ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಅಡುಗೆ ಕಾರ್ಮಿಕರು ಮತ್ತು ಸಹಾಯಕಿಯರಿಗೆ 60 ವರ್ಷ ಪೂರೈಸಿದವರಿಗೆ ಒಮ್ಮೆ ಇಡುಗಂಟು ನೀಡುವ ಘೋಷಣೆಯನ್ನು ರಾಜ್ಯ ಸರಕಾರ ಮಾಡಿದೆ.

ಕನಿಷ್ಠ 15 ವರ್ಷ ಕೆಲಸ ಮಾಡಿ 60 ವರ್ಷಕ್ಕೆ ನಿವೃತ್ತಿ ಹೊಂದುವವರಿಗೆ 40 ಸಾವಿರ ನಗದು ದೊರಕಲಿದೆ. ಐದು ವರ್ಷದಿಂದ 15 ವರ್ಷದ ಒಳಗೆ ಕೆಲಸ ಮಾಡಿದ್ದರೆ ಅಂಥವರಿಗೆ 30 ಸಾವಿರ ಸಿಗಲಿದೆ. ರಾಜ್ಯದಲ್ಲಿ 1.19 ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಹಾರ ತಯಾರಿಸುವುದು, ಮಕ್ಕಳಿಗೆ ಬಡಿಸುವುದು, ಪಾತ್ರೆ ತೊಳೆಯುವುದು, ಸಹಾಯಕರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಾರ್ಚ್ 2022ರಂದು ಅಥವಾ ನಂತರ ನಿವೃತ್ತರಾದವರಿಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಬಿಸಿಯೂಟ ನೌಕರರಿಗೆ ಇಡುಗಂಟು ನೀಡಬೇಕು ಎಂದು  ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ನಿರಂತರವಾಗಿ ಹೋರಾಟಗಳನ್ನು ಸಂಘಟಿಸಿತ್ತು.

ಇದನ್ನೂ ಓದಿ : 5,000 ರೂ.ಗಳ ನೋಟುಗಳು ನಿಜಕ್ಕೂ ಚಲಾವಣೆಗೆ ಬರಲಿವೆಯೇ? ಇಲ್ಲಿದೆ ಆರ್‌ಬಿಐ ನೀಡಿರುವ ಸ್ಪಷ್ಟನೆ

ಈ ಕುರಿತು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ  ಪ್ರತಿಕ್ರಿಯೆ ನೀಡಿದ್ದು, ʼ2023  ಜುಲೈನಲ್ಲಿ ಈ ಕುರಿತು ಸಿಐಟಿಯು ಹೋರಾಟ ನಡೆಸಿತ್ತು. ಇದು ಸುದೀರ್ಘ ಹೋರಾಟ. ಆ ಸಮಯದಲ್ಲಿ ಇದಕ್ಕೆ  ಅದಿಕೃತವಾಗಿ ಹಣಕಾಸು ಇಲಾಖೆ ಕೂಡ ಸಮ್ಮತಿ ಸೂಚಿಸಿತ್ತು. 5ರಿಂದ  10 ವರ್ಷದ ವರೆಗೂ ಸೇವೆ ಸಲ್ಲಿಸಿರುವ ಬಿಸಿಯೂಟದ ಅಡುಗೆಯವರು ಮತ್ತು ಸಹಾಯಕಿಯರಿಗೆ 10 ಸಾವಿರ , 15 ವರ್ಷದವರೆಗೂ ಸೇವೆ ಸಲ್ಲಿಸಿರುವವರಿಗೆ 30 ಸಾವಿರ, 15ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿರುವವರಿಗೆ 40 ಸಾವಿರದ ವರೆಗೆ ಇಡುಗಂಡು ನೀಡುವುದಾಗಿ ಇಲಾಖೆ ತಿಳಿಸಿತ್ತು ಎಂದರು.

ಈ ಕುರಿತು ಕಾರ್ಮಿಕರಿಗೆ ಕಡಿಮೆ ಮಟ್ಟದಲ್ಲಿಯಾದರು ಸಹಾಯವಗುತ್ತದೆ ಎಂಬ ನಿಟ್ಟಿನಲ್ಲಿ ಸಂಘಟನೆಯೂ ಇದಕ್ಕೆ ಸಮ್ಮತಿ ಸೂಚಿಸಿತ್ತು. ಈ ಆದೇಶವನ್ನು ಸರ್ಕಾರ ಡಿ.30ರಂದು ಹೊರಡಿಸಿರುವುದು ಖುಷಿ ತಂದಿದೆ. ಆದರೆ ಈಗ ನೀಡುತ್ತಿರುವ ಇಡುಗಂಡು ತೀರ ಕಡಿಮೆ ಇದ್ದು ಮುಂಬರುವ ದಿನಗಳಲ್ಲಿ ಈ ಮೊತ್ತವನ್ನು ಹೆಚ್ಚಿಸಬೇಕು. ಮತ್ತು ಸೇವೆ ಸಲ್ಲಿಸಿ ನಂತರದಲ್ಲಿ ನಿಧನಹೊಂದಿರುವ ಕಾರ್ಮಿಕರ ಕುಟುಂಬಗಳಿಗೂ ಸೇರಬೇಕಾದ ಇಡುಗಂಟನ್ನು ಸರ್ಕಾರ ನೀಡಬೇಕು. ಶಾಲೆಗಳು ಮುಚ್ಚಿದ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿರುವ ಕಾರ್ಮಿಕರಿಗೂ ಈ ಸೌಲಭ್ಯ ಸಿಗಬೇಕುʼ ಎಂದು ಮಾಲಿನಿ ಮೆಸ್ತಾ ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ನೋಡಿ : ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಿ : ಅಹೋರಾತ್ರಿ ಧರಣಿ ಕುಳಿತ ಅಂಗನವಾಡಿ ಅಕ್ಕಂದಿರು Janashakthi Media

Donate Janashakthi Media

Leave a Reply

Your email address will not be published. Required fields are marked *