ರಾಯಚೂರು: ಇತ್ತೀಚಿಗೆ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ದಂಧೆ ಹೆಚ್ಚುತ್ತಿದ್ದು, ಇದೀಗ ದುಷ್ಕರ್ಮಿಗಳು ಅಕ್ರಮ ಮರಳು ದಂಧೆ ತಡೆಯಲು ಹೋಗಿದ್ದ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೀಕಲಪರ್ವಿ ಎಂಬಲ್ಲಿ ನಡೆದಿದೆ. ರಾಯಚೂರು
ಮಾನ್ವಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಹೆಚ್ ಲಕ್ಷ್ಮಣ ಮೇಲೆ ಹಲ್ಲೆ ನಡೆಸಲಾಗಿದೆ. ಹೋಂ ಗಾರ್ಡ್ ಜೊತೆಗೆ ಕಾನ್ಸ್ಟೇಬಲ್ ಲಕ್ಷ್ಮಣ ಅವರು ತಪಾಸಣೆಗೆ ಎಂದು ತೆರಳಿದ್ದರು.ಅಕ್ರಮ ಮರಳು ತಪಾಸಣೆಗೆ ತೆರಳಿದ್ದ ಕಾನ್ಸ್ಟೇಬಲ್ ಲಕ್ಷ್ಮಣ ಮೇಲೆ ಹಲ್ಲೆ ನಡೆಸಿದ್ದಾರೆ. ಚಿಕ್ಕಲಪರ್ವಿ ಗ್ರಾಮದ ಬಳಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ವಾಹನ ತಡೆಯಲು ಪಿಸಿ ಲಕ್ಷ್ಮಣ ಹೋಗಿದ್ದಾರೆ.
ಇದನ್ನೂಓದಿ: ತೆಲಂಗಾಣ ಸುರಂಗ ಕುಸಿತ – 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆ
ಈ ವೇಳೆ ಕಾನ್ಸ್ಟೇಬಲ್ ಲಕ್ಷ್ಮಣ ಮೇಲೆ ದುಃಖರಮಿಗಳು ಹಲ್ಲೆ ನಡೆಸಿದ್ದಾರೆ ಕಾನ್ಸ್ಟೇಬಲ್ ಲಕ್ಷ್ಮಣ್ಗೆ ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ: ಬಜೆಟ್ 2025 ಚರ್ಚೆ| ಶ್ರಮಜೀವಿಗಳ ಜೀವ ತೆಗೆದ ಜನದ್ರೋಹಿ ಬಜೆಟ್Janashakthi Media