ಉಚಿತ ನೀರಿಗೆ ಹೋರಾಟ: ಗ್ರಾಹಕನಿಗೆ ಜಯ; ರೆಸ್ಟೋರೆಂಟ್‌ಗೆ ₹3000 ದಂಡ!

ಫರಿದಾಬಾದ್‌: ಹೊಟೇಲ್‌ಗಳಿಗೆ ಹೋದಾಗ ಕನಿಷ್ಠ ನೀರನ್ನಾದರು ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಹಲವಾರು ಪ್ರತಿಷ್ಠಿತ ಹೊಟೇಲ್‌ಗಳು ಕುಡಿಯುವ ನೀರನ್ನೂ ಉಚಿತವಾಗಿ ನೀಡದೆ ಹಣ ವಸೂಲಿ ಮಾಡುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಉಚಿತ ನೀರು ನೀಡದೆ ಹಣ ವಸೂಲಿ ಮಾಡಿದ ಪ್ರಕರಣವೊಂದು ಇಲ್ಲಿನ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ನಡೆದಿದೆ.  ಹೋರಾಟ

ಉಚಿತವಾಗಿ ನೀರು ನೀಡದೇ ನೀರಿಗೆ 40 ರೂಪಾಯಿ ಹಣ ಪಾವತಿಸಿಕೊಂಡ ಹೊಟೇಲ್ ವಿರುದ್ಧ ಕೇಸು ಹಾಕಿದ ಗ್ರಾಹಕರೊಬ್ಬರು ಪ್ರಕರಣದಲ್ಲಿ ಗೆಲುವು ಸಾಧಿಸಿರುವ ಘಟನೆ ದೆಹಲಿ ಎನ್‌ಸಿಆರ್‌ನ ಹರಿಯಾಣದ ಫರಿದಾಬಾದ್‌ನ ಸೆಕ್ಟರ್ 85 ರಲ್ಲಿರುವ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಹೋರಾಟ

ಶರ್ಮಾ ಹಾಗೂ ಅವರ ಸ್ನೇಹಿತರು ರಾತ್ರಿ 10. 30ಕ್ಕೆ ರಾತ್ರಿಯ ಭೋಜನಕ್ಕಾಗಿ ಈ ಹೊಟೇಲ್‌ಗೆ ಹೋಗಿದ್ದಾರೆ. ಆದರೆ ಅಲ್ಲಿ ಅವರು ಹೊಟೇಲ್ ಮಾಣಿ ಬಳಿ ಉಚಿತ ನೀರು ನೀಡುವಂತೆ ಕೇಳಿದಾಗ ಅವರು ನಿರಾಕರಿಸಿದ್ದಾರೆ. ಕುಡಿಯುವ ನೀರು ಬೇಕಾದರೆ ಬಾಟಲ್ ನೀರನ್ನು ಖರೀದಿಸುವಂತೆ ಹೇಳಿದ ರೆಸ್ಟೋರೆಂಟ್ ಸಿಬ್ಬಂದಿ ಉಚಿತ ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ಹೋರಾಟ

ಇದನ್ನೂ ಓದಿ: ಎಸ್‌ಐಆರ್ ಆತಂಕದಿಂದ ದಿನಕ್ಕೆ 3-4 ಜನರು ಆತ್ಮಹತ್ಯೆ: ಮಮತಾ ಬ್ಯಾನರ್ಜಿ ಆರೋಪ

ಆದರೆ ಕಾನೂನಿನ ಅರಿವಿದ್ದ ಶರ್ಮಾ ಅವರು, ಹೊಟೇಲ್ ಸಿಬ್ಬಂದಿಗೆ, ಭಾರತೀಯ ಕಾನೂನುಗಳ ಬಗ್ಗೆ ತಮಗೆ ಅರಿವಿದೆ ಎಂದು ವೇಟರ್‌ಗೆ ಮಾಹಿತಿ ನೀಡಿದರು ಮತ್ತು ಮತ್ತೊಮ್ಮೆ ವೇಟರ್ ಮತ್ತು ವ್ಯವಸ್ಥಾಪಕರಿಗೆ ಬಾಟಲ್ ನೀರನ್ನು ಖರೀದಿಸಲು ಒತ್ತಾಯಿಸುವ ಬದಲು ಉಚಿತವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸುವಂತೆ ಕೇಳಿಕೊಂಡರು. ಹೀಗೆ ಗ್ರಾಹಕರಿಗೆ ಉಚಿತವಾಗಿ ನೀರು ಕೊಡದೇ ನೀರನ್ನು ಖರೀದಿಸುವಂತೆ ಒತ್ತಾಯಿಸುವುದು ನ್ಯಾಯಾಲಯಗಳು, ಗ್ರಾಹಕ ಆಯೋಗ ಮತ್ತು ಎಫ್‌ಎಸ್‌ಎಸ್‌ಎಐ(FSSAI)ಯ ವಿವಿಧ ಮಾರ್ಗಸೂಚಿಗಳ ಪ್ರಕಾರ ಕಾನೂನುಬಾಹಿರ ಎಂದು ಅವರು ಹೇಳಿದರು.

ಹೊಟೇಲ್ ಸಿಬ್ಬಂದಿಯ ಮನವೊಲಿಸುವ ಅವರ ಪ್ರಯತ್ನದ ಹೊರತಾಗಿಯೂ ಅವರಿಗೆ ಹೊಟೇಲ್‌ನವರು ಉಚಿತ ನೀರು ನೀಡಲು ನಿರಾಕರಿಸಿದರು. ತಮ್ಮ ಹಠಕ್ಕೆ ಬದ್ಧರಾದ ಆ ಹೊಟೇಲ್‌ನ ಮ್ಯಾನೇಜರ್ ಮತ್ತು ವೇಟರ್ ಇಬ್ಬರೂ , ಬೇಕಿದ್ದರೆ ತಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಆದರೆ ತಮ್ಮ ನಿಲುವನ್ನು ಮಾತ್ರ ಬದಲಿಸುವುದಿಲ್ಲ ಎಂದು ಹೇಳಿದರು. ಹೀಗಾಗಿ ಶರ್ಮಾ ಅವರು ಕೊನೆಗೆ ತಮಗೆ ಹಾಗೂ ಸ್ನೇಹಿತರಿಗಾಗಿ ಅಲ್ಲಿ ಎರಡು ಬಾಟಲ್ ನೀರನ್ನು ಖರೀದಿಸಲೇಬೇಕಾದ ಅನಿವಾರ್ಯತೆ ಎದುರಾಯ್ತು. ಇದರಿಂದ ನೊಂದ ಶರ್ಮಾ, ಫರಿದಾಬಾದ್ ಗ್ರಾಹಕ ಆಯೋಗದಲ್ಲಿ ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು.

ಭಾರತದಲ್ಲಿನ ರೆಸ್ಟೋರೆಂಟ್‌ಗಳು ಮತ್ತು ತಿನಿಸುಗಳಿಗೆ ಇರುವ ಪ್ರಸ್ತುತ ಕಾನೂನುಗಳು ಮತ್ತು ನಿಯಮಗಳ ಪ್ರಕಾರ, ವಿಶೇಷವಾಗಿ ಗ್ರಾಹಕ ವ್ಯವಹಾರಗಳ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೊರಡಿಸಿದ ಮಾರ್ಗಸೂಚಿಗಳು ಹಾಗೂ ಆದೇಶಗಳ ಪ್ರಕಾರ, ಪ್ರತಿಯೊಂದು ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಉಚಿತ ಕುಡಿಯುವ ನೀರನ್ನು ಒದಗಿಸಬೇಕು ಮತ್ತು ಬಾಟಲಿ ನೀರನ್ನು ಖರೀದಿಸಲು ಅವರನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆದ್ದರಿಂದ, ರೆಸ್ಟೋರೆಂಟ್‌ನ ಕೃತ್ಯವು ಕಾನೂನು ಬಾಹಿರವಾಗಿದೆ ಎಂದ ನ್ಯಾಯಾಲಯವೂ ಗ್ರಾಹಕನಿಗೆ ನೀರು ಕೊಡದೇ ಕಿರುಕುಳ ನೀಡಿದ ರೆಸ್ಟೋರೆಂಟ್‌ಗೆ ನೀರಿನ ಬಾಟಲಿಯ 40 ರೂಪಾಯಿ ಪರಿಹಾರವಾಗಿ 3000 ರೂಪಾಯಿ ಪಾವತಿಸುವಂತೆ ಆದೇಶಿಸಿತು.

ಇದನ್ನೂ ನೋಡಿ: ಸಾಂವಿಧಾನಿಕ ಜವಾಬ್ದಾರಿಯನ್ನು ಮರೆತರೆ ರಾಜ್ಯಪಾಲರು?! Janashakthi Media

Donate Janashakthi Media