ಉತ್ತರಾಖಂಡದಲ್ಲಿ ಅಂಚೆ ಮತಪತ್ರ ತಿದ್ದುತ್ತಿರುವ ವಿಡಿಯೋ ವೈರಲ್

ಡೆಹ್ರಾಡೂನ್: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊಂದನ್ನು ಪೋಸ್ಟ್ ಮಾಡಿದ್ದು, ಉತ್ತರಾಖಂಡದಲ್ಲಿ ವ್ಯಕ್ತಿಯೊಬ್ಬರು ಅಂಚೆ ಮತ ಪತ್ರಗಳನ್ನು ತಿದ್ದುತ್ತಿರುವುದು ತಮ್ಮ ಸಾಮಾಜಿಕ ಚಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ಈ ವಿಡಿಯೊವನ್ನು ಉಲ್ಲೇಖಿಸಿರುವ ಅವರು ಉತ್ತರಾಖಂಡದಲ್ಲಿ ಮತಪತ್ರಗಳನ್ನು ತಿದ್ದಲಾಗುತ್ತಿದೆ ಎಂದಿದ್ದಾರೆ.‌

ತಮ್ಮ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿರುವ ಹರೀಶ್ ರಾವತ್ ‘ಇದು ಎಲ್ಲರ ಗಮನಕ್ಕೆ, ಮತಪತ್ರಗಳಿರುವ ಕೇಂದ್ರದಲ್ಲಿ ಒಬ್ಬ ವ್ಯಕ್ತಿ ಹಲವಾರು ಮತಪತ್ರಗಳಿಗೆ ಟಿಕ್ ಮತ್ತು ಸಹಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಚುನಾವಣಾ ಆಯೋಗವು ಇದನ್ನು ಗಮನಿಸುತ್ತದೆಯೇ? ’ಎಂದು ಪ್ರಶ್ನಿಸಿದ್ದಾರೆ.

ರಾವತ್ ಅವರ ವಕ್ತಾರ ಸುರೇಂದ್ರ ಕುಮಾರ್ ಮಾತನಾಡಿ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿಲ್ಲ. ಆದರೆ, ಅವರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಬಹುದು. ಈ ವಿಡಿಯೊ ಉತ್ತರಾಖಂಡದಿಂದಲೇ ಬಂದಿದೆ ಎಂದ ಅವರು, ಇದರ ಮೂಲವನ್ನು ಬಹಿರಂಗ ಪಡಿಸಲು ನಿರಾಕರಿಸಿದರು.

ಕಾಂಗ್ರೆಸ್ ನಾಯಕರು ಇದನ್ನು ಪ್ರಜಾಪ್ರಭುತ್ವದ ಅಣಕ ಎಂದು ಬಣ್ಣಿಸಿದ್ದು, ಚುನಾವಣಾ ಆಯೋಗವು ವಿಡಿಯೊವನ್ನು ಗಮನದಲ್ಲಿಟ್ಟುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ರಾವತ್ ಅವರ ಟ್ವೀಟ್ ಅನ್ನು ಉತ್ತರಾಖಂಡ ರಾಜ್ಯ ಕಾಂಗ್ರೆಸ್ ರಿಟ್ವೀಟ್ ಮಾಡಿದೆ.

ಈ ಬಗ್ಗೆ ಉತ್ತರಾಖಂಡ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರೀತಮ್ ಸಿಂಗ್ ವಿಡಿಯೋವನ್ನು ಗಮನಿಸಿದರೆ, ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡುತ್ತಿದೆ. ಸೇನಾ ಕೇಂದ್ರದ ವ್ಯಕ್ತಿಯೊಬ್ಬರು ತಮಗೆ ಬೇಕಾದ ಪಕ್ಷದ ಪರವಾಗಿ ಹಲವಾರು ಅಂಚೆ ಮತಪತ್ರಗಳಿಗೆ ಟಿಕ್ ಮತ್ತು ಸಹಿ ಹಾಕುತ್ತಿರುವುದನ್ನು ಕಾಣಬಹುದು. ಚುನಾವಣಾ ಆಯೋಗವು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Donate Janashakthi Media

Leave a Reply

Your email address will not be published. Required fields are marked *