– ಪ್ರತಿರೋಧ ಮತ್ತು ಪರಿಹಾರ ಕುರಿತು ವೆಬಿನಾರ್
– ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆಯ ವೆಬಿನಾರ್ ಸರಣಿ
ಜನಶಕ್ತಿ ವೆಬ್ ಪತ್ರಿಕೆಯ ಲೋಕಾರ್ಪಣೆ ಮತ್ತು ವೆಬಿನಾರ್ ನ ಸರಣಿ ಉದ್ಗಾಟನೆಯನ್ನು ಕೇರಳದ ಸಚಿವೆ ಶೈಲಜಾ ಟೀಚರ್ ರವರು ಈಗಾಗಲೇ ನೇರೆವೆರಿಸಿದ್ದಾರೆ. ಈ ಸರಣಿ ವೆಬಿನಾರ್ ಭಾಗವಾಗಿಯೇ “ಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು ನಂತರ” ಈ ಥೀಮ್ ಅಡಿಯಲ್ಲಿ ‘ಕೊರೋನಾ ಕಾಲದಲ್ಲಿ ಜೀವನದ ಮತ್ತು ಜೀವನೋಪಾಯದ ಹಕ್ಕಿನ ಮೇಲೆ ದಾಳಿ, ಪ್ರತಿರೋಧ ಮತ್ತು ಪರಿಹಾರಗಳು’ ಎಂಬ ವಿಷಯದ ಕುರಿತು ಅಕ್ಟೋಬರ್ 10 ಸಂಜೆ 5 ಗಂಟೆಗೆ ವೆಬಿನಾರ್ ನಡೆಯಲಿದೆ.
ಈ ವೆಬಿನಾರ್ನ ದಿಕ್ಸೂಚಿ ಭಾಷಣವನ್ನು ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿಯಾದ ತೀಸ್ತಾ ಸೆಟಲ್ವಾಡ್ ಮಾಡಲಿದ್ದು, ವೆಬಿನಾರ್ ಅಧ್ಯಕ್ಷತೆಯನ್ನು ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್ ಹೆಚ್.ಎನ್. ನಾಗಮೋಹನ ದಾಸ್ ವಹಿಸಲಿದ್ದಾರೆ.
ಈ ಸರಣಿ ವೆಬಿನಾರ್ ನಲ್ಲಿ ‘ನಾಗರಿಕ ಜೀವನದ ಹಕ್ಕು‘ ಈ ವಿಷಯದ ಕುರಿತು ಚಿಂತಕರಾದ ಶಿವಸುಂದರ್ ರವರು ಮಾತನಾಡಲಿದ್ದು, ‘ರೈತರ ಹಕ್ಕು‘ ಕುರಿತಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾದ ಯು.ಬಸವರಾಜ ಮಾತನಾಡಲಿದ್ದಾರೆ. ‘ಕಾರ್ಮಿಕ ಹಕ್ಕು‘ ಕುರಿತು ಸಿಐಟಿಯುನ ರಾಜ್ಯ ಕಾರ್ಯದರ್ಶಿಯಾದ ಕೆ.ಎನ್ ಉಮೇಶರವರು ಮಾತನಾಡಲಿದ್ದಾರೆ. ‘ಉದ್ಯೋಗದ ಹಕ್ಕು‘ ವಿಷಯದ ಕುರಿತಾಗಿ ಡಿವೈಎಫ್ಐನ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ರವರು ಮಾತನಾಡಲಿದ್ದಾರೆ. ಹಾಗೇಯೆ ‘ಸಾಮಾಜಿಕ ಭದ್ರತೆ’ ಯ ಕುರಿತಾಗಿ ಸಿವಿಕ್ ಸಂಸ್ಥೆಯ ಮುಖ್ಯಸ್ಥರಾದ ಕಾತ್ಯಾಯಿನಿ ಚಾಮರಾಜ್ ರವರು ಮಾತನಾಡಲಿದ್ದಾರೆ. ‘ಜಿಡಿಪಿ ಕುಸಿತ‘ ಕುರಿತಾಗಿ ಹಂಪಿ ವಿ.ವಿ. ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಚಂದ್ರಪೂಜಾರಿ ಮಾತನಾಡಲಿದ್ದಾರೆ.
ಈ ವೆಬಿನಾರ್ ಜನಶಕ್ತಿ ಮೀಡಿಯಾದ ಯುಟ್ಯೂಬ್ , ಫೇಸ್ ಬುಕ್ ಮೂಲಕವು ವಿಕ್ಷಿಸಬಹುದು.
ವೆಬಿನಾರ್ ಐಡಿ : 88510974931
ಪಾಸ್ ವರ್ಡ್ :430314
ಸಮಯ : ಅಕ್ಟೋಬರ್ 10, ಸಂಜೆ 5.00ಕ್ಕೆ
ಈ ಲೋಕಾರ್ಪಣೆ ಸರಣಿ ಕಾರ್ಯಕ್ರಮಗಳ ಸಾಮಾನ್ಯ ಥೀಮ್ ಆಗಿರುತ್ತದೆ. ಈ ಸಾಮಾನ್ಯ ಥೀಮ್ ಅಡಿಯಲ್ಲಿ ಹಲವು ಉಪಥೀಮ್ ಗಳ ಕುರಿತು ಬರಹ, ಅಡಿಯೊ/ವಿಡಿಯೊ ಪ್ರತಿಕ್ರಿಯೆಗಳ ಮತ್ತು ವೆಬಿನಾರ್ ನ ಮೂಲಕ ಸಂವಾದ ನಡೆಸಲಾಗುತ್ತದೆ. ಸಾರ್ವಜನಿಕ ಆರೋಗ್ಯ, ಮಾನವ ಹಕ್ಕುಗಳು, ಸಾಮಾಜಿಕ ಭದ್ರತೆ, ವೈಜ್ಞಾನಿಕ ಮನೋವೃತ್ತಿ, ಪ್ರದರ್ಶನ ಕಲೆಗಳು, ರ್ಯಾಯ ಮಾಧ್ಯಮ – ಇವು ಉಪಥೀಮ್ ಗಳಾಗಿರುತ್ತವೆ. ಈ ವಿಷಯಗಳ ಕುರಿತು ಈಗಾಗಲೇ ಬರಹ, ಅಡಿಯೊ/ವಿಡಿಯೊ ಪ್ರತಿಕ್ರಿಯೆಗಳು ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಲಾರಂಭಿಸಿವೆ.