ಬೆಂಗಳೂರು: ಮಹಿಳೆಯರ ಘನತೆಯ ಬದುಕಿನ ಹಕ್ಕು ಕುಸಿಯಲಾರದಂತೆ, ಕಾನೂನಿನ ನಡೆ ಸಡಿಲಗೊಳ್ಳದಂತೆ, ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಸಮಾಜ ಎಚ್ಚರವಹಿಸಬೇಕೆಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು “ಸಮಾಲೋಚನಾ ಗೋಷ್ಠಿ” ಆಯೋಜಿಸಿವೆ.
ನಾಳೆ ಗುರುವಾರ ಮೇ 16ರ ಮಧ್ಯಾಹ್ನ 3 ಕ್ಕೆ ಬೆಂಗಳೂರಿನ ಮಿಷನ್ ರಸ್ತೆಯ “ಸೌಹಾರ್ದ”ದಲ್ಲಿ ಸಮಾಲೋಚನಾ ಗೋಷ್ಠಿ ಆಯೋಜಿಸಿದ್ದು, ಸಮಾಲೋಚನಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪ ಸಂಖ್ಯಾತರ ಒಕ್ಕೂಟ, ದಲಿತ,ರೈತ, ಕಾರ್ಮಿಕ,ವಕೀಲರ,ನೌಕರ, ವಿದ್ಯಾರ್ಥಿ ಯುವಜನ ಸಂಘಟನೆಗಳು ಪಾಲ್ಗೊಳ್ಳಲಿದ್ದು, ಮುಖ್ಯವಾಗಿ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿದಂತೆ ಇಂತಹ ಅಹಿತಕರ ಘಟನೆಗಳು ಸಮಾಜದಲ್ಲಿ ನಡೆಯದಂತೆ ಎಚ್ಚರಿಕೆವಹಿಸುವುದು ಹೇಗೆ? ಎನ್ನುವುದು ಸೇರಿದಂತೆ ವಿವಿಧ ಮಹತ್ವದ ವಿಚಾರಗಳ ಕುರಿತು ಸಮಾಲೋಚನೆ ನಡೆಯಲಿದೆ.
ಇದನ್ನು ಓದಿ : ಹುಬ್ಬಳ್ಳಿ : ಪ್ರೀತಿಯನ್ನು ನಿರಾಕರಿಸಿದಕ್ಕೆ ಮತ್ತೊಂದು ಹತ್ಯೆ | ನೇಹಾ ಘಟನೆ ಮಾಸುವ ಮುನ್ನ ಮತ್ತೊಂದು ದುರ್ಘಟನೆ
ಈ ಸಮಾಲೋಚನಾ ಗೋಷ್ಠಿಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ, ಹಿರಿಯ ಸಾಹಿತಿ ಪ್ರೊ.ಎಸ್. ಜಿ.ಸಿದ್ದರಾಮಯ್ಯ, ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ಚಿಂತಕರಾದ ಸಿ.ಎಚ್.ಹನುಮಂತರಾಯ,ಬಿ.ಟಿ.ವೆಂಕಟೇಶ್, ಬಿ.ಕೆ.ಶಿವರಾಂ,ಮಾವಳ್ಳಿ ಶಂಕರ್, ಡಾ.ವಿಜಯಾ, ಲೇಖಕಿ ಡಾ.ವಸುಂಧರಾ ಭೂಪತಿ, ಇಂದಿರಾ ಕೃಷ್ಣಪ್ಪ, ಬಿ.ಶ್ರೀಪಾದ ಭಟ್,ಎನ್ ರಾಜಣ್ಣ, ಡಾ.ಕೆ.ಷರೀಫಾ, ಡಾ.ಆರ್.ಪೂರ್ಣಿಮಾ, ವಿನಯ್ ಶ್ರೀನಿವಾಸ, ಮಧು ಭೂಷಣ್, ಜ್ಯೋತಿ ಏ, ನೇಮಿಚಂದ್ರ,ಸಿ.ಜಿ.ಮಂಜುಳಾ, ಡಾ.ಎಚ್.ಜಿ.ಜಯಲಕ್ಷ್ಮಿ, ಡಾ.ಬಿ.ಆರ್.ಮಂಜುನಾಥ, ಹರೀಂದ್ರ, ನಿರ್ಮಲಾ, ಲೀಲಾವತಿ ಮತ್ತಿತರರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ನೋಡಿ : ಚಪಾತಿ ನಂಗೆ ಅಲರ್ಜಿ ಅಂತಾ ಗೊತ್ತಾಗಿದ್ದೆ ಡಾಕ್ಟರ್ ಹತ್ರ ಹೋದಮೇಲೆ! – ರವೀಂದ್ರ ಭಟ್ಟ ಮಾತುಗಳು Janashakthi Media