರಳೆಣಿಕೆಯ ಕಾರ್ಪೋರೆಟ್ / ಬಂಡವಾಳಗಾರರ ಲಾಭವನ್ನು ಕೇಂದ್ರಿಕರಿಸಿ ಕೋಟಿಗಟ್ಟಲೆ ರೈತ- ಕಾರ್ಮಿಕರು- ಜನ ಸಮಾನ್ಯರ ಸಂಕಷ್ಟಕ್ಕೆ ದೂಡುವಂತ ನೀತಿಗಳನ್ನು ಜಾರಿಗೆ ಹೊರಟಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್‌ ರವರು ಅಪಾಧಿಸಿದರು.

ಸಿಐಟಿಯು- ಪ್ರಾಂತರೈತ ಸಂಘ, ಎಸ್. ಎಫ್.ಐ. ಡಿವೈಎಫೈ ಸಂಘಟನೆಗಳು ಜಂಟಿಯಾಗಿ ಅಯೋಜಿಸಿದ್ದ ಜಂಟಿ ಅರಿವಿನ ಜಾಥವನ್ನು ಗುಬ್ಬಿ ತಾಲ್ಲುಕಿನ ಚೇೆಳೊರಿನಲ್ಲಿ ಉಧ್ಘಾಟಿಸಿ ಮಾತನಾಡುತ್ತಾ,  ಜನತೆಯ ಸಂಕಷ್ಟಗಳ ಬಗ್ಗೆ ಒಗ್ಗೊಡಿ ಹೋರಾಡದಂತೆ ಜಾತಿ, ಧರ್ಮ ,  ದೇವರು ಹೆಸರಲ್ಲಿ ಜನತೆಯನ್ನು ಕಿತ್ತಾಟಕ್ಕೆ ಹಚ್ಚಿರುವ ಶಕ್ತಿಗಳ ಬಗ್ಗೆ ಜನತೆ ಎಚ್ಚರಿಕೆಯಿಂದ ಇರುವಂತೆ ಹಾಗು ರೈತ–ಕಾರ್ಮಿಕರ ಚಳುವಳಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ನಂತರದಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಜ್ಜಪ್ಪನವರು ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಖಂಡಿಸಿದರು. ಅಲ್ಲದೆ ಬಗೇರ್ ಹುಕುಂ ಸಾಗುವಳಿದಾರರಿಗೆ ಹಲವು ದಶಕಗಳಿಂದ ಸಾಗುವಳಿ ಚೀಟಿ ನೀಡದೆ ಪೋಲಿಸ್ – ಅರಣ್ಯಇಲಾಖೆಯ ಅಧಿಕಾರಿಗಳ ಬಳಸಿ ತೊಂದರೆ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ : ಕೃಷಿ ಕಾಯ್ದೆ, ಕಾರ್ಮಿಕ ಸಂಹಿತೆಗಳ ವಿರುದ್ಧ : ಜನಜಾಗೃತಿ ಜಾಥಾಕ್ಕೆ ಚಾಲನೆ
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ ಸುಬ್ರಮಣ್ಯ ಮಾತನಾಡಿ ಉದ್ಯೋಗ ಸೃಷ್ಟಿ, ಇರಲಿ, ಇದ್ದ ಉದ್ಯೋಗಗಳೆ ಇಲ್ಲದಂತಾಗಿ ಗ್ರಾಮಿಣ ಯುವ ಜನತೆ ಕೆಲಸ ಕಳೆಕೋಂಡು ಹಳ್ಳಿ ಸೇರಿದೆ ಈ ವ್ಯವಸ್ತಗೆ ಸರ್ಕಾರದ ನೀತಿಗಳು ಕಾರಣ ಎಂದರು, ಸಭೆಯಲ್ಲಿ ಪ್ರಾಂತರೈತ ಸಂಘದ ನರಸಿಂಹಮೂರ್ತಿ, ಅಂಗನವಾಡಿ ನೌಕರರ ಸಂಘದ ವಿರೂಪಾಕ್ಷಮ್ಮ , ಗಾಮ ಪಂಚಾಯತ್ ನೌಕರ ಸಂಘದಜಿಲ್ಲಾ ಪ್ರಧಾನ ಕಾರ್ಯಧರ್ಶಿ ನಾಗೇಶ್,ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ : ರೈತ ಜಾಥಾಗೆ ಪೊಲೀಸರಿಂದ ಅಡ್ಡಿ

ಜಾಥ ತಂಡವು ,ಚೇಳೊರು, ಸಾತೆನಹಳ್ಳ, ಮಂಚಲದೋರೆ, ಹೋಸಕರೆ, ಆಳಿಲಘಟ್ಟ, ಹಾಗಲವಾಡಿ, ತ್ಯಾಗಟೂರು, ಎಂ, ಎನ್‌ಕೋಟೆ, ನಿಟ್ಟೂರು, ಗುಬ್ಬಿಗಳಲ್ಲಿ ಕರ ಪತ್ರ ಹಂಚಲಾಯಿತು. ಅಲ್ಲದೆ  ಬೀದಿಬದಿ ಸಭೆಗಳನ್ನು ನಡೆಸಿತು, ನಿಟ್ಟೂರು ಗೆ ಅಗಮಿಸಿದ ಜಾಥತಂಡವನ್ನು ರಾಜ್ಯರೈತ ಸಂಘದ ಪದಾಧಿಕಾರಿಗಳು ಸ್ವಾಗತಿಸಿದರು, ನಿಟ್ಟೂರು ಬಸ್ ನಿಲ್ದಾಣದ ಮುಂಭಾಗದ ಸಭೆಯಲ್ಲಿ ರೈತ ಮುಖಂಡ ವೆಂಕಟಗೌಡ, ಮಾತನಾಡಿ ೨೬ ಜನವರಿಯ ರೈತರ ಪರೇಡ್ ಭಾಗವಾಗಿ ಟ್ಯಾಕ್ಟರ್‌ಗಲ್ಲಿ ಬೆಂಗಳೂರು ಚಲೋ ಚಳುವಳಿ ಯನ್ನು ಯಶಸ್ವಿಗೆ ಸಹಕಾರಿಸಲು ವಿನಂತಿಸಿದರು. ಸಿಐಟಿಯು ತಾಲ್ಲುಕ್‌ ಅಧ್ಯಕ್ಚೆ ಶ್ರೀಮತಿ ಅನಸೂಯ, ಮಾತನಾಡಿ ಈ ಅವಧಿಯಲ್ಲಿ ಹೆಚ್ಚುತ್ತಿರುವ ಮಹಿಳೆಯರ –ದಲಿತರ–ಅಲ್ಪ ಸಂಖ್ಯಾತರ ಮೇಲಿನ ಧಾಳಿಯನ್ನು ಖಂಡಿಸಿದರಲ್ಲದೆ ಇಂತಹ ಪ್ರಕರಣಗಳನ್ನು ಸರ್ಕಾರಗಳು ಗಂಭಿರವಾಗಿ ಪರಿಗಣಿಸುವಂತೆ ಆಗ್ರಹಸಿದರು.

ಇದನ್ನೂ ಓದಿ : ರೈತ ಕಾರ್ಮಿಕರ ಹೋರಾಟ ಬೆಂಬಲಿಸಿ ಸಂಚರಿಸುತ್ತಿದೆ ಜಾಥಾ

Donate Janashakthi Media

Leave a Reply

Your email address will not be published. Required fields are marked *