ರಾಜ್ಯಪಾಲರ ವಿರುದ್ಧ ಸುದ್ದಿಗೋಷ್ಠಿ – ಕಾಂಗ್ರೆಸ್ ಕಾರ್ಯಕರ್ತನಿಗೆ ಹೃದಯಾಘಾತ, ಸಾವು

ಬೆಂಗಳೂರು :ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಸುದ್ದಿಗೋಷ್ಠಿ ನಡೆಸುವ ವೇಳೆಯೇ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಸಂಘದ ಮುಖಂಡ ಸಿಕೆ ರವಿಚಂದ್ರನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕೂಡಲೇ ಅವರನ್ನು ಹತ್ತಿರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದರೂ ಅವರು ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಣೆ ಮಾಡಿದರು.

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಲೈವ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾರೆ. ಆಗ ಎಲ್ಲ ಕ್ಯಾಮೆರಾಗಳ ಮುಂದೆ ಮೈಕ್ ಹಿಡಿದು ಮಾತನಾಡುತ್ತಿರುವಾಗ ಒಮ್ಮೆ ಹೃದಯಾಘಾತ ಆಗಿದ್ದು, ಶಾಕ್ ಹೊಡೆದವರಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಅವರಿಗೆ ಸಾವರಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಕೈಯಲ್ಲಿದ್ದ ಮೈಕ್ ಅನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಲೇ ಬೇರೆ ಯಾವುದೇ ಸಪೋರ್ಟ್‌ ಅನ್ನೂ ಹಿಡಿದುಕೊಳ್ಳಲಾಗದೇ ತಾವು ಕುಳಿತ ಮುಂಭಾಗಕ್ಕೆ ಕುಸಿದು ಬಿದ್ದಿದ್ದಾರೆ.

ಕೋಲಾರದ ಚಿಂತಾಮಣಿ ಮೂಲದ ಸಿ.ಕೆ ರವಿಚಂದ್ರನ್ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಜೊತೆ ಓಡನಾಟ ಹೊಂದಿದ್ದರು. ಜೊತೆಗೆ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಹ ಓಡಾನಾಟ ಇತ್ತು. ಇತ್ತಿಚ್ಚಿಗೆಷ್ಟೆ ಕಾಂಗ್ರೆಸ್ ಸೇರಿಕೊಂಡಿದ್ದ ರವಿಚಂದ್ರನ್, ಪ್ರಚಾರ ಸಮಿತಿ ಸದಸ್ಯರಾಗಿದ್ದರು. ಬೆಂಗಳೂರು ನಗರದ ಆರ್.ಆರ್. ನಗರದ ಚನ್ನಸಂದ್ರದಲ್ಲಿ ವಾಸವಾಗಿದ್ದರು. ಅಮ್ಮ ಕಾನ್ವೆಂಟ್ ಎಂಬ ಸ್ಕೂಲ್ ನಡೆಸುತ್ತಿದ್ದರು. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೊಟ್ಟ ಹಿನ್ನಲೆಯಲ್ಲಿ ಇಂದು ಕುರುಬ ಸಂಘದಿಂದ ಸುದ್ದಿಗೋಷ್ಠಿ ಕರೆದಿದ್ದು, ಮಾತನಾಡುವಾಗಲೇ ಕುಸಿದುಬಿದ್ದು ದುರ್ಘಟನೆ ಸಂಭವಿಸಿದೆ.

 

Donate Janashakthi Media

Leave a Reply

Your email address will not be published. Required fields are marked *