ಬಿಎಂಟಿಸಿಯಲ್ಲಿ 2500 ಕಂಡಕ್ಟರ್ ಹುದ್ದೆ ಖಾಲಿ | 18,660- 25,300 ರೂ ವೇತನ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಎಂಟಿಸಿ ಯಲ್ಲಿ ಖಾಲಿ ಇರುವ 2500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಮಿಕ್ಕುಳಿದ ವೃಂದದ 2,286 ಹುದ್ದೆಗಳು, ಸ್ಥಳೀಯ ವೃಂದದ 199, 15 ಹಿಂಬಾಕಿ ಹುದ್ದೆ ಸೇರಿ ಒಟ್ಟು 2,500 ಹುದ್ದೆಗಳಿಗೆ ಮಾ.10ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬಿಎಂಟಿಸಿ

ಶೈ ಕ್ಷಣಿಕ ಅರ್ಹತೆಯಾಗಿ ದ್ವಿತೀಯ ಪಿಯು ಅಥವಾ ತತ್ಸಮಾನ ತರಗತಿ ಪೂರ್ಣಗೊಳಿಸಿರಬೇಕು. ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ, ಬ್ಯಾಡ್ಜ್ ಹೊಂದಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 35 ವರ್ಷ, 2ಎ, 2ಬಿ, 3ಎ ಮತ್ತು 3ಬಿಗೆ 38, ಎಸ್ಸಿ, ಎಸ್ಟಿ ಮತ್ತು ಪ್ರವರ್ಗ-1ಕ್ಕೆ 40, ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗೆ 45 ವರ್ಷ ವಯೋಮಿತಿ. ಮಾಹಿತಿಗೆ http://cetonline.karnataka.gov.in ಗೆ ಭೇಟಿ ನೀಡಿ. ಬಿಎಂಟಿಸಿ

ದೇಹದಾರ್ಢ್ಯತೆ: ಪುರುಷರು 160 ಸೆ.ಮೀ, ಮಹಿಳೆಯರು 150 ಸೆಂ. ಮೀ ಎತ್ತರ.

ಇದನ್ನು ಓದಿ : ಕೋವಿಡ್ ನಲ್ಲಿ ಮೃತ ಪಟ್ಟವರಿಗೆ ಶಾಂತಿ ಸಿಗಬೇಕಾದರೆ ಡಾ. ಸುಧಾಕರ್ ನನ್ನು ಸೋಲಿಸಿ – ಹೂಡಿ ವಿಜಯ್ ಕುಮಾರ್

ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ ವಯೋಮಿತಿ 18 ಆಗಿದ್ದು, ಗರಿಷ್ಠ ವಯೋಮಿತಿ 35 ವರ್ಷ ಆಗಿದೆ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ. ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ಹಾಗೂ ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಬಿಎಂಟಿಸಿ

ವೇತನ: ಅಭ್ಯರ್ಥಿಗಳ ಒಂದು ವರ್ಷದ ವೃತ್ತಿ ತರಬೇತಿಯಲ್ಲಿ ಮಾಸಿಕ 9,100 ರೂ ಮತ್ತು ವರ್ಷದ ಬಳಿಕ ಎರಡು ವರ್ಷಗಳ ಅವಧಿಗೆ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿ ನೇಮಕವಾದಲ್ಲಿ ಮಾಸಿಕ 18,660- 25,300 ರೂ ವೇತನ ನಿಗದಿಪಡಿಸಲಾಗಿದೆ. ಎರಡು ವರ್ಷಗಳ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆ ತೃಪ್ತಿಕರವಾಗಿ ಪೂರೈಸಿದ ಬಳಿಕ ಅಭ್ಯರ್ಥಿಗಳ ನೇಮಕಾತಿಯನ್ನು ಪ್ರಾಧಿಕಾರದಿಂದ ಖಾಯಂಗೊಳಿಸಲಾಗುವುದು. ಬಿಎಂಟಿಸಿ

ಆಯ್ಕೆ: ಸ್ಪರ್ಧಾತ್ಮಕ ಪರೀಕ್ಷೆ

ಅರ್ಜಿಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 750 ರೂ ಮತ್ತು ಪ.ಜಾ, ಪ.ಪಂ, ಪ್ರವರ್ಗ 1, ಮಾಜಿ ಸೈನಿಕ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಇದನ್ನು ನೋಡಿ : ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಎಷ್ಟು ಮತ ಪಡೆಯಬಹುದು?

Donate Janashakthi Media

Leave a Reply

Your email address will not be published. Required fields are marked *