ಚಾಮರಾಜನಗರ : ಲೋಕಸಭಾ ಚುನಾವಣೆಯ ಮತ ಎಣಿಕೆ ಈಗಾಗಲೇ ನಡೆಯುತ್ತಿದ್ದು, ಆರಂಭಿ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚಾಮರಾಜನಗರ
ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ಹಿನ್ನಡೆ ಅನುಭವಿಸಿದ್ದಾರೆ. ಅಂಚೆ ಮತಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ ನಿಧಾನವಾಗಿ ಹಿನ್ನಡೆ ಅನುಭವಿಸಲು ಆರಂಭಿಸಿದರು. ಚಾಮರಾಜನಗರ
ಮೊದಲ ಮತ್ತು ಎರಡನೇ ಸುತ್ತಿನ ಎಣಿಕೆ ಮುಕ್ತಾಯವಾದ ಬಳಿಕ ಎರಡು ಸುತ್ತಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೆ ಮುನ್ನಡೆಯಲ್ಲಿದ್ದರು. ಮೊದಲನೇ ಸುತ್ತಿನಲ್ಲಿ 5263 ಮತ್ತು ಎರಡನೇ ಸುತ್ತಿನಲ್ಲಿ 2557 ಮುನ್ನಡೆಯಲ್ಲಿದ್ದರು.
ಇದನ್ನು ಓದಿ : ಚುನಾವಣಾ ಎಕ್ಸಿಟ್ ಪೋಲ್‍ಗಳು-ಎಷ್ಟು ಸತ್ಯ, ಎಷ್ಟು ಜೊಳ್ಳು?
ಮೂರನೇ ಸುತ್ತಿನ ಎಣಿಕೆಯಲ್ಲಿ ಒಟ್ಟು 1,19,389 ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ತಮ್ಮದಾಗಿಸಿಕೊಂಡರು. ಬಿಜೆಪಿ ಅಭ್ಯರ್ಥಿ ಬಾಲರಾಜು 95,856 ಮತಗಳನ್ನು ಪಡೆದರು.
30,779ಮತಗಳಿಂದ ಸುನೀಲ್ ಬೋಸ್ ಮುನ್ನಡೆ
4 ನೇ ಸುತ್ತಿನಲ್ಲಿ 24 ಸಾವಿರ ಲೀಡ್ ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್, ಆರಂಭದಿಂದಲೂ ಸತತವಾಗಿ ಮುನ್ನಡೆ ಮತ ಹೆಚ್ಚಿಸಿಕೊಳ್ಳುತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ. ಈವರೆಗೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ 1,50,701 ಮತ್ತು ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜುಗೆ 1,19,922 ಮತಗಳು ಬಂದಿವೆ.
ಇದನ್ನು ನೋಡಿ : ಚರ್ಚೆ| ಈ ಬಾರಿ ಮೋದಿ ಅಧಿಕಾರ ಕಳೆದುಕೊಳ್ಳುತ್ತಾರಾ? Janashakthi Media