ಧಾರವಾಡ | ಢಾಬಾದಲ್ಲಿ ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿರುವ ಆರೋಪ

ಧಾರವಾಡ: ಅಡುಗೆ ಕಾರ್ಮಿಕನ ಕಾಲಿಗೆ ಚೈನಿಂದ ಕಟ್ಟಿರುವಂತಹ ಘಟನೆ ಧಾರವಾಡ ಬೆಳಗಾವಿ ರಸ್ತೆಯಲ್ಲಿರುವ ಢಾಬಾವೊಂದರಲ್ಲಿ ನಡೆದಿದ್ದು, ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಆತ ಮಾನಸಿಕ ಅಸ್ವಸ್ಥನಾಗಿದ್ದು, ತಂದೆಯೊಂದಿಗೆ ಇದೇ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ಧಾರವಾಡ ಬೆಳಗಾವಿ ಹದ್ದಾರಿ ಪಕ್ಕದ ಬೇಗೂರು ಗ್ರಾಮದ ಬಳಿ ಇರುವ ಓಟ್ಸ್ ಮುಖ್ಯಾ ಢಾಬಾ 1975 ರಲ್ಲಿಯೇ ಆರಂಭವಾಗಿದೆ. ಇಲ್ಲಿ ಸುಮಾರು 70 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಇದೇ ಢಾಬಾದಲ್ಲಿ ಕಳೆದ 20 ವರ್ಷಗಳಿಂದ ಅರುಣ ಕುಮಾರ್ ಎಂಬ ವ್ಯಕ್ತಿ ಅಡುಗೆ ಕೆಲಸ ಮಾಡುತ್ತಿದ್ದಾನೆ. ಇವರ ಮಗ ಕಿರಣ ಕೂಡ ಇಲ್ಲಿಯೇ ಕಲಸ ಮಾಡುತ್ತಿದ್ದಾನೆ. ಇದೀಗ ಆವನ ಕಾಲಿಗೆ ಸರಪಳಿ ಹಾಕಿ, ದುಡಿಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ದೊರತಿದೆ.  ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಧಾರವಾಡ ಎಸ್ಪಿ ಡಾ. ಗೋವಾಲ ಬ್ಯಾಕೋಡ್ ತಮ್ಮ ಸಿಬ್ಬಂದಿಯೊಂದಿಗೆ ಭೇಟಿ ನೀಡಿದರು. ಆದರೆ ಚೈನಿಂದ ಕಟ್ಟಿಸಿಕೊಂಡಿದ್ದ ಎನ್ನಲಾದ ಕಾರ್ಮಿಕ ಕಿರಣ ಮಾತ್ರ ಪತ್ತೆಯಾಗಿಲ್ಲ.

ಇದನ್ನೂ ಓದಿ : ದಾವಣಗೆರೆ ಜಿಲ್ಲಾಸ್ಪತ್ರೆ: 135 ನವಜಾತ ಶಿಶುಗಳು, 28 ಗರ್ಭಿಣಿಯರ ಸಾವು

ಈ ಕುರಿತು ಆತನ ತಂದ ಅರುಣಕುಮಾರ್‌ನನ್ನು ವಿಚಾರಿಸಿದಾಗ, “ಏಳು ವರ್ಷಗಳ ಹಿಂದೆ ಕಿರಣ್ ಅಪಘಾತದಲ್ಲಿ ಗಾಯಗೊಂಡು, ಮಾನಸಿಕ ಅಸ್ವಸ್ಥವಾಗಿದ್ದಾನೆ. ಹೀಗಾಗಿ ಎಷ್ಟೋ ದಿನಗಳವರೆಗೆ ಎಲ್ಲೆಲ್ಲಿಯೋ ಹೋಗಿಬಿಡುತ್ತಾನೆ. ಮೂರ್ನಾಲ್ಕ ದಿನ ನಾನು ಕೂಡ ಡಾಬಾದಲ್ಲಿ ಇರಲಿಲ್ಲ. ಈ ವೇಳೆ ಕಾಲಿಗೆ ಚೈನ್ ಹಾಕಿದ್ದರೋ ಏನೋ ಗೊತ್ತಿಲ್ಲ” ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಡಾಬಾ ಮಾಲಿಕ ಮಹಮ್ಮದ್ ದೈವ‌, ಅವನ ತಂದೆ ಹಲವಾರು ವರ್ಷಗಳಿಂದ ಇಲ್ಲಿಯೇ ಇದ್ದಾನ. ನಮ್ಮ ಮಾವನೇ ಆತನಿಗೆ ಮದುವೆ ಮಾಡಿಸಿದ್ದಾನ. ಇತ್ತೀಚಿಗೆ ಕಿರಣ್ ಮಾನಸಿಕ ಅಸ್ವಸ್ಥನಾಗಿದ್ದಕ್ಕೆ  ಅವನ ಪೋಷಕರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಅವನ ಎಷ್ಟೋ ದಿನಗಳವರೆಗೆ ಎಲ್ಲೆಲ್ಲೋ ಓಡಿ ಹೋಗಿಬಿಡುತ್ತಾನೆ. ಇದೇ ಕಾರಣಕ್ಕೆ ಅವನ ತಂದೆ ತಾಯಿಯೇ ಅವನವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಇಲ್ಲಿ ಆತ ಸುರಕ್ಷಿತವಾಗಿರುತ್ತಾನೆ ಅಂತ ಮನವಿ ಮಾಡಿಕೊಂಡರು. ಆತ ಬೇರಡೆಗೆ ಹೋಗಿ ಏನಾದರೂ ಅನಾಹುತ ಆಗಬಾರದು ಅನ್ನೋ ಕಾರಣಕ್ಕೆ ನಾವು ಇಲ್ಲಿಯೇ ಇಟ್ಟುಕೊಂಡಿದ್ದವು. ಅವರ ತಾಯಿ ಹೇಳಿದರೂ ನಾವು ಚೈನ್‌ ಹಾಕುತ್ತಿರಲಿಲ್ಲ. ಬಹುಶಃ ಇತ್ತೀಚಿಗೆ ಯಾರೋ ಕಾರ್ಮಿಕರು ಆತನಿಗೆ ಚೈನ್ ಹಾಕಿರಬಹುದು ಎಂದರು.

ಈ ಬಗ್ಗೆ ಎಸ್ಪಿ ಡಾ. ಗೋಪಾಲ್ ಬ್ಯಾಕೋಡ್ ಮಾತನಾಡಿ, ಇದೀಗ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಆತ ಮಾನಸಿಕವಾಗಿ ಅಸ್ವಸ್ಥನಿದ್ದ ಅಂತ ಹೇಳಲು ಬರುವುದಿಲ್ಲ. ದಾಖಲೆಗಳನ್ನು ನಾವು ಪರಿಶೀಲಿಸಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ಏನು ದೂರು ನೀಡುತ್ತಾರೆ, ಆ ರೀತಿ ಕೇಸ್ ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದರು. ಗರಗ ಠಾಣೆಯ ಪೊಲೀಸರು ಢಾಬಾ ಮಾಲಿಕ ಮಹಮ್ಮದ್ ತೈಫೂರ್ ಹಾಗೂ ಕಾರ್ಮಿಕನ ತಂದೆ ಅರುಣಕುಮಾರ್ ಯಾದವ್​ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನೂ ನೋಡಿ : ಒಂದು ದೇಶ, ಒಂದು ಚುನಾವಣೆ | ಒಂದು… ಒಂದು.. ಎನ್ನುವುದರ ಹಿಂದೆ ದೇಶಕ್ಕೆ ಕಾದಿದೆ ಅಪಾಯ – ಡಾ.ಸಿದ್ದನಗೌಡ ಪಾಟೀಲ್

Donate Janashakthi Media

Leave a Reply

Your email address will not be published. Required fields are marked *