ಕಾಂಗ್ರೆಸ್ ಹೈಕಮಾಂಡ್ ಮುಖಂಡರಿಂದ ಸಾಧನೆ ತೋರದ ಸಚಿವರಿಗೆ ಕ್ಲಾಸ್

ಬೆಂಗಳೂರು: ಇಂದು, ಭಾನುವಾರ ಕಾಂಗ್ರೆಸ್ ಹೈಕಮಾಂಡ್ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯ ಸಚಿವ ಸಂಪುಟದ ಸದಸ್ಯರ ಬಗ್ಗೆ ನಿರೀಕ್ಷೆಯಂತೆ ತಾವು ಪಡೆದಿರುವ ಅಂತರಿಕ ವರದಿ ಸಮೇತ ನಗರಕ್ಕೆ ಆಗಮಿಸ ಲಿದ್ದು, ಸಾಧನೆ ತೋರದ ಸಚಿವರಿಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.

ಬಾನುವಾರ ಮಧ್ಯಾಹ್ನ 12 ಗಂಟೆಗೆ ಸುರ್ಜೇವಾಲಾ ಹಾಗೂ ವೇಣುಗೋಪಾಲ್ ನಗರಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 4 ಗಂಟೆಗೆ ಮುಖ್ಯಮಂತ್ರಿಯವರ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾ‌ರ್ ಆದಿಯಾಗಿ ಎಲ್ಲ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.

ಬ್ದಾರಿಯನ್ನು ಯಾರಾರು ಎಷ್ಟು ಸಮರ್ಥವಾಗಿ ನಿಭಾಯಿಸಿದ್ದಾರೆ, ಆಡಳಿತಲ್ಲಿ ಏನೇನು ಲೋಪಗಳಾಗಿವೆ, ಯಾವ್ಯಾವ ಸಚಿವರು ತಮ್ಮ ಇಲಾಖಾ ವ್ಯಾಪ್ತಿಯ ನಿಗಮ, ಮಂಡಳಿ ಅಧ್ಯಕ್ಷರುಗಳಾಗಿರುವ ಶಾಸಕರು, ಮುಖಂಡರುಗಳೊಂದಿಗೆ ವಿಶ್ವಾಸಾರ್ಹತೆ, ಸಮನ್ವಯದಿಂದ ನಡೆದುಕೊಳ್ಳದ ಬಗ್ಗೆ ದೂರುಗಳು ಬಂದಿವೆ, ಕಾರ್ಯಕರ್ತರು ನೀಡಿರುವ ದೂರುಗಳು ಸೇರಿದಂತೆ ಎಲ್ಲವನ್ನೂ ಮುಂದಿಟ್ಟು ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ಸೂಸೈಡ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಐಎಎಸ್‌‍ ಆಕಾಂಕ್ಷಿ

ಸಚಿವರ ಕೃಪಾಕಟಾಕ್ಷದಿಂದ ಅಧಿಕಾರಿ ಗಳು ಅಧ್ಯಕ್ಷರ ಮಾತು ಕೇಳದಿರುವುದೂ ಸೇರಿದಂತೆ ಸಚಿವರ ವಿರುದ್ದ ಕೇಳಿಬಂದಿ ರುವ ದೂರುಗಳ ಬಗ್ಗೆ ಹೈಕಮಾಂಡ್ ನಾಯಕರು ಪ್ರಸ್ತಾಪಿಸಲಿದ್ದಾರೆ. ಜೊತೆಗೆ, ಪ್ರತಿಪಕ್ಷ ಬಿಜೆಪಿಯವರು ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಅಸ್ಥಿರಗೊಳಿಸಲು ನಡೆಸಿರುವ ಷಡ್ಯಂತ್ರಗಳನ್ನು ಹೇಗೆ ಎದುರಿಸಬೇಕು, ಅವುಗಳಿಗೆ ಯಾವ ರೀತಿ ಪ್ರತಿತಂತ್ರ ಹೂಡಬೇಕೆಂಬ ಬಗ್ಗೆ ಸಲಹೆ ನೀಡಲಾಗುವುದು.

ರಾಜ್ಯಪಾಲರ ವಿರುದ್ಧ ಹೋರಾಟಕ್ಕೂ ಚರ್ಚೆ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್‌ನ ಇಬ್ಬರು ಪ್ರಮುಖ ನಾಯಕರು ಭಾನುವಾರ ರಾಜ್ಯ ಸರ್ಕಾರ ಸಚಿವರೊಂದಿಗೆ ನಡೆಸುವ ಸಭೆಯಲ್ಲಿ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್‌ ನೀಡಿರುವ ರಾಜ್ಯಪಾಲರ ಕ್ರಮದ ವಿರುದ್ಧ ಹೋರಾಟ ರೂಪಿಸುವ ಕುರಿತೂ ಚರ್ಚೆ ನಡೆಸಲಿದ್ದಾರೆ.

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

ಕಾಂಗ್ರೆಸ್ ವರಿಷ್ಠರು ಬೆಂಗಳೂರಿನಲ್ಲಿ ಸಚಿವರಿಗೆ ‘ಕ್ಲಾಸ್’ ತೆಗೆದುಕೊಳ್ಳುವ ಬಗ್ಗೆ ‘ಕನ್ನಡಪ್ರಭ’ ಆ.1 ರಂದೇ ವರದಿ ಮಾಡಿತ್ತು.

ಇದನ್ನೂ ನೋಡಿ: ವಚನ ದರ್ಶನ ಪುಸ್ತಕದಲ್ಲಿ ಬಸವತತ್ವಕ್ಕೆ ಅಪಚಾರ – ಪ್ರತಿಭಟನೆJanashakthi Media

Donate Janashakthi Media

Leave a Reply

Your email address will not be published. Required fields are marked *