ಮೈಸೂರು: ಗುಜರಿ ಅಂಗಡಿ ಮಾಲೀಕ ಮತ್ತು ಕಾರ್ಮಿಕನ ಎಡವಟ್ಟಿನಿಂದಾದ ಪರಿಣಾಮದಿಂದ ವಿಷಾನಿಲ ಸೋರಿಕೆಯಾಗಿ ಸುಮಾರು 50 ಜನ ಅಸ್ವಸ್ಥಗೊಂಡಿರುವ ಘಟನೆ ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದೆ.ನರಸಿಂಹರಾಜ ಠಾಣೆ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಮೈಸೂರಿನ ಹಳೇ ಕೆಸರೆ ಗ್ರಾಮದ ವರುಣ ನಾಲೆ ಸಮೀಪದಲ್ಲಿರುವ ಗುಜುರಿ ಅಂಗಡಿ ಮಾಲೀಕ ಮೊಹಮ್ಮದ್ ಮೂರು ತಿಂಗಳ ಹಿಂದೆ ದಾವಣಗೆರೆಯಿಂದ ಗುಜರಿ ಸಾಮಗ್ರಿಗಳನ್ನು ತಂದಿದ್ದು, ಈ ಗುಜುರಿ ಸಾಮಾಗ್ರಿಗಳಲ್ಲಿ ಖಾಲಿ ಸಿಲಿಂಡರ್ಗಳು ಕೂಡ ಇದ್ದವು. ಈ ಖಾಲಿ ಸಿಲಿಂಡರ್ನಲ್ಲಿ ಕ್ಲೋರಿನ್ ತುಂಬಿದ ಸಿಲಿಂಡರ್ ಕೂಡ ಇತ್ತು.
ಇದನ್ನೂ ಓದಿ: ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯಾಗಲಿ : ಸಿಎಂ ಸಿದ್ದರಾಮಯ್ಯನವರ ಒತ್ತಾಯ
ಕಳೆದ ಜೂನ್ 7 ರ ಶುಕ್ರವಾರ ರಾತ್ರಿ ಸಿಲಿಂಡರ್ ಗಳನ್ನು ಕಟ್ ಮಾಡುವಾಗ, ಕಾರ್ಮಿಕ ಕ್ಲೋರಿನ್ ತುಂಬಿದ್ದ ಸಿಲಿಂಡರ್ ಅನ್ನು ಕೂಡ ತುಂಡರಿಸಿದ್ದಾನೆ. ಇದರಿಂದ ಆ ಕಾರ್ಮಿಕ ಪ್ರಜ್ಞೆ ತಪ್ಪಿದ್ದಾನೆ.ಕೆಲವೇ ಹೊತ್ತಲ್ಲಿ ಗುಜುರಿ ಅಂಗಡಿ ಸುತ್ತಲಿನ ಪ್ರದೇಶಕ್ಕೆ ವಿಷಾನಿಲ ಹರಡಿದೆ. ಈ ವಿಷಾನಿಲದಿಂದ ಸುತ್ತಮುತ್ತಲಿನ ಜನರು ಅಸ್ವಸ್ಥಗೊಂಡಿದ್ದಾರೆ. ಸದ್ಯ ಮಾಲೀಕ ಮೊಹಮ್ಮದ್ ವಿರುದ್ಧ ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇದನ್ನೂ ನೋಡಿ: ಬಂಡವಾಳಶಾಹಿ ಬೆಳೆದಷ್ಟು ಪ್ರತಿರೋಧ ಹೆಚ್ಚಾಗುತ್ತಲೆ ಇರುತ್ತದೆ – ರಾಜೇಂದ್ರ ಚೆನ್ನಿJanashakthi Media