ಆರ್‌ಎಸ್‌ಎಸ್‌ ಕಾರ್ಯಸೂಚಿಯನ್ನು ಜಾರಿಗೆ ತರುವುದು ಬಿಜೆಪಿ ಉದ್ದೇಶವಾಗಿದೆ: ಮಾಜಿ ಸಚಿವ ಬಿ.ಕೆ ಚಂದ್ರಶೇಖರ್

ಬೆಂಗಳೂರು: ಪಠ್ಯಗಳಲ್ಲಿ ಹೆಡ್ಗೇವಾರ್ ವಿಷಯ ಸೇರಿಸುವ ಮೂಲಕ ಆರ್‌ಎಸ್‌ಎಸ್‌ ಅಜೆಂಡಾವನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಏಳರಿಂದ ಹತ್ತನೇ ತರಗತಿ ಮಕ್ಕಳ ಮೆದುಳಲ್ಲಿ ಕೋಮು ವಿಚಾರಗಳನ್ನು ತುಂಬಲಾಗುತ್ತಿದೆ ಎಂದು ಮಾಜಿ ಸಚಿವ ಮತ್ತು ಪ್ರೋ. ಬಿ ಕೆ ಚಂದ್ರಶೇಖರ್ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,  ಯಾವ ಆರ್‌ಎಸ್‌ಎಸ್‌ ಕಾರ್ಯಕರ್ತರು ಸಹ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿಲ್ಲ. ಅದಕ್ಕೆ ದಾಖಲೆಗಳು ಇಲ್ಲ .ಕೇಶವಾ ಬಲಿರಾಮ್‌ ಹೆಗ್ಡೇವಾರ್‌ ರವರಿಗೆ ದೇಶದ ಕುರಿತು ಅದೆಷ್ಟು ಅಭಿಮಾನ, ಕಾಳಜಿ ಇದೆ ಎಂಬುದು ದೇಶದ ಜನರಿಗೆ ಗೊತ್ತಿರುವ ಸತ್ಯ. ಕೇವಲ ಒಂದು ಧರ್ಮವನ್ನು ಓಲೈಸಿ ಇನ್ನೊಂದು ಧರ್ಮವನ್ನು ದ್ವೇಷಿಸುವ ಹೆಡ್ಗೆವಾರ್‌ ಬಗ್ಗೆ ಮಕ್ಕಳು ಓದುವುದು  ಅಗತ್ಯವಲ್ಲ ಎಂದು ಹೇಳಿದರು.

“ರೋಹಿತ್‌ ಚಕ್ರತೀರ್ಥ ಸಮಿತಿಯಲ್ಲಿ ಬ್ರಾಹ್ಮಣ ಸಮುದಾಯದವರೇ ತುಂಬಿದ್ದಾರೆ. ಈ ಸಮಿತಿಯಲ್ಲಿ ದಲಿತರನ್ನು ಏಕೆ ಸೇರಿಸಲಿಲ್ಲ? ಹಿಂದುಳಿದ ವರ್ಗದವರಿಗೆ ಪ್ರಾತಿನಿಧ್ಯವಾದರೂ ಬೇಡವೇ? ನಾನು ಕೂಡ ಹುಟ್ಟಿನಿಂದ ಬ್ರಾಹ್ಮಣ. ಆದರೆ ತಮಗೆ ಅನ್ಯಾಯವಾಗಿರುವ ವಿಚಾರವಾಗಿ ದಲಿತರೇ ಹೇಳಬೇಕಲ್ಲವೇ? ಇದನ್ನು ಬ್ರಾಹ್ಮಣರು ಹೇಳುತ್ತಾರಾ?” ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ಎನ್‌ಸಿಆರ್‌ಟಿಗೆ ಅನೌಪಚಾರಿಕ ಆದೇಶ ಮಾಡಿದ್ದರಿಂದ , ಪ್ರಕಾಶ್ ಜಾವಡೇಕರ್ ಅವರು ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಸಿಬಿಎಸ್‌ಸಿ ಶಾಲೆ ಗಳ 180 ಪಠ್ಯಪುಸ್ತಕಗಳಲ್ಲಿ 1,334 ಪಾಠಗಳನ್ನು ಬದಲಾವಣೆ ಮಾಡಿಸಿದ್ದರು. “ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ʼಈಗ ಇರುವುದು ಸುಳ್ಳು ಚರಿತ್ರೆ, ನಾವು ನೈಜ ಚರಿತ್ರೆ ಬರೆಯುತ್ತಿದ್ದೇವೆʼ ಎಂದು ಹೇಳಿದ್ದಾರೆ. ಈ ಸುಳ್ಳು ಇತಿಹಾಸ ಬರೆದವರು ಯಾರು, ಯಾವಾಗ? ನೈಜ ಚರಿತ್ರೆ ಬರೆದವರು ಯಾರು? ಇದನ್ನು ಬಿಜೆಪಿಯವರು ಓದಿದ್ದಾರಾ” ಎಂದು ಪ್ರಶ್ನಿಸಿದರು.

Donate Janashakthi Media

Leave a Reply

Your email address will not be published. Required fields are marked *