ಬೆಂಗಳೂರು: ಈಗ ದೇಶ ಆಳುತ್ತಿರುವ ಶಕ್ತಿಗಳು ಪ್ರಜಾಪ್ರಭುತ್ವದ ಅಂಗಗಳನ್ನೇ ಬಳಸಿಕೊಂಡು ದೇಶದ ತುಂಬಾ ಸಂವಿಧಾನಿಕ ಫ್ಯಾಸಿಸಂ ಅನ್ನು ಹರಡುತ್ತಿವೆ, ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನು ಭ್ರಷ್ಟಗೊಳಿಸಿ, ಜನರ ಹಕ್ಕುಗಳನ್ನು ಕಸಿಯುತ್ತಿವೆ ಎಂದು ಇಪ್ಟಾದ ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಅವರು ಹೇಳಿದರು.
ಮನುಷ್ಯತ್ವದೆಡೆಗೆ ಸಮುದಾಯ 50 ರ ಭಾಗವಾಗಿ ಸಮುದಾಯ ಸಾಂಸ್ಕೃತಿಕ ಸಂಘಟನೆ ನಗರದ ಚಿತ್ರಕಲಾಪರಿಷತ್ತಿನಲ್ಲಿ ಆಯೋಜಿಸಿದ್ದ ಬೀದಿನಾಟಕೋತ್ಸವ ಹಾಗೂ ವಿಚಾರಗೋಷಿಯ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿ ಮಾತನಾಡುತ್ತಾ, “ಈ ಫ್ಯಾಸಿಸಂ ವಿರುದ್ಧ ಹೋರಾಟದಲ್ಲಿ ನಮಗೆ ನಮ್ಮ ಜನಪದ ಪರಂಪರೆ,ವಚನ ಚಳುವಳಿ ಹಾಗೂ ಬಸವ ಅಲ್ಲಮ ವಿವೇಕಾನಂದರಂತಹ ದಾರ್ಶನಿಕರ ಮಾದರಿಗಳಿವೆ” ಎಂದರು.
ಇದನ್ನೂ ಓದಿ: 9.5 ಲಕ್ಷ ರೂ. ಲಂಚ ಸ್ವೀಕಾರ ವೇಳೆ ಸಿಬಿಐ ದಾಳಿ; ಸಿಪಿಆರ್‌ಐ ಜಂಟಿ ನಿರ್ದೇಶಕ ಸೇರಿ ಇಬ್ಬರ ಬಂಧನ
ಕಾರ್ಯಕ್ರಮ ಉದ್ಘಾಟಿಸಿದ ಸಮುದಾಯದ ಸ್ಥಾಪಕರಾದ ನಿರ್ದೇಶಕ ಪ್ರಸನ್ನ ಅವರು, “ನಾವು 50 ವರ್ಷದ ಹಿಂದೆ ಸಮುದಾಯ ಆರಂಭಿಸಿದಾಗ ಇದ್ದ ಪರಿಸ್ಥಿತಿಗಿಂತ ಈಗಿನ ಪರಿಸ್ಥಿತಿ ಹದಗೆಟ್ಟಿದೆ ,ಅಂದಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ ಅಂದಿನ ತುರ್ತುಪರಿಸ್ಥಿತಿ ಕಾಲ ಅಜವಾದರೆ ಇಂದಿನ ಪ್ರಭುತ್ವದ ಫ್ಯಾಸಿಸಂ ಗಜದಷ್ಟು ದೊಡ್ಡದಾಗಿದೆ ,ಇದನ್ನು ಸೋಲಿಸಲು ನಾವು ಮತ್ತೆ ಜನರ ನಡುವೆ ಹೋಗಬೇಕಾಗಿದೆ ಅವರ ಹೆಗಲ ಮೇಲೆ ಕೈಹಾಕಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆಯಬೇಕಿದೆ .ಇದಕ್ಕೆ ನಮಗೆ ಸ್ಪೂರ್ತಿ ಮಂಟೇಸ್ವಾಮಿಯಲ್ಲಿ ಅಲ್ಲಮನಲ್ಲಿ ವಚನ ಚಳುವಳಿಯಲ್ಲಿ ಸಿಗುತ್ತದೆ. ಸಮುದಾಯಕ್ಕೆ ಆ ಶಕ್ತಿಯಿದೆ” ಎಂದರು .
ಕಾರ್ಯಕ್ರಮದ ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ kgf ಸಮುದಾಯದ ಫ್ಲೋರಾ ಅಚ್ಯುತ ಅವರು ಸಮುದಾಯದ ಆರಂಭ ದಿನಗಳಲ್ಲಿ ಬೀದಿ ನಾಟಕಗಳಲ್ಲಿ, ಜಾಥಾಗಳಲ್ಲಿ ಬದಲಾವಣೆಯಲ್ಲಿ ನಂಬಿಕೆ ಇರಿಸಿ ಭಾಗವಹಿಸಿದ್ದನ್ನು ಸ್ಮರಿಸಿಕೊಂಡರು ,ಸಮುದಾಯ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಜ್ ವಾಮಂಜೂರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಸಮುದಾಯದ ಗೌರವ ಅಧ್ಯಕ್ಷರಾದ ಬಂಜಗೆರೆ ಜಯಪ್ರಕಾಶ ವಹಿಸಿದ್ದರು .
ಕಾರ್ಯಕ್ರಮದಲ್ಲಿ ವಿಜಯನಗರ ಬಿಂಬ ಬೆಂಗಳೂರು “ವಿಲೇವಾರಿ” ಮಂಗಳೂರು ಸಮುದಾಯ “ಹೂವು ಮತ್ತು ದಾರ “ , ಧಾರವಾಡ ಸಮುದಾಯ ‘ಮಾನವರಾಗೋಣ’ ಬೀದಿನಾಟಕ ಪ್ರದರ್ಶನ ಮಾಡಿದರು.
ಇದನ್ನೂ ನೋಡಿ: ಹೊರಗುತ್ತಿಗೆ ಎಂಬ ‘ಜೀತʼದಿಂದ ಬಿಡುಗಡೆ ಸಿಗಲಿ – ಎಸ್. ವರಲಕ್ಷ್ಮಿ Janashakthi Media
