ಪಾಲಕ್ಕಾಡ್: ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೀರಸ ಪ್ರದರ್ಶನದ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಟೀಕಿಸಿದ್ದು, “ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ವಿಫಲವಾಗಿದೆ” ಎಂದು ಹೇಳಿದ್ದಾರೆ. ಕಾಂಗ್ರೆಸ್‌ಗೆ ಬಿಜೆಪಿ ವಿರೋಧಿಗಳನ್ನು ಒಗ್ಗೂಡಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
“ಬಿಜೆಪಿ ವಿರುದ್ಧ ಒಂದೇ ವೇದಿಕೆಯಲ್ಲಿ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಅಲ್ಲದೆ ಕಾಂಗ್ರೆಸ್ ನಾಯಕರ ಒಂದು ವಿಭಾಗವು ಬಿಜೆಪಿಗಿಂತ ಕೆಟ್ಟದಾದ ಕೋಮು ವಿಭಜನೆಯನ್ನು ಮುಖ್ಯ ವಿಷಯ ಮಾಡಿಕೊಂಡಿದ್ದರು” ಎಂದು ಪಿಣರಾಯಿ ವಿಜಯನ್ ಅವರು ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯಾದ್ಯಂತ ಸಚಿವ ಸಂಪುಟದ ಪ್ರವಾಸದ ವೇಳೆ ನಡೆದ ಸಮಾವೇಶದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸಾಯೋಕೆ ನನ್ನ 1.5 ಕೋಟಿ ರೂ.ಕಾರೇ ಆಗಬೇಕಿತ್ತಾ| ಸವಾರನ ಮೇಲೆ ದರ್ಪ ತೋರಿದ ಭವಾನಿ ರೇವಣ್ಣ, ವಿಡಿಯೋ ವೈರಲ್
“ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಬಿಜೆಪಿಯ ‘ಬಿ ಟೀಂ’ ರೀತಿಯಲ್ಲಿ ವರ್ತಿಸಿದ್ದಾರೆ. ಈ ಸೋಲಿಗೆ ಕಾಂಗ್ರೆಸ್ ನಾಯಕತ್ವವೇ ಹೊಣೆಯಾಗಬೇಕು. ಕಾಂಗ್ರೆಸ್ ಪಕ್ಷ ತನ್ನ ತಪ್ಪುಗಳಿಂದ ಪಾಠ ಕಲಿತು ಎಲ್ಲರನ್ನೂ ಒಗ್ಗೂಡಿ ಮುನ್ನಡೆಯಬೇಕು” ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ಮಧ್ಯೆ, ಭಾನುವಾರ ಸಂಜೆ ರಾಜಧಾನಿ ತಿರುವನಂತಪುರಂನಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ. ಪಕ್ಷದ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಬೀದಿಗಳಲ್ಲಿ ವಿಜಯೋತ್ಸವದ ಮೆರವಣಿಗೆಯನ್ನು ನಡೆಸುವ ಮೂಲಕ ಸಂಭ್ರಮಾಚರಣೆ ನಡೆಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರಾದ ಓ. ರಾಜಗೋಪಾಲ್ ಮತ್ತು ಕುಮ್ಮನಂ ರಾಜಶೇಖರನ್ ಅವರು ಸಂಭ್ರಮಾಚರಣೆಯ ನೇತೃತ್ವ ವಹಿಸಿದ್ದರು. ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಅಪಪ್ರಚಾರಕ್ಕೆ ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಭಾರೀ ಹಿನ್ನಡೆಯ ಫಲಿತಾಂಶವೇ ಈ ಗೆಲುವು ಎಂದು ಕುಮ್ಮನಂ ಹೇಳಿದ್ದಾರೆ.
ವಿಡಿಯೊ ನೋಡಿ: ಪಿಚ್ಚರ್ ಪಯಣ – 143, ಸಿನೆಮಾ : ಗಂಗೂಬಾಯಿ ಕಾಠೆವಾಡಿ, ವಿಶ್ಲೇಷಣೆ : ಮೀನಾಕ್ಷಿ ಬಾಳಿ Janashakthi Media