ಕೋರೊನ ಸೋಂಕಿತರ ಸಂಖ್ಯೆ ಹೆಚ್ಚಳ

ದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗವು ಆರಂಭದಿಂದೀಚೆಗೆ ದೇಶದಲ್ಲಿ ಅತಿ ಹೆಚ್ಚು ವರದಿಯಾಗಿದೆ.

ಭಾನುವಾರ ಒಂದು ಲಕ್ಷಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಪತ್ತೆಯಾಗಿದೆ. 1,03,558 ಹೊಸ ಪ್ರಕರಣಗಳ ಏರಿಕೆಯ ನಂತರ ದೇಶದಲ್ಲಿ ಒಟ್ಟು ಸೋಂಕು ಸಂಖ್ಯೆ 1,25,89,067 ಕ್ಕೆ ಏರಿಕೆಯಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ 16 ರಂದು 97,894 ಪ್ರಕರಣಗಳನ್ನು ದಾಖಲಿಸಲಾಗಿದೆ, ನಂತರ ಮತ್ತೆ ಅದೇ ರೀತಿಯಲ್ಲಿ ಪ್ರಕರಣಗಳು ವರದಿಯಾಗುತ್ತಿದೆ.

ಇದನ್ನು ಓದಿ : ದಾಖಲೆ ಮಟ್ಟಕ್ಕೆ ಏರಿಕೆಯಾದ ಕೋವಿಡ್‌ ಪ್ರಕರಣ

ಭಾರತದಲ್ಲಿ ಭಾನುವಾರ ಪ್ರಕರಣಗಳು 103,558 ಪ್ರಕರಣಗಳಲ್ಲಿ 57,700 ಕ್ಕೂ ಹೆಚ್ಚು ಸೋಂಕುಗಳು ಮಹಾರಾಷ್ಟ್ರದಲ್ಲಿಯೇ ವರದಿಯಾಗಿವೆ. ರೋಗ ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ರಾತ್ರಿ ಕರ್ಫ್ಯೂ, ವಾರಾಂತ್ಯದ ಲಾಕ್ಡೌನ್ ಮತ್ತು ಹಗಲಿನ ನಿಷೇಧ ಸೇರಿದಂತೆ ಹೊಸ ನಿರ್ಬಂಧಗಳನ್ನು ಹೊರಡಿಸಿದೆ.  ಬ್ರೇಕ್ ದಿ ಚೈನ್  ಎಂದು ಹೆಸರಿಸಲಾಗಿದೆ, ಈ ನಿರ್ಬಂಧಗಳು ಸೋಮವಾರ ರಾತ್ರಿ 8 ರಿಂದ ಏಪ್ರಿಲ್ 30 ರವರೆಗೆ ಜಾರಿಗೆ ಬರುತ್ತವೆ. ರಾಜ್ಯದ ಎರಡು ನಗರಗಳಲ್ಲಿ  ಏಕದಿನದಲ್ಲೇ  ಪುಣೆ  12,472 ಮತ್ತು ಮುಂಬೈ 11,163 ಹೊಸ ಪ್ರಕರಣಗಳು ಪತ್ತೆಯಾಗಿವೆ, ಮುಂಬೈ  ನಗರದಲ್ಲಿ ಒಟ್ಟು 4,52,445 ಪ್ರಕರಣಗಳಿವೆ.

ಇದನ್ನು ಓದಿ :  ಕೋವಿಡ್‌ ಪ್ರಕರಣಗಳ ಹೆಚ್ಚಳ: ಸಿಎಂ ಉದ್ಧವ್‌ ಠಾಕ್ರೆ ಅವರಿಂದ ಇಂದು ಮಹತ್ವ ಭಾಷಣ

ಅದೇ ರೀತಿ  ದೆಹಲಿ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ಒಂದೇ ದಿನ ತಲಾ 4,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದರೆ, ಛತ್ತೀಸ್ಗಡ ದಲ್ಲಿ ಎರಡನೇ ದಿನ 5,000 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಈಗ 7.4 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಭಾನುವಾರ 478 ಸಾವುಗಳಲ್ಲಿ 222 ಸಾವುಗಳು ಮಹಾರಾಷ್ಟ್ರದಲ್ಲೇ ಸಂಭವಿಸಿವೆ.

Donate Janashakthi Media

Leave a Reply

Your email address will not be published. Required fields are marked *