ದೆಹಲಿ: ಭಾರತದಲ್ಲಿ ಕೊವಿಡ್-19 ಸಾಂಕ್ರಾಮಿಕ ರೋಗ ನಿವಾರಣೆಯಲ್ಲಿ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಗಂಭೀರವಾಗಿ ತರಾಟೆಯನ್ನು ತೆಗೆದುಕೊಂಡು ರಾಹುಲ್ ಗಾಂಧಿ.
ವಿಡಿಯೋ ಸಂವಾದ ಮೂಲಕ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ʻಕೋವಿಡ್ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಸರಕಾರವು ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಟೀಕಿಸಿದ್ದಾರೆ. ಕೇಂದ್ರ ಸರ್ಕಾರವು ಕೊರೊನಾದ ಅಲೆಯನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಈಗಿನ ನಿಧಾನಗತಿಯಲ್ಲಿ ಲಸಿಕಾ ಅಭಿಯಾನ ಮುಂದುವರಿದರೆ ಕೊರೊನಾ ಸೋಂಕಿನ ಹಲವು ಅಲೆಗಳನ್ನು ನಾವು ಎದುರಿಸಬೇಕಾಗುತ್ತದೆʼ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1.86 ಲಕ್ಷ ಹೊಸ ಕೋವಿಡ್-19 ಪ್ರಕರಣಗಳುು ಪತ್ತೆ
ಕೊರೊನಾದ ಆರಂಭದಲ್ಲಿ ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ, ಎರಡನೇ ಅಲೆಯು ಪ್ರಧಾನ ಮಂತ್ರಿಯವರ ಜವಾಬ್ದಾರಿಯಿಂದ ಹಾಗೂ ಎದುರಾದ ಗಂಭೀರ ಸಮಸ್ಯೆಯಿಂದ ಉಂಟಾಗಿದೆ ಎಂದು ರಾಹುಲ್ ಗಾಂಧಿ ನರೇಂದ್ರ ಮೋದಿ ವಿರುದ್ಧ ಗಂಭೀರವಾಗಿ ಆರೋಪ ಮಾಡಿದ್ದಾರೆ.
ಕೋವಿಡ್ ಎರಡನೇ ಅಲೆಗೆ ಪ್ರಧಾನಮಂತ್ರಿ ಅನುಸರಿಸುವ ಗೊಂದಲದ ನಿರ್ಧಾರಗಳ ಕಾರಣ ಕಾರಣ. ಅವರಿಗೆ ಕೋವಿಡ್ ಅನ್ನು ಅರ್ಥ ಮಾಡಿಕೊಳ್ಳಲು ಆಗಿಲ್ಲ. ಕೋವಿಡ್ ಸಾವಿನ ಸಂಖ್ಯೆಯಲ್ಲಿಯೂ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಧಿಕಾರಿಗಳು, ವಿರೋಧ ಪಕ್ಷದ ನಾಯಕರ ಮಾತುಗಳನ್ನು ಕೇಳಿ, ನಿಮಗೆ ಮಾಹಿತಿ ಕೊರತೆ ಇದೆ ಹಾಗೂ ಸಮಯ ಕೂಡಾ ಕಡಿಮೆ ಇದೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆರೋಪಿಸಿದರು.
ಭಾರತದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ತಳಿ ಮತ್ತು ಅದರ ವಿರುದ್ಧದ ಹೋರಾಟದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೊತ್ತೇ ಇಲ್ಲ ಎಂದು ರಾಹುಲ್ ಆರೋಪಿಸಿದರು.
ಇದನ್ನು ಓದಿ: ಕೋವಿಡ್ ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ 3ಲಕ್ಷ ರೂ ಪರಿಹಾರ. ಉಚಿತ ಶಿಕ್ಷಣ
ಪ್ರಧಾನಿ ಮೋದಿಯೂ ಒಮ್ಮೆಗೆ ಒಮ್ಮೆಗೆ ಒಂದು ಸಂಗತಿಗಿಂತ ಹೆಚ್ಚಿನದನ್ನು ನಿಭಾಯಿಸಲು ಸಾಧ್ಯವಿಲ್ಲ. ಏನಾದರೂ ಆದರೆ ಒಮ್ಮೆಗೆ ಒಂದು ವಿಚಾರದ ಬಗ್ಗೆ ಮಾತ್ರ ಗಮನಹರಿಸುತ್ತಾರೆ. ಹಾಗಾಗಿ ಪ್ರಧಾನಮಂತ್ರಿ ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದೂ ಟೀಕಿಸಿದರು.
ಪ್ರಧಾನ ಮಂತ್ರಿಯೇ ಸೋಂಕಿನ ಎರಡನೇ ಅಲೆಗೆ ಕಾರಣಕರ್ತರು. ಅವರು ಕೊರೊನಾ ನಿಯಂತ್ರಿಸುವ ವಿಧಾನವೇ ಸಮಪರ್ಕವಾಗಿಲ್ಲ. ಅದರ ಪರಿಣಾಮವಾಗಿ ಹಡಗು ಎತ್ತ ಸಾಗುತ್ತಿದೆ ಎಂಬ ಸುಳಿವು ಇಲ್ಲದೆ ಮುಂದುವರಿದಂತಾಗಿದೆ ಎಂದು ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೋವಿಡ್ ವಿರುದ್ಧ ಜನ ಹೋರಾಡುತ್ತಿರುವ ತೀವ್ರತೆಯನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತಿಲ್ಲ. ಈ ವೈರಸ್ ರೂಪಾಂತರದ ಅಪಾಯಗಳನ್ನು ಅರ್ಥಮಾಡಿಕೊಂಡು ಎಚ್ಚೆತ್ತುಕೊಳ್ಳಿ. ಕೋವಿಡ್ ನಿಯಂತ್ರಣ ಬಗ್ಗೆ ಕಾಂಗ್ರೆಸ್ ಪಕ್ಷವು ಸರ್ಕಾರಕ್ಕೆ ಪದೇ ಪದೇ ಎಚ್ಚರಿಕೆ ನೀಡಿದೆ. ಇದು ವಿಕಾಸಗೊಳ್ಳುತ್ತಿರುವ ರೋಗ. ಲಾಕ್‌ಡೌನ್‌ಗಳು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ದೂರವಿರುವುದು ತಾತ್ಕಾಲಿಕ ಪರಿಹಾರಗಳು. ಆದರೆ, ಲಸಿಕೆ ಶಾಶ್ವತ ಪರಿಹಾರವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ನಿಮ್ಮ ಅಕ್ಕಪಕ್ಕದಲ್ಲಿನ ಕೋವಿಡ್ ಪ್ರಕರಣಗಳನ್ನು ಸುಲಭವಾಗಿ ತಿಳಿಯಬಹುದು! ಹೇಗೆ ?
ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗಗೊಳಿಸಿ, ಅದೊಂದೇ ಪರಿಹಾರ ಎಂದಿರುವ ಅವರು ಕೊವಿಡ್-19 ಹಾಗೂ ಲಾಕ್ಡೌನ್ಗೆ ಲಸಿಕೆಯೊಂದೇ ಪ್ರಮುಖ ಸಾಧನವಾಗಿದೆ. ಲಸಿಕೆ ನೀಡಿಕೆಯಲ್ಲಿ ಸರಿಯಾದ ಕ್ರಮಕೈಗೊಳ್ಳದೆ ಹೋದರೆ ಕೊರೊನಾದ ವಿವಿಧ ಅಲೆಗಳನ್ನು ನಾವು ಎದುರಿಸಬೇಕಾಗಬಹುದು ಎಂದು ರಾಹುಲ್ ಮುನ್ಸೂಚನೆ ಕೊಟ್ಟಿದ್ದಾರೆ.
ದೇಶದಲ್ಲಿ ಕೇವಲ ಶೇ.3ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಕೊವಿಡ್ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸದೆ ಬಾಗಿಲು ಮುಚ್ಚಿದೆ. ಕೊವಿಡ್ ಲಸಿಕೆ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇನೆ. ಕೇಂದ್ರ ಸರ್ಕಾರ ಕೊರೊನಾ ಬಗ್ಗೆ ಅರ್ಥಮಾಡಿಕೊಂಡಿಲ್ಲ. ವಿಪಕ್ಷಗಳು ಸರ್ಕಾರದ ಶತ್ರುಗಳಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ ವಿರುದ್ಧ ಗೆಲುವು ಸಾಧಿಸಿದೆವು ಎಂದು ಬೇಗನೇ ಹೇಳಿ, ಜಾಗತಿಕವಾಗಿ ದೊಡ್ಡವರಾಗುವುದಕ್ಕೆ ಲಸಿಕೆಯ ರಫ್ತು ಮಾಡಿರುವುದನ್ನು ಅವರು ಖಂಡಿಸಿದ್ದಾರೆ. ಸರ್ಕಾರ ಸತ್ಯಸಂದವಾಗಿರಬೇಕು. ಇದು ದೇಶದ ಭವಿಷ್ಯದ, ಜನರ ಜೀವದ ಪ್ರಶ್ನೆಯಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.