ಕಾಂಗ್ರೆಸ್ ಕೃಪಾಕಟಾಕ್ಷದಲ್ಲಿ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು?

ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿಯೇ ಸಾಂಸ್ಕೃತಿಕ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಜತೆಗೆ ಸಭೆ ನಡೆಸಿರುವ ಕ್ರಮಕ್ಕೆ ಸಾಂಸ್ಕೃತಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ಸಭೆಯಲ್ಲಿ ಪಾಲ್ಗೊಂಡ ಅಕಾಡೆಮಿಗಳ ಅಧ್ಯಕ್ಷರ ನಡೆಯ ಬಗ್ಗೆಯೂ ಸಾಹಿತ್ಯ, ರಂಗಭೂಮಿ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಂಸ್ಕೃತಿಕ ಅಕಾಡೆಮಿಗಳು ಕಾಂಗ್ರೆಸ್ ಪಕ್ಷದ ಶಾಖೆಗಳೇ? ಇವರುಗಳು ಕಾಂಗ್ರೆಸ್‌ನ ಸದಸ್ಯರೆ ಎಂದು ಪ್ರಶ್ನಿಸಿದ್ದಾರೆ.

ನಿಗಮ ಮಂಡಳಿಗಳ ಅಧ್ಯಕ್ಷರ ಜತೆಗೆ ವಿವಿಧ ಸಾಂಸ್ಕೃತಿಕ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಜತೆಗೆ ಗುರುವಾರ ಸಭೆ ನಡೆಸಿದ್ದ ಡಿ.ಕೆ. ಶಿವಕುಮಾರ್, ‘ಈ ಹುದ್ದೆಗಳು ರಾಜಕಾರಣಕ್ಕೆ ಮೆಟ್ಟಿಲುಗಳಾಗಿದ್ದು, ಕೈ ಮತ್ತು ಬಾಯಿ ಶುದ್ಧವಾಗಿರಬೇಕು’ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡುವಂತೆ ಮಾತನಾಡಿದ್ದರು.

ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಭಾಷೆಗೆ ಸಂಬಂಧಿಸಿದ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಕರೆದು ಸಭೆ ನಡೆಸಿದ್ದು ಅತ್ಯಂತ ವಿಷಾದನೀಯ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ತಿಳಿಸಿದ್ದಾರೆ. ಸಾಂಸ್ಕೃತಿಕ ಅಕಾಡೆಮಿ ಮತ್ತು ಪ್ರಾಧಿಕಾರಗಳು ಉಳಿದ ಬೋರ್ಡ್ ಮತ್ತು ಪ್ರಾಧಿಕಾರಗಳಂತಲ್ಲ. ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಿಸಿದ ಈ ಅಕಾಡೆಮಿ, ಪ್ರಾಧಿಕಾರಗಳು ವಿಷಯ ತಜ್ಞರ ತಜ್ಞತೆಯ ನೆಲೆಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಗಳು. ಇವುಗಳಿಗೆ ಸರಕಾರವೇ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿದರೂ, ಅದು ತಜ್ಞತೆಯ ಮತ್ತು ಆ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಮಾನದಂಡವಾಗಿ ಇಟ್ಟುಕೊಂಡು ನೇಮಕವಾಗಿರುತ್ತದೆಯೇ ಹೊರತು ರಾಜಕೀಯ ಅಥವಾ ಪಕ್ಷ ರಾಜಕಾರಣ ಮಾನದಂಡವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಂತಹ ತಜ್ಞರನ್ನು ನೇಮಿಸುವುದು ವ್ಯಕ್ತಿಯ ಘನತೆಗಿಂತ ಸರಕಾರ ಹಾಗೂ ಸಂಸ್ಥೆಯ ಘನತೆಯನ್ನು ಹೆಚ್ಚಿಸುತ್ತದೆ. ನೇಮಕವಾಗುವ ಅಧ್ಯಕ್ಷರು ಮತ್ತು ಸದಸ್ಯರು ತಾವು ನೇಮಕವಾದ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆಯೇ ಹೊರತು ರಾಜಕೀಯ ಪಕ್ಷವನ್ನಲ್ಲ. ಪಕ್ಷದ ಕಚೇರಿಯಲ್ಲಿ ಆಯೋಜಿಸಿದ ಈ ಸಭೆಗೆ ಅಧ್ಯಕ್ಷರು ಹಾಗೂ ಸದಸ್ಯರು ಯಾಕೆ ಭಾಗವಹಿಸಿದರು ಎಂದು ಪ್ರಶ್ನಿಸಿದ್ದಾರೆ.

ಸಮುದಾಯ ಸಂಘಟನೆಯ ಹಿರಿಯ ನಾಯಕ ಟಿ.ಸುರೇಂದ್ರರಾವ್ ಪ್ರತಿಕ್ರಿಯಿಸಿದ್ದು, ಸಾಂಸ್ಕೃತಿಕ ಅಧಃಪತನದ ಪರಾಕಾಷ್ಠೆ! ಎಂದು ಕಿಡಿ ಕಾರಿದ್ದಾರೆ.

ಮೊನ್ನೆ ಅಧಿಕಾರ ಸ್ವೀಕರಿಸಿದ ವಿವಿಧ ಅಕಾಡೆಮಿಗಳು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರುಗಳ ಸಭೆಯನ್ನು ಕೆಪಿಸಿಸಿ (ಕಾಂಗ್ರೆಸ್ ಪಕ್ಷದ ಕಛೇರಿ) ಯಲ್ಲಿ ಕರೆದು ಪಕ್ಷದ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳು ‘ಉಪದೇಶ’ ಆತಂಕದ ವಿಚಾರವಾಗಿದೆ.

ನನಗೆ ತಿಳಿದಂತೆ ಈ ಹಿಂದೆ ಯಾವಾಗಲೂ ಇಂತಹ ಘಟನೆ ನಡೆದ ನೆನಪಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಈ ಅಕಾಡೆಮಿಗಳು ಹಾಗೂ ನಿಗಮಗಳು ನಡೆದುಕೊಳ್ಳಬೇಕಾದ ರೀತಿನೀತಿಗಳ ಬಗ್ಗೆ ಉಪದೇಶ ನೀಡಬಹುದು. ಮತ್ತು ಅಂತಹ ಸಭೆಯನ್ನು ಸರ್ಕಾರದ ಕಛೇರಿಯಲ್ಲಿ – ವಿಧಾನ ಸೌಧದಲ್ಲಿ – ಕರೆದು ಮಾಡಬಹುದಷ್ಟೆ. ಆದರೆ ಆಳುವ ಪಕ್ಷದ ಕಛೇರಿಯಲ್ಲಿ ಸಭೆ ಕರೆದು ಉಪದೇಶ ನೀಡಿರುವುದು ಯಾವುದೇ ಕಾರಣಕ್ಕೂ ಸರಿಯಾದ ನಡೆಯಲ್ಲ.

ಸಾಂಸ್ಕೃತಿಕ ಲೋಕದ ಹಿರಿಯರು ಸರ್ಕಾರದ ಗಮನಕ್ಕೆ ತಂದು ಇಂತಹ ಸಭೆ ಅನುಚಿತವಾದುದು ಎಂದು ಹೇಳಿ ಸಭೆಯ ಸ್ಥಳವನ್ನು ಬದಲಾಯಿಸಲು ಸಲಹೆ ನೀಡಬಹುದಿತ್ತು. ಹಾಗೇನೂ ಮಾಡದೆ ಕರೆದಲ್ಲಿಗೆ ಸಭೆಗೆ ಹೋಗಿರುವುದು ಒಪ್ಪತಕ್ಕುದಲ್ಲ ಎಂದು ಹೇಳಲು ಬಯಸುತ್ತೇನೆ. ಇದು ಸಾಂಸ್ಕೃತಿಕ ಅಧಃಪತನದ ಪರಾಕಾಷ್ಠೆಯಲ್ಲದೆ ಮತ್ತೇನೂ ಅಲ್ಲ ಎಂದಿದ್ದಾರೆ.

ಹಿರಿಯ ಪತ್ರಕರ್ತ ಆರ್ ಜಿ ಹಳ್ಳಿ ನಾಗರಾಜ ಈ ಘಟನೆಯನ್ನು ಖಂಡಿಸಿದ್ದಾರೆ. ‘ಅಕಾಡೆಮಿ, ಪ್ರಾಧಿಕಾರಗಳು ಕಾಂಗ್ರೆಸ್ ಪಕ್ಷ, ಸರ್ಕಾರದ ಅಡಿಯಾಳುಗಳಲ್ಲ. ಅವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸ್ವಾಯತ್ತ ಸಂಸ್ಥೆ ಅಲ್ಲವೆ’ ಎಂದು ಪ್ರಶ್ನಿಸಿದ್ದಾರೆ.

ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.‌ಮಹಾಂತೇಶ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಕೃಪಾಟಾಕ್ಷದಲ್ಲಿ
ಸಾಹಿತಿ ಕಲಾವಿದರು ಬುದ್ದಿಜೀವಿಗಳು ಇರುವುದು ಕಳವಳಕಾರಿ ವಿಚಾರ ಎಂದು ಘಟನೆಯನ್ನು ಖಂಡಿಸಿದ್ದಾರೆ.

ನಿಜವಾಗಿಯೂ ಇಲ್ಲಿ ವಿವಿಧ ಅಕಾಡೆಮಿಗಳಿಗೆ ನೇಮಕವಾಗಿರುವ ಅಧ್ಯಕ್ಷರುಗಳು, ಸದಸ್ಯರುಗಳಲ್ಲಿ ಬಹುತೇಕ ಜನರು ಕಾಂಗ್ರೆಸ್ ಗೆಲ್ಲುವಿಗಾಗಿ ಸಾಕಷ್ಟು ಶ್ರಮಿಸಿದರವು ಇನ್ನೂ ಕೆಲವರು ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದವರು.

ಈ ನೇಮಕವಾಗಿರುವ ಬಹುತೇಕರು ಕರ್ನಾಟಕದಲ್ಲಿ ಹಲವು ದಶಕಗಳಿಂದ ಸಾಹಿತ್ಯ, ಸಾಂಸ್ಕೃತಿಕ, ಶಿಕ್ಷಣ,ಮಾಧ್ಯಮ ಹಾಗೂ ಇತರೆ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ ತಮ್ಮದೇ ಸ್ವತಂತ್ರವಾದ ಗೌರವ,ಅಸ್ತಿತ್ವವನ್ನು ಕಂಡುಕೊಂಡವರು ಎಷ್ಟೋ ಬಾರಿ ಯಾವುದೇ ‌ಸರ್ಕಾರ ತಪ್ಪು ಮಾಡಿದಾಗ ಅದರ ವಿರುದ್ಧ ಧ್ವನಿ ಎತ್ತಿದವರು ಇದ್ದಾರೆ.

ಇಂತಹವರನ್ನು ಆಯ್ಕೆ ಸಮಿತಿ ಸರ್ಕಾರ ಗುರುತಿಸಿ,ಗೌರವಿಸಿ ಅವರನ್ನು ವಿವಿಧ ಅಕಾಡೆಮಿಗಳಿಗೆ ನೇಮಿಸಿದೆ ಇದು ಸರ್ಕಾರಕ್ಕೆ ನಿಜಕ್ಕೂ ಅಭಿಮಾನದ ಸಂಗತಿಯಾಗಬೇಕಿತ್ತು. ಆದರೆ ದುರಂತ ವೆಂಬಂತೆ ವಿವಿಧ ಅಕಾಡೆಮಿ ಅಧ್ಯಕ್ಷರು ಸದಸ್ಯರು ಪೈಪೋಟಿಗೆ ಬಿದ್ದು ಕಾಂಗ್ರೆಸ್ ಕಚೇರಿಯಲ್ಲಿ ಕುಳಿತಿರುವುದು ಕಾಂಗ್ರೆಸ್ ಅಧ್ಯಕ್ಷರನ್ನು ಸನ್ಮಾನಿಸಿರುವುದ ಕಂಡಾಗ ಇದು ಕರ್ನಾಟಕ ಸಾಹಿತ್ಯಿಕ, ಸಾಂಸ್ಕೃತಿಕ ‌ಕ್ಷೇತ್ರಕ್ಕೆ ಆದ ಅವಮಾನವಲ್ಲವೇ…? ಎಂದು ಪ್ರಶ್ನಿಸಿದ್ದಾರೆ.

ಸಮುದಾಯ ಸಂಘಟನೆಯ ಹಿರಿಯ ನಾಯಕ ಟಿ.ಸುರೇಂದ್ರರಾವ್ ಪ್ರತಿಕ್ರಿಯಿಸಿದ್ದು, ಸಾಂಸ್ಕೃತಿಕ ಅಧಃಪತನದ ಪರಾಕಾಷ್ಠೆ! ಎಂದು ಕಿಡಿ ಕಾರಿದ್ದಾರೆ.

ಮೊನ್ನೆ ಅಧಿಕಾರ ಸ್ವೀಕರಿಸಿದ ವಿವಿಧ ಅಕಾಡೆಮಿಗಳು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರುಗಳ ಸಭೆಯನ್ನು ಕೆಪಿಸಿಸಿ (ಕಾಂಗ್ರೆಸ್ ಪಕ್ಷದ ಕಛೇರಿ) ಯಲ್ಲಿ ಕರೆದು ಪಕ್ಷದ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳು ‘ಉಪದೇಶ’ ಪಡೆದಿರುವುದು ಇಡೀ ಸಾಹಿತ್ಯಿಕ, ಹಾಗೂ ಸಾಂಸ್ಕೃತಿಕ ಕ್ಷೇತ್ರ ತಲೆ ತಗ್ಗಿಸುವ ವಿಚಾರವಾಗಿದೆ.

ನನಗೆ ತಿಳಿದಂತೆ ಈ ಹಿಂದೆ ಯಾವಾಗಲೂ ಇಂತಹ ಘಟನೆ ನಡೆದ ನೆನಪಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಈ ಅಕಾಡೆಮಿಗಳು ಹಾಗೂ ನಿಗಮಗಳು ನಡೆದುಕೊಳ್ಳಬೇಕಾದ ರೀತಿನೀತಿಗಳ ಬಗ್ಗೆ ಉಪದೇಶ ನೀಡಬಹುದು. ಮತ್ತು ಅಂತಹ ಸಭೆಯನ್ನು ಸರ್ಕಾರದ ಕಛೇರಿಯಲ್ಲಿ – ವಿಧಾನ ಸೌಧದಲ್ಲಿ – ಕರೆದು ಮಾಡಬಹುದಷ್ಟೆ. ಆದರೆ ಆಳುವ ಪಕ್ಷದ ಕಛೇರಿಯಲ್ಲಿ ಸಭೆ ಕರೆದು ಉಪದೇಶ ನೀಡಿರುವುದು ಯಾವುದೇ ಕಾರಣಕ್ಕೂ ಸರಿಯಾದ ನಡೆಯಲ್ಲ.

ಸಾಂಸ್ಕೃತಿಕ ಲೋಕದ ಹಿರಿಯರು ಸರ್ಕಾರದ ಗಮನಕ್ಕೆ ತಂದು ಇಂತಹ ಸಭೆ ಅನುಚಿತವಾದುದು ಎಂದು ಹೇಳಿ ಸಭೆಯ ಸ್ಥಳವನ್ನು ಬದಲಾಯಿಸಲು ಸಲಹೆ ನೀಡಬಹುದಿತ್ತು. ಹಾಗೇನೂ ಮಾಡದೆ ಕರೆದಲ್ಲಿಗೆ ಸಭೆಗೆ ಹೋಗಿರುವುದು ಒಪ್ಪತಕ್ಕುದಲ್ಲ ಎಂದು ಹೇಳಲು ಬಯಸುತ್ತೇನೆ. ಇದು ಸಾಂಸ್ಕೃತಿಕ ಅಧಃಪತನದ ಪರಾಕಾಷ್ಠೆಯಲ್ಲದೆ ಮತ್ತೇನೂ ಅಲ್ಲ ಎಂದಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *