ಬೆಂಗಳೂರು: ಆಪರೇಷನ್ ಹಸ್ತ ಚರ್ಚೆ ಸಾಕಷ್ಟೂ ಕುತೂಹಲ ಮೂಡಿಸುತ್ತಿದೆ. ಆದರೆ, ‘ವರ್ಗಾವಣೆಗಾಗಿ ಹಣ’ ಮತ್ತು ‘ಟೆಂಡರ್ ಕಮಿಷನ್’ ಹಗರಣಗಳನ್ನು ಮರೆಮಾಚಲು ಕಾಂಗ್ರೆಸ್ ಪಕ್ಷ ‘ಘರ್ ವಾಪ್ಸಿ’ ಹೆಸರಿನಲ್ಲಿ ನಾಟಕ ಆರಂಭಿಸಿದೆ ಎಂದು ಆಗಸ್ಟ್-20 ಭಾನುವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಆಪರೇಷನ್ ಹಸ್ತ ಚರ್ಚೆ ಬೆನ್ನಲ್ಲೇ ಸಿಎಂ ಭೇಟಿಯಾದ ಎಸ್. ಟಿ ಸೋಮಶೇಖರ್..!
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾವೇರಿ ವಿಚಾರವಾಗಿ ಅಥವಾ ಕನ್ನಡಿಗರು ಎದುರಿಸುತ್ತಿರುವ ಇತರೆ ಸಮಸ್ಯೆಗಳ ಬಗ್ಗೆ ಪಕ್ಷಕ್ಕೆ ಯಾವುದೇ ಚಿಂತೆಯಿಲ್ಲ. ಅವರು ಕೇವಲ ಘರ್ ವಾಪ್ಸಿ ಬಗ್ಗೆ ಚಿಂತಿಸುತ್ತಿದ್ದಾರೆ’ ಎಂದು ದೂರಿದರು. ಕಾಂಗ್ರೆಸ್ ಅನ್ನು ಘರ್ ವಾಪ್ಸಿಯ ಪಿತಾಮಹ ಎಂದು ಕರೆದ ಕುಮಾರಸ್ವಾಮಿ, ಎಸ್‌ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪೂರ್ಣ ಬಹುಮತವನ್ನು ಹೊಂದಿತ್ತು. ಮತ್ತು ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ಶಾಸಕರ ಕುದುರೆ ವ್ಯಾಪಾರಕ್ಕೆ ನಿಂತಿದೆ ಎಂದು ಹೇಳಿದರು. ರಾಜ್ಯದಲ್ಲಿ ಈ ಘರ್ ವಾಪ್ಸಿ ನಡೆಯುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.