ಲಖನೌ: ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ಪರಿವರ್ತನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇತ್ತೀಚಿಗೆ ಮಧ್ಯಪ್ರದೇಶದಲ್ಲಿ ಲಿಂಗ ಗುರುತಿನ ಯಾತನೆ ಅನುಭವಿಸುತ್ತಿದ್ದ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಲಿಂಗ ಪರಿವರ್ತನೆಗೆ ಅನುಮತಿ ಕೋರಿದ್ದರು. ಸುಪ್ರೀಂ ಕೋರ್ಟ್‌ನ ನಿರ್ದೇಶನ ಹಾಗೂ ಮನೋವೈದ್ಯರ ಸಲಹೆ ಮೇರೆಗೆ ಅಲ್ಲಿನ ಪೊಲೀಸ್ ಇಲಾಖೆಯು ಇದಕ್ಕೆ ಒಪ್ಪಿಗೆ ನೀಡಿದೆ. ಈ ನಿಟ್ಟಿನಲ್ಲಿ ಮಧ್ಯಪ್ರದೇಶದ ಪೊಲೀಸರ ಅಭಿಪ್ರಾಯ ಪಡೆಯಲು ಉತ್ತರ ಪ್ರದೇಶದ ಪೊಲೀಸರು ಮುಂದಾಗಿದ್ದಾರೆ.
ಲಿಂಗ ಪರಿವರ್ತನೆಗೆ ಮಹಳಾ ಕಾನ್‌ಸ್ಟೆಬಲ್‌ಗಳಿಗೆ ಅನುಮತಿ ಸಿಗಬಹುದು. ಆದರೆ ಭವಿಷ್ಯದಲ್ಲಿ ಮಹಿಳೆಯರಿಗೆ ಇಲಾಖೆಯಿಂದ ನಿಗದಿಪಡಿಸಿರುವ ಯಾವುದೇ ಸೌಲಭ್ಯಗಳು ಅವರಿಗೆ ಲಭಿಸುವುದಿಲ್ಲʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಇದನ್ನೂ ಓದಿ:ರಾಮನಗರದಲ್ಲಿ ಬೆಳ್ಳಂಬೆಳಗ್ಗೆಯೇ ಪ್ರತಿಭಟನೆ| ಸ್ಟಾಲಿನ್‌ಗೆ ಶ್ರದ್ಧಾಂಜಲಿ ಕೋರಿ ಆಕ್ರೋಶ
ನಾವು ಹೆಣ್ಣು ಅಥವಾ ಗಂಡು ಎಂದು ಲಿಂಗ ಗುರುತಿಸುವಿಕೆಯಲ್ಲಿ ಮುಜುಗರ ಅನುಭವಿಸುತ್ತಿದ್ದೇವೆ. ಇದು ನಮ್ಮನ್ನು ಆತಂಕ ಹಾಗೂ ಖಿನ್ನತೆಗೆ ದೂಡಿದೆ. ಹಾಗಾಗಿ ಲಿಂಗ ಪರಿವರ್ತನೆಗೆ ಅನುಮತಿ ನೀಡಬೇಕು ಎಂದು ಕಾನ್‌ಸ್ಟೆಬಲ್‌ವೊಬ್ಬರು ಅರ್ಜಿಯಲ್ಲಿ ಕೋರಿದ್ದಾರೆ.
ಇಬ್ಬರು ಕಾನ್‌ಸ್ಟೆಬಲ್‌ಗಳು ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಉತ್ತರ ಪ್ರದೇಶದ ಪೊಲೀಸ್ ಇಲಾಖೆಗೆ ಅರ್ಹತೆಯ ಮೇಲೆ ಈ ವಿಷಯವನ್ನು ಪರಿಗಣಿಸುವಂತೆ ನ್ಯಾಯಾಲಯವು ಸೂಚಿಸಿದೆ. ಅಲ್ಲದೇ, ವಿಷಯಕ್ಕೆ ಸಂಬಂಧಿಸಿದಂತೆ ಹೊಸ ನೀತಿಯೊಂದನ್ನು ರೂಪಿಸುವಂತೆಯೂ ನಿರ್ದೇಶನ ನೀಡಿದೆ.
ವಿಡಿಯೋ ನೋಡಿ:ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್‌ಗೆ ಕೊಕ್ಕೆ! ಭುಗಿಲೆದ್ದ ಕಾರ್ಮಿಕರ ಆಕ್ರೋಶ Janashakthi Media