ಬೆಂಗಳೂರು : ಇಂದು ಭಾರತೀಯ ಸಂವಿಧಾನ ರಚಿಸಿ 75 ವರ್ಷ ಕಳೆದಿದ್ದು, ದೇಶದಾದ್ಯಂತ ಇಂದು ಸಂವಿಧಾನ ದಿನಾಚರಣೆ ಆಚರಿಸಲಾಗುತ್ತಿದೆ.
ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಸಂವಿಧಾನದ ಅಸ್ತ್ರದ ಮೂಲಕ ತಮಗೆ ಎದುರಾಗುವ ಎಲ್ಲಾ ಪ್ರತಿರೋಧಗಳನ್ನು ಎದುರಿಸಿ ಮುನ್ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸಂವಿಧಾನದ ಮೌಲ್ಯ ತಿಳಿಸಲು ಸರ್ಕಾರದಿಂದ ರಾಜ್ಯಾದ್ಯಂತ ಅಭಿಯಾನ
ಟ್ವಿಟ್ ನಲ್ಲಿ ಸಂವಿಧಾನದ ಆಶಯಗಳಾದ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವ ನಮ್ಮ ರಾಜಕೀಯದ ಮತ್ತು ಸರ್ಕಾರದ ಸಿದ್ಧಾಂತವೂ ಹೌದು. ಈ ಆಶಯಗಳೊಂದಿಗೆ ಸಾಗುತ್ತಿರುವ ನಮ್ಮ ಸರ್ಕಾರ ಎದುರಾಗುವ ಎಲ್ಲ ಪ್ರತಿರೋಧಗಳನ್ನು ಬಾಬಾಸಾಹೇಬ್ ಅಂಬೇಡ್ಕರರು ನಮ್ಮ ಕೈಯಲ್ಲಿಟ್ಟು ಹೋಗಿರುವ ಸಂವಿಧಾನದ ಅಸ್ತ್ರದ ಮೂಲಕವೇ ಎದುರಿಸಿ ಮುನ್ನಡೆಯಲಿದೆ.
ಇದೇ ಸಂದರ್ಭದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಸಂವಿಧಾನದ ಪ್ರಸ್ತಾವಣೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಆಶಯಗಳನ್ನು ಎತ್ತಿಹಿಡಿಯುತ್ತಿರುವುದು ಅತೀವ ಸಂತೋಷ ಮತ್ತು ಭವಿಷ್ಯದಲ್ಲಿ ಭರವಸೆಯನ್ನು ಮೂಡಿಸಿದೆ.ಭಾರತೀಯ ಸಂವಿಧಾನವು ಅಂಗೀಕಾರಗೊಂಡ ಈ ದಿನದಂದು ಸಂವಿಧಾನಶಿಲ್ಪಿ ಅಂಬೇಡ್ಕರರನ್ನು ಗೌರವದಿಂದ ನೆನೆಯುತ್ತೇನೆ. ನಾಡಬಾಂಧವರಿಗೆಲ್ಲರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳು ಎಂದು ಅವರು ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ.
ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ನಮ್ಮ ರಾಜಕೀಯದ ಮತ್ತು ಸರ್ಕಾರದ ಸಿದ್ಧಾಂತವೂ ಹೌದು.
ಈ ಆಶಯಗಳೊಂದಿಗೆ ಸಾಗುತ್ತಿರುವ ನಮ್ಮ ಸರ್ಕಾರ ಎದುರಾಗುವ ಎಲ್ಲ ಪ್ರತಿರೋಧಗಳನ್ನು ಬಾಬಾಸಾಹೇಬ್ ಅಂಬೇಡ್ಕರರು ನಮ್ಮ ಕೈಯಲ್ಲಿಟ್ಟು ಹೋಗಿರುವ ಸಂವಿಧಾನದ ಅಸ್ತ್ರದ ಮೂಲಕವೇ ಎದುರಿಸಿ ಮುನ್ನಡೆಯಲಿದೆ.
ಇದೇ ಸಂದರ್ಭದಲ್ಲಿ ದೇಶದ… pic.twitter.com/KVlz57Eh6p
— Siddaramaiah (@siddaramaiah) November 26, 2024
ಇದನ್ನೂ ನೋಡಿ : ನವೆಂಬರ್ 26 ಭಾರತದ ಸಂವಿಧಾನ ದಿನ | ಈ ದಿನದ ಮಹತ್ವ, ಇತಿಹಾಸದ ಬಗ್ಗೆ ತಿಳಿಯಿರಿ Janashakthi Media