ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ ಅಂತಿಮ ಫಲಿತಾಂಶ ಇನ್ನು ಮೂರು ಗಂಟೆಗಳಲ್ಲಿ ಹೊರಬೀಳಲಿದ್ದು, ಬಿಜೆಪಿ ಹಾಗೂ ಇಂಡಿಯಾ ಒಕ್ಕೂಟಕ್ಕೆ ಬಹುತ ಸಿಗುವುದು ಇನ್ನೂ ಖಚಿತವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಜೆಡಿಯು ಹಾಗೂ ಟಿಡಿಪಿ ನಾಯಕರ ಜೊತೆ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ.
ಸದ್ಯ ಎನ್ ಡಿ ಎ ಮೈತ್ರಿಕೂಟಕ್ಕೆ 289 ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ 233 ಹಾಗೂ ಇತರೆ 21 ಸ್ಥಾನಗಳಲ್ಲಿ ಮುನ್ನಡೆ ಕಾಣುತ್ತಿದೆ. ಎನ್ ಡಿ ಎ ಮೈತ್ರಿಕೂಟದ ಭಾಗವಾಗಿರುವ ಬಿಹಾರದ ನಿತೀಶ್ ಕುಮಾರ ನೇತೃತ್ವದ ಜೆಡಿಯು 14 ಹಾಗೂ ಚಂದ್ರಬಾಬು ನಾಯ್ಡು ಸಾರಥ್ಯದ ಟಿಡಿಯು 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಜೆಡಿಯು ಹಾಗೂ ಟಿಡಿಯು ಒಟ್ಟು 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಕೋಲಾರದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಭರ್ಜರಿ ಗೆಲುವು
ಹಾಗಾಗಿ ಜೆಡಿಯು ಹಾಗೂ ಟಿಡಿಯು ನಾಯಕರ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಇಂಡಿಯಾ ಮೈತ್ರಿಕೂಟದ 233 ಹಾಗೂ ಜೆಡಿಯು ಹಾಗೂ ಟಿಡಿಯು ಒಟ್ಟು 30 ಸೀಟುಗಳು ಸೇರಿಸಿದರೆ ಒಟ್ಟು 266 ಸ್ಥಾನಗಳು ಆಗುತ್ತೆ. ಲೋಕಸಭೆಯ ಚುಕ್ಕಾಣೆ ಹಿಡಿಯಲು ಒಟ್ಟು 272 ಸ್ಥಾನಗಳು ಬೇಕು.
ಇದನ್ನೂ ನೋಡಿ: ಅಮ್ಮ ಎಂಬ ಭಾವಕ್ಕಿರುವ ಕಸುವು ಅನುಭವಿಸಿಯೇ ಅರಿಯಬೇಕು – ಪ್ರತಾಪ್ ಸಿಂಹJanashakthi Media