ಸಿಎಂ, ಸಚಿವರು, ಶಾಸಕರ ವೇತನ ಶೇ.100ರಷ್ಟು ಹೆಚ್ಚಳ: ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳ ಹೊರೆ, ಸಾಲದ ಸುಳಿಯಿಂದ ಸಂಕಷ್ಟದಲ್ಲಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಈ ಬೆನ್ನಲ್ಲೇ ಯುಗಾದಿ ಹಬ್ಬಕ್ಕೆ ಮುನ್ನವೇ ಕರ್ನಾಟಕ ಸರ್ಕಾರವು ಮುಖ್ಯಮಂತ್ರಿ, ಸಚಿವರ ಹಾಗೂ ಶಾಸಕರ ವೇತನ ಹಾಗೂ ಭತ್ಯೆ ಹೆಚ್ಚಳ ಸಂಬಂಧ ತಿದ್ದುಪಡಿ ಮಸೂದೆ ಮಂಡಿಸಲು ರಾಜ್ಯಪಾಲರ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್‌

ಇದರಿಂದಾಗಿ, ಸಿಎಂ, ಸಚಿವರು, ಶಾಸಕರು, ಸಭಾಪತಿ, ಸಭಾಧ್ಯಕ್ಷರಿಗೆ ಭರ್ಜರಿ ವೇತನ ಹೆಚ್ಚಳ ಸಂಬಂಧಿತ ತಿದ್ದುಪಡಿ ಮಸೂದೆ ವಿಧಾನಸಭೆಯಲ್ಲಿ ಮಂಡನೆಯಾಗಲಿದ್ದು, ಜನ ಪ್ರತಿನಿಧಿಗಳ ಸಂಬಳ ಭರ್ಜರಿಯಾಗಿ ಹೆಚ್ಚಾಗಲಿದೆ. ಕಾಂಗ್ರೆಸ್‌

ಕರ್ನಾಟಕ ಸರ್ಕಾರವು ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನವನ್ನು ಶೇ 100 ರಷ್ಟು ಹೆಚ್ಚಿಸಲು ಮುಂದಾಗಿದ್ದು, ಈ ಪ್ರಸ್ತಾವಕ್ಕೆ ರಾಜ್ಯಪಾಲರಿಂದ ಅನುತಿಯೂ ದೊರೆತಿದೆ. ಕಲಾಪ ವ್ಯವಹಾರಗಳ ಸಲಹಾ ಸಮಿತಿಯ ನಿರ್ಣಯದಂತೆ ‘ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ ಮತ್ತು ‘ಕರ್ನಾಟಕ ಶಾಸಕಾಂಗ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ ಕ್ಕೆ ರಾಜ್ಯಪಾಲರ ಅನುಮತಿ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಕಾಂಗ್ರೆಸ್‌

ತಿದ್ದುಪಡಿ ಮಸೂದೆಯನ್ನು ವಿಧಾನಸಭೆ ಹಾಗೂ ಪರಿಷತ್ನಲ್ಲಿ ಸರ್ಕಾರ ಮಂಡಿಸಲಿದ್ದು ಅನುಮೋದನೆ ಪಡೆಯಲಿದೆ. ಪರಿಣಾಮವಾಗಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರ ವೇತನ ಮತ್ತು ಭತ್ಯೆಗಳಲ್ಲಿ ಹೆಚ್ಚಳವಾಗಲಿದೆ. ಕಾಂಗ್ರೆಸ್‌

ಇದನ್ನೂ ಓದಿ: ಕದನ ವಿರಾಮ ಉಲ್ಲಂಘಿಸಿ ಪ್ಯಾಲೇಸ್ತೀನ್ ಮೇಲೆ ಕ್ರೂರ ಆಕ್ರಮಣ ಮಾಡುತ್ತಿರುವ ಇಸ್ರೇಲ್ ರಕ್ತದಾಹಿ ನಿಲುವಿಗೆ ಡಿವೈಎಫ್ಐ ಖಂಡನೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಶಾಸಕಾಂಗದ ವೇತನಗಳು, ಪಿಂಚಣಿಗಳು ಮತ್ತು ಭತ್ಯೆಗಳು (ತಿದ್ದುಪಡಿ) ಮಸೂದೆ, 2025ಕ್ಕೆ ಅಂಕಿತ ಸೂಚಿಸಿದ್ದಾರೆ. ಹೀಗಾಗಿ ಶಾಸಕರು ಮತ್ತು ಎಂಎಲ್‌ಸಿಗಳ ವೇತನ ದ್ವಿಗುಣಗೊಳ್ಳಲಿದೆ. ಆದರೆ ಮುಖ್ಯಮಂತ್ರಿಯ ವೇತನವು ತಿಂಗಳಿಗೆ ರೂ. 75,000 ರಿಂದ ರೂ. 1.5 ಲಕ್ಷಕ್ಕೆ ಏರುತ್ತದೆ.

ವಿಧಾನ ಪರಿಷತ್ತಿನ ಅಧ್ಯಕ್ಷರು ಮತ್ತು ವಿಧಾನಸಭೆಯ ಸ್ಪೀಕರ್ ಅವರ ವೇತನವನ್ನು ರೂ. 75,000 ರಿಂದ ರೂ. 1.25 ಲಕ್ಷಕ್ಕೆ ಹೆಚ್ಚಿಸಬೇಕೆಂದು ಕರಡು ಪ್ರಸ್ತಾಪಿಸಿತ್ತು. ಇದು ರೂ. 50,000 ರಷ್ಟು ಪ್ರಸ್ತಾವಿತ ಹೆಚ್ಚಳವಾಗಿದೆ. ಮಸೂದೆಯ ಸೆಕ್ಷನ್ 10(1) ರ ಅಡಿಯಲ್ಲಿ, ಉಪಾಧ್ಯಕ್ಷ ಮತ್ತು ಉಪಸಭಾಪತಿಯ ವೇತನ ಹೆಚ್ಚಳವನ್ನು 60,000 ರೂ.ಗಳಿಂದ 80,000 ರೂ.ಗಳಿಗೆ ಹೆಚ್ಚಿಸಲಾಗಿದೆ.

ಕರ್ನಾಟಕ ಜನಪ್ರತಿನಿಧಿಗಳ ವೇತನ, ಭತ್ಯೆ ಎಷ್ಟು ಹೆಚ್ಚಳ?

ಸಿಎಂ – 75,000 ದಿಂದ 1,50,000

ಸಚಿವರು – 60,000 ದಿಂದ 1.25 ಲಕ್ಷ

ಶಾಸಕರು – 40,000 ದಿಂದ 80,000

ಸ್ಪೀಕರ್ – 75,000 ದಿಂದ 1.25 ಲಕ್ಷ

ಸಭಾಪತಿ – 75,000 ದಿಂದ 1.25 ಲಕ್ಷ

ಸಿಎಂ, ಸಚಿವರ ಆತಿಥ್ಯ ಭತ್ಯೆ – 4.50 ಲಕ್ಷದಿಂದ 5 ಲಕ್ಷ

ಸಚಿವರ ಮನೆ ಬಾಡಿಗೆ ಭತ್ಯೆ – 1.20 ಲಕ್ಷದಿಂದ 2.50 ಲಕ್ಷ

ಪಿಂಚಣಿ – 50,000 ದಿಂದ 75,000

ಹೆಚ್ಚುವರಿ ಪಿಂಚಣಿ – 5,000 ರಿಂದ 20,000 ರೂ

ಅಧ್ಯಕ್ಷರು ಮತ್ತು ಸ್ಪೀಕರ್

ಸಂಬಳ: ರೂ 75,000 ರಿಂದ ರೂ 1.25 ಲಕ್ಷದವರೆಗೆ

ಸಂಬಳ ಭತ್ಯೆ: ರೂ 4 ಲಕ್ಷದಿಂದ ರೂ 5 ಲಕ್ಷದವರೆಗೆ

ಮನೆ ಬಾಡಿಗೆ ಭತ್ಯೆ: ರೂ 1.6 ಲಕ್ಷದಿಂದ ರೂ 2 ಲಕ್ಷದವರೆಗೆ

ವಿವಿಧ ಮರುಪಾವತಿ ಭತ್ಯೆ (MRA): ರೂ 20,000 ರಿಂದ ರೂ 25,000

ದಿನನಿತ್ಯ ಭತ್ಯೆ (ಹೊರ ರಾಜ್ಯ): ರೂ 3,500 ರಿಂದ ರೂ 5,000

ವಸತಿ ಭತ್ಯೆ: ರೂ 7,000 ರಿಂದ ರೂ 10,000

ಉಪ ಅಧ್ಯಕ್ಷರು ಮತ್ತು ಉಪಸಭಾಪತಿ

ಸಂಬಳ: 60,000 ರೂ.ಗಳಿಂದ 80,000 ರೂ.ಗಳವರೆ

ಸಂಬಳ ಭತ್ಯೆ: 2.5 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳವರೆಗೆ

ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಸೌಲಭ್ಯಗಳು

ಸಂಬಳ: 40,000 ರೂ.ಗಳಿಂದ 80,000 ರೂ.ಗಳವರೆಗೆ

ಪಿಂಚಣಿ: 50,000 ರೂ.ಗಳಿಂದ 75,000 ರೂ.ಗಳವರೆಗೆ

ಹೆಚ್ಚುವರಿ ಪಿಂಚಣಿ: 5,000 ರೂ.ಗಳಿಂದ 20,000 ರೂ.ಗಳವರೆಗೆ

ಹೆಚ್ಚುವರಿ ಪ್ರಯಾಣ ಭತ್ಯೆ (ಸಹಚರರೊಂದಿಗೆ): 1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳವರೆಗೆ

ಮಾಜಿ ಸದಸ್ಯರ ವೈದ್ಯಕೀಯ ಭತ್ಯೆ: 5,000 ರೂ.ಗಳಿಂದ 20,000 ರೂ.ಗಳವರೆಗೆ

ಸ್ಥಿರ ವೈದ್ಯಕೀಯ ಭತ್ಯೆ: 2,500 ರೂ.ಗಳಿಂದ 10,000 ರೂ.ಗಳವರೆಗೆ

ಕ್ಷೇತ್ರ ಪ್ರಯಾಣ ಭತ್ಯೆ: ರೂ 60,000 ರಿಂದ ರೂ 80,000 ವರೆಗೆ

ರೈಲ್ವೆ / ವಿಮಾನ ದರ (ವಾರ್ಷಿಕ): ರೂ 2.5 ಲಕ್ಷದಿಂದ ರೂ 3.5 ಲಕ್ಷ ವರೆಗೆ

ದೂರವಾಣಿ ಶುಲ್ಕಗಳು: ರೂ 20,000 ರಿಂದ ರೂ 35,000 ವರೆಗೆ

ಕ್ಷೇತ್ರ ಭತ್ಯೆ: ರೂ 60,000 ರಿಂದ ರೂ 1.1 ಲಕ್ಷ ವರೆಗೆ

ಅಂಚೆ ಶುಲ್ಕಗಳು: ರೂ 5,000 ರಿಂದ ರೂ 10,000 ವರೆಗೆ

ಇದನ್ನೂ ನೋಡಿ: ಕನಿಷ್ಠ ವೇತನ ಹಾಗೂ ಕಾಯಂಗೆ ಆಗ್ರಹಿಸಿ ವಿಕಲಚೇತನರ ಗೌರವಧನ ಕಾರ್ಯಕರ್ತರ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *