ಕಲ್ಬುರ್ಗಿ| ಕಾಂಗ್ರೆಸ್‌ ತೆಕ್ಕೆಗೆ ಕಾಳಗಿ ಪಟ್ಟಣ ಪಂಚಾಯತಿ

ಕಲ್ಬುರ್ಗಿ: ಕಾಳಗಿ ತಾಲೂಕಿನಲ್ಲಿ ವಾರ್ಡ್‌ ನಂ. 5ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇವಲ 2 ಮತಗಳ ಅಂತರದಿಂದ ಸೋಲುಂಡಿರುವುದು ಗಮನಾರ್ಹ. ವಾರ್ಡ್‌ ನಂ. 1, 2, 3, 6, 7 ಮತ್ತು 8ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದರೆ, ವಾರ್ಡ್‌ ನಂ. 4, 5, 9, 10 ಮತ್ತು 11ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಕಲ್ಬುರ್ಗಿ

ಈ ಚುನಾವಣೆಯಲ್ಲಿ ಹಾಲಿ ಶಾಸಕ ಅವಿನಾಶ್ ಜಾಧವಗೆ ಭಾರೀ ಮುಖಭಂಗ ಉಂಟಾಗಿದೆ. ಶಾಸಕರ ಪ್ರಭಾವಕ್ಕಿಂತ ಕಾಂಗ್ರೆಸ್ ಶಕ್ತಿ ಹೆಚ್ಚಾಗಿ ತೋರಿ ಫಲಿತಾಂಶ ಕಾಂಗ್ರೆಸ್ ಪರವಾಗಿ ಹೊರಬಂದಿದೆ.

ಕಾಂಗ್ರೆಸ್ ಪರ ಜಯ ಸಾಧಿಸಲು ಎಂಎಲ್‌ಸಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸುಭಾಷ ರಾಥೋಡ್ ಅವರ ಸಂಘಟನಾ ಶಕ್ತಿ ಮತ್ತು ತಂತ್ರಗಾರಿಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ : ಆರೋಪಿ ಮಹೇಶ್‌ ಅಲ್ಲ ಶಾಸಕ ಹರೀಶ್‌

ಫಲಿತಾಂಶ ಹೊರಬಂದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ನಗೆ ಬೀರಿ ಪಟ್ಟಣದಲ್ಲಿ ಜಯೋತ್ಸವ ಆಚರಿಸಿದರು. ಈ ಗೆಲುವು ಸ್ಥಳೀಯ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಮತ್ತೊಮ್ಮೆ ಬಲ ತುಂಬಿದೆ.

  • ವಾರ್ಡ್‌ ನಂ. 1 – ಗುರುರಾಜ
  • ವಾರ್ಡ್‌ ನಂ. 2 – ಬಸವರಾಜ
  • ವಾರ್ಡ್‌ ನಂ. 3 – ಲಲಿತಾಬಾಯಿ ಸಿದ್ರಾಮಪ್ಪ ಕಮಲಾಪೂರ
  • ವಾರ್ಡ್‌ ನಂ. 6 – ಸಹಲಿಯಾ ಬೇಗಂ ಬಿಜಾಪೂರ
  • ವಾರ್ಡ್‌ ನಂ. 7 – ಶರಣಪ್ಪ ಬೇಲೂರ
  • ವಾರ್ಡ್‌ ನಂ. 8 – ಉಷಾರಾಣಿ ದತ್ತಾತ್ರೇಯ ಗುತ್ತೇದಾರ

ಬಿಜೆಪಿ:

  • ವಾರ್ಡ್‌ ನಂ. 4 – ಪಾರ್ವತಿ ಗಂಡ ಜಗನ್ನಾಥ
  • ವಾರ್ಡ್ ನಂ. 5 – ರವಿದಾಸ ಎಸ್. ಪತಂಗೆ
  • ವಾರ್ಡ್ ನಂ. 9 – (ವಿವರ ಲಭ್ಯವಿಲ್ಲ)
  • ವಾರ್ಡ್ ನಂ. 10 – ವಿಜಯಕುಮಾರ ಶಂಕರ ಜಾಧವ
  • ವಾರ್ಡ್ ನಂ. 11 – ಪೂಜಾ ರಾಜು ರಾಠೋಡ

ಒಟ್ಟು ಸ್ಥಾನಗಳು: 11

ಕಾಂಗ್ರೆಸ್: 6

ಬಿಜೆಪಿ: 5

ಇದನ್ನೂ ನೋಡಿ: Karnataka Legislative Assembly Live – Day 07 – ವಿಧಾನಸಭೆಯ ಮುಂಗಾರು ಅಧಿವೇಶನದ ನೇರ ಪ್ರಸಾರ – ದಿನ 7

Donate Janashakthi Media

Leave a Reply

Your email address will not be published. Required fields are marked *