ಬೆಂಗಳೂರು | ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿಧನಕ್ಕೆ ವಿಧಾನಸಭೆ ಸಂತಾಪ

ಬೆಂಗಳೂರು: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್  ವಿಮಾನ ಅಪಘಾತದಲ್ಲಿ ನಿಧನಕ್ಕೆ ಇಂದು ವಿಧಾನಸಭೆ ಅಧಿವೇಶನದಲ್ಲಿ ಸಂತಾಪ ಸೂಚಿಸಲಾಯಿತು.

ಸಚಿವ ಹೆಚ್.ಕೆ ಪಾಟೀಲ್ ಸಂತಾಪ ಸೂಚಿಸುತ್ತಾ, ಅಜಿತ್ ಪವಾರ್ ದೇಶ ಕಂಡ ಅತ್ಯಂತ ಶ್ರೇಷ್ಠ ರಾಜಕಾರಣಿ. ಹತ್ತು ವರ್ಷಗಳ ಅವಧಿಯಲ್ಲಿ ರಾಜಕೀಯವಾಗಿ ನೀಡಿರುವ ಕೊಡುಗೆ, ಅವರ ಕಾರ್ಯ ವೈಖರಿ ಎಲ್ಲರನ್ನೂ ಸೆಳೆಯುವ ರೀತಿ ಇತ್ತು. ಬಾರಾಮತಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಉತ್ತಮ ಕೆಲಸ‌ ಮಾಡಿದ್ದರು. ಶರತ್ ಪವಾರ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ‌ ಮಾಡಿದ್ರು. ನಾನೂ ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ಉಸ್ತುವಾರಿ ಆಗಿದ್ದೆ. ಮಹಾರಾಷ್ಟ್ರದಲ್ಲಿ ನಾವೂ NCP ಮೈತ್ರಿಯಲ್ಲಿ ಕೆಲಸ ಮಾಡಿದ್ದೆವು. ಅಜಿತ್ ಪವಾರ್ ಅವರು ಒಮ್ಮೆ ನಿರ್ಧಾರ ಮಾಡಿದ್ರೆ ಅದರಿಂದ ಹೊರಗೆ ಬರುತ್ತಿರಲಿಲ್ಲ. ಕನ್ನಡಿಗರು, ಕರ್ನಾಟಕದ ಬಗ್ಗೆ ಸುಮಧುರ ಭಾವನೆ ಹೊಂದಿದ್ದರು. ನೀರಾವರಿ ಸಚಿವರಾಗಿದ್ದಾಗ, ಅಜಿತ್ ಪವಾರ್ ಕರ್ನಾಟಕದ ಅನುಕೂಲಕ್ಕೆ ಅವಕಾಶ ನೀಡಿದ್ದರು. ಸಹಕಾರಿ ಕ್ಷೇತ್ರದಲ್ಲಿ ಎತ್ತರದಲ್ಲಿ ಕೆಲಸ‌ ಮಾಡಿದ್ದರು. ಸಕ್ಕರೆ ಕಾರ್ಖಾನೆ ಉಳಿದಿದ್ರೆ, ಅವರ ಸಹಕಾರ ಬಹಳ ಮುಖ್ಯವಾಗಿತ್ತು ಎಂದು ಸ್ಮರಿಸಿದರು.

ಇದನ್ನೂ ಓದಿ : ನಾಸಿಕ್ | ಅಂಬೇಡ್ಕರ್ ಹೆಸರು ಉಲ್ಲೇಖಿಸದ ಆರೋಪ: ಸಚಿವರ ವಿರುದ್ಧ ಮಹಿಳಾ ಅಧಿಕಾರಿಯ ಆಕ್ಷೇಪ

ಏಳು ಬಾರಿ ಶಾಸಕರಾಗಿದ್ದರು. ಡಿಸಿಎಂ ಆಗಿ, ಸಚಿವರಾಗಿ, ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದರು. ರಾಜಕೀಯ ಜೀವನದಲ್ಲಿ ಏರಿಳಿತ ಕಂಡರೂ, ದಿಟ್ಟ ಕೆಲಸ ಮಾಡಿದ್ದರು. ತೂಕದ ವ್ಯಕ್ತಿತ್ವದಿಂದ ಕೆಲಸ‌ ಮಾಡಿದ್ದರು. ಈಗಲೂ ಡಿಸಿಎಂ ಆಗಿ ಕೆಲಸ‌ ಮಾಡುತ್ತಿದ್ದರು. NCP ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಬೆಳಗ್ಗೆ ಅಜಿತ್ ಪವಾರ್ ಅವರು ಮತ್ತು ಅವರ ಜತೆಯಲ್ಲಿ ಇದ್ದವರು ನಿಧನರಾಗಿದ್ದಾರೆ. ಅವರು ದಾದಾ ಅಂತ‌ ಹೆಸರು ಪಡೆದಿದ್ದರು. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಪ್ರಾರ್ಥಿಸಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತಾಪ ವ್ಯಕ್ತಪಡಿಸಿ, ಬಾರಾಮತಿ ಕ್ಷೇತ್ರದ ಜನ ಬೆಳಗ್ಗೆ 5.30ರಿಂದಲೇ ಭೇಟಿ ಮಾಡಲು ಶುರು ಮಾಡ್ತಿದ್ದರು. ಅವರ ಮೇಲೆ ಅನೇಕ ರಾಜಕೀಯ ದಾಳಿಗಳಾದವು. ಅವರ ನಿಧನ ನಂಬಲು ಆಗಲಿಲ್ಲ. ಬೆಳಗಾವಿ ನಮ್ಮದು ಗಡಿ ಜಿಲ್ಲೆ. ನಮ್ಮಲ್ಲಿ ಕೂಡ ಅವರ ಅಭಿಮಾನಿಗಳಿದ್ದಾರೆ.  ಅವರಿಗೆ ಚಿರಶಾಂತಿ ದೊರಕಲಿ ಎಂದು ಹೇಳಿದರು.

ಶಾಸಕ ಲಕ್ಷ್ಮಣ್ ಸವದಿ ಸಂತಾಪ ಸಲ್ಲಿಸಿ, ನೇರ ನುಡಿಗೆ ಹೆಸರುವಾಸಿ. ನಿಷ್ಠುರವಾದ ಮಾತುಗಳನ್ನು ಆಡುತ್ತಿದ್ದರು. ನಾನು ಹಿಂದೆ ಸಹಕಾರಿ ಸಚಿವನಾಗಿದ್ದಾಗ ಸಭೆ ಮಾಡಿದ್ದೆವು. ಹತ್ತಿರದಿಂದ ಅವರ ಸ್ವಭಾವ ಕಂಡಿದ್ದೇನೆ. ಮನುಷ್ಯ ಹುಟ್ಟೋದು ಆಕಸ್ಮಿಕ, ಸಾವು ಖಚಿತ. ಹುಟ್ಟು, ಸಾವಿನ ನಡುವೆ ಎಷ್ಟು ಪ್ರೀತಿ ವಿಶ್ವಾಸ ಇರಲಿದೆ ಅನ್ನೋದು ಮುಖ್ಯ.  ಆ ವ್ಯಕ್ತಿ ನಮ್ಮ ನಡುವೆ ಇಲ್ಲ ಅನ್ನೋದು ನಮಗೆಲ್ಲರಿಗೂ ನೋವು ತರಿಸಿದೆ ಎಂದರು.‌

ಇದನ್ನೂ ನೋಡಿ : ಒಂದು ದೇಹ, ಒಂದು ಸಾಕ್ಷಿ | ಸಾಮ್ರಾಜ್ಯಶಾಹಿಯ ವಿರುದ್ಧ ಸುಮಿತೇರು ತಾನಿಗುಚಿJanashakthi Media

Donate Janashakthi Media

Leave a Reply

Your email address will not be published. Required fields are marked *