ಕಾಂಗ್ರೆಸ್‌ನಿಂದ ಅಣಕು ಶವಯಾತ್ರೆ – ಉಮೇಶ್‌ ಕತ್ತಿ ಕ್ಷಮೆಯಾಚನೆ

ಬೆಂಗಳೂರು: ರೈತರೊಬ್ಬರಿಗೆ ಸತ್ತೋಗು ಎಂದು ಫೋನ್‌ ಮೂಲಕ ಹೇಳಿ ಸಾಕಷ್ಟು ವಿವಾದಕ್ಕೆ ಕಾರಣರಾಗಿರುವ ಬಿಜೆಪಿ ಸಚಿವ ಉಮೇಶ್ ಕತ್ತಿ ವಿರುದ್ಧ ಕಾಂಗ್ರೆಸ್​ ವತಿಯಿಂದ ಅಣಕು ಶವಯಾತ್ರೆ ನಡೆಸಿ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಕಾಂಗ್ರೆಸ್​ ಕಾರ್ಯಕರ್ತರು ಸಚಿವ ಉಮೇಶ್ ಕತ್ತಿ ಅವರ ಶತಯಾತ್ರೆ ನಡೆಸಿ‌ ನಡೆಸಿದರು. ಕಾಂಗ್ರೆಸ್​ ಭವನದಲ್ಲಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಶವಕ್ಕೆ ಬೆಂಕಿ ಹಚ್ಚಿದ್ದ ಕಾರ್ಯಕರ್ತರು ಶವಯಾತ್ರೆಯನ್ನು ಸಿಎಂ ಗೃಹ ಕಚೇರಿ ಕೃಷ್ಣಾವರೆಗೆ ನಡೆಸಲು ಮುಂದಾದರು. ಆದರೆ, ಕೊರೋನಾ ಕಾರಣದಿಂದಾಗಿ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ ಕಾರಣ ಕಾಂಗ್ರೆಸ್ ಭವನ ಮುಂಭಾಗವೇ ಶವಯಾತ್ರೆಯ ಅಣಕು ಪ್ರದರ್ಶನ ಹಾಗೂ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಇದನ್ನು ಓದಿ: ಅಕ್ಕಿ ಕೇಳಿದ ರೈತನಿಗೆ ‘ಸತ್ತು ಹೋದರೆ ಒಳ್ಳೆಯದು’ ಎಂದ ಸಚಿವ ಉಮೇಶ್ ಕತ್ತಿ

ಪ್ರತಿಭಟನೆಯಲ್ಲಿ ಹಾಜರಿದ್ದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, “ಉಮೇಶ್ ಕತ್ತಿಯವರ ಆಡಿಯೋ ಹೇಳಿಕೆಯನ್ನು ನಾನೂ ಸಹ ಕೇಳಿರುವೆ. ಅವರು ಕರೆ ಮಾಡಿದ್ದ ವ್ಯಕ್ತಿಗೆ ಸಾಯಿ ಅಂತ ಹೇಳಿದ್ದಾರೆ. ಇದನ್ನು ಖಂಡಿಸಿ ನಾವು ಪ್ರತಿಭಟನೆ ನಡೆಸಿದ್ದೇವೆ. ಸಚಿವ ಉಮೇಶ್ ಕತ್ತಿ ಹೇಳಿಕೆ ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಹ ಕೂಡಲೇ ಉಮೇಶ್‌ ಕತ್ತಿಯವರನ್ನು ಸಂಪುಟದಿಂದ ಕಿತ್ತೊಗೆಯಬೇಕೆಂದು ಟ್ವೀಟ್‌ ಮಾಡುವ ಮೂಲಕ ಆಗ್ರಹಿಸಿದ್ದಾರೆ.

ಇದನ್ನು ಓದಿ: ಮಂತ್ರಿಗಳಿಗೆ ಸಿಗದ ಬೆಡ್‌, ಸಾಮಾನ್ಯರ ಸ್ಥಿತಿ ಹೇಗೆ: ಕಾಂಗ್ರೆಸ್ ಆರೋಪ

ಪಡಿತರ ಅಕ್ಕಿ ಕಡಿತ ಮಾಡಿರುವ ಬಗ್ಗೆ ಪ್ರಶ್ನಿ ಮಾಡಿದ  ರೈತರೊಬ್ಬರಿಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅವರು ‘ಸಾಯುವುದು ಒಳ್ಳೆಯದು’ ಎಂದಿದ್ದಾರೆ.

ಉಮೇಶ್‌ ಕತ್ತಿ ಹೇಳಿಕೆಯಿಂದ ಸಾಕಷ್ಟು ಮುಜುಗರಕ್ಕೆ ಒಳಗಾದ ರಾಜ್ಯದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಒಬ್ಬ ಸಚಿವನಾಗಿ ಈ ರೀತಿ ಹೇಳಿಕೆ ಸರಿಯಲ್ಲ ಎಂದಿದ್ದಾರೆ.

ಸಚಿವ ಉಮೇಶ್‌ ಕತ್ತಿ ವಿರುದ್ಧ ತೀವ್ರವಾದ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ‘ನನ್ನಿಂದ ರೈತರು, ಫಲಾನುಭವಿಗಳು ಮತ್ತು ರಾಜ್ಯದ ಜನರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *