ಬೆಂಗಳೂರು | ‘ಬೆಂಗಳೂರು ಹಬ್ಬ : ಜಾತ್ರೆ–ಉತ್ಸವಗಳು ಮನುಷ್ಯರು ಒಂದಾಗಬೇಕು ಎಂಬ ಸಂದೇಶವನ್ನು ಸಾರುತ್ತವೆ – ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ನಿರ್ಮಾಣದ ಹೊಣೆಯು ಕನ್ನಡಿಗರದ್ದೇ ಆಗಿದೆ ‘ಕನ್ನಡ ನಮ್ಮ ನಾಡು ಮತ್ತು ತಾಯಿ ನುಡಿಯಾಗಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ‘ಬೆಂಗಳೂರು ಹಬ್ಬ–2026’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ : ಸುಂದರ ನಗರ ಕಲ್ಪನೆಯೂ ಶ್ರಮಿಕ ಜಗತ್ತಿನ ಸಂಕಟಗಳೂ

ಹೊರಗಿನಿಂದ ಇಲ್ಲಿಗೆ ಬಂದಿರುವವರಿಗೆ ಅವುಗಳನ್ನು ಪರಿಚಯಿಸಲು ಕನ್ನಡಿಗರಿಗೆ ಸುಸಂದರ್ಭ ಬಂದೊದಗಿದೆ. ‘ಬೆಂಗಳೂರು ಹಬ್ಬದ ಭಾಗವಾಗಿ, ನಮ್ಮ ನಾಡು ಮತ್ತು ನುಡಿಯನ್ನು ಪ್ರತಿನಿಧಿಸುವ 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಬೆಂಗಳೂರಿನ ಸಂಸ್ಕೃತಿಯನ್ನು ಹೊರಗಿನವರಿಗೆ ಪರಿಚಯಿಸಬೇಕು ಎಂದು ಪದ್ಮಿನಿ ರವಿ ಮತ್ತು ನಂದಿನಿ ಆಳ್ವ ಅವರು ಬೆಂಗಳೂರು ಹಬ್ಬ ಆರಂಭಿಸಿದ್ದರು. ಈಗ ವಿ. ರವಿಚಂದರ್‌ ಮತ್ತು ಪ್ರಶಾಂತ್‌ ಪ್ರಕಾಶ್‌ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಹಯೋಗ ನೀಡುತ್ತಿದೆ. ಭಿನ್ನ ಭಾಷೆ, ಧರ್ಮ, ಸಂಸ್ಕೃತಿಯ ಜನರು ಒಂದಾಗಲು ಈ ಹಬ್ಬ ವೇದಿಕೆ ಒದಗಿಸುತ್ತದೆ’ ಎಂದರು.

ಮನುಷ್ಯರು ಪರಸ್ಪರ ಪ್ರೀತಿಸಬೇಕೆ ಹೊರತು, ದ್ವೇಷಿಸಬಾರದು. ಯಾವುದೇ ಧರ್ಮವು ದ್ವೇಷವನ್ನು ಬೋಧಿಸುವುದಿಲ್ಲ. ‘ಎಲ್ಲ ಊರುಗಳಲ್ಲಿ ನಡೆಯುವ ಜಾತ್ರೆ–ಉತ್ಸವಗಳು ಮನುಷ್ಯರು ಒಂದಾಗಬೇಕು ಎಂಬ ಸಂದೇಶವನ್ನು ಸಾರುತ್ತವೆ. ಹೊರರಾಜ್ಯಗಳಿಂದ ಇಲ್ಲಿಗೆ ಬಂದು ನೆಲಸಿರುವವರಿಗೆ ಪ್ರೀತಿಯಿಂದ ಕನ್ನಡ ಕಲಿಸಬೇಕು’ ಎಂದರು.

ಕಾರ್ಯಕ್ರಮದ ನಂತರ ಡೊಳ್ಳು, ತಮಟೆ, ಅರೆ ಮೊದಲಾದ ಚರ್ಮವಾದ್ಯಗಳ ಕುಣಿತ ತಂಡಗಳು, ಪೂಜಾ ಕುಣಿತ ತಂಡಗಳ ಮೆರವಣಿಗೆಗೆ ನಡೆಯಿತು.

ಇದನ್ನೂ ನೋಡಿ : ಲಾಲ್‌ಬಾಗ್‌ ಫ್ಲವರ್‌ ಶೋ| ಬಣ್ಣಬಣ್ಣದ ಹೂಗಳ ಚಿತ್ತಾರದಲ್ಲಿ ‘ತೇಜಸ್ವಿ ವಿಸ್ಮಯ’ Janashakthi Media

Donate Janashakthi Media

Leave a Reply

Your email address will not be published. Required fields are marked *