ಕಾರವಾರ: ಜಾನಪದ ಗೌರವ ಡಾಕ್ಟರೇಟ್ ವಿಜೇತರೂ ನಿವೃತ್ತ ಶಿಕ್ಷಕಿ ಶಾಂತಿ ನಾಯಕರ ಅಗಲಿಕೆಗೆ ಸಿಪಿಐಎಂ ಉತ್ತರ ಕನ್ನಡ ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ. ಕಾರವಾರ
ಇದನ್ನೂ ಓದಿ: 2.67 ಲಕ್ಷ ಮೆ.ಟನ್ ಯುರಿಯಾ ಪೂರೈಸುವಂತೆ ಕೇಂದ್ರ ಕೃಷಿ ಸಚಿವರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ
ಅವರ ಅದ್ಭುತ ಕೆಲಸಗಳು, ಜೀವನ ಪ್ರೀತಿ, ಸಮಾನತೆಯ ಆಶಯ, ಮಹಿಳೆಯರ ಪರವಾದ ಹೋರಾಟಗಳು, ಹೊಸ ತಲೆಮಾರನ್ನು ತರಬೇತುಗೊಳಿಸಬೇಕೆಂಬ ಕಳಕಳಿ ಮತ್ತು ಪ್ರಯತ್ನ ಯಾವಾಗಲೂ ಜೀವಂತ. ಸಾಹಿತ್ಯ ಲೋಕಕ್ಕೆ ಹತ್ತಾರು ಪುಸ್ತಕಗಳನ್ನು ನೀಡಿದ ಸಂಶೋಧನಾತ್ಮಕ ಬರಹಗಳನ್ನು ಇವರು ಆರಂಭದಲ್ಲಿ ಭಾರತಕ ವಿಜ್ಞಾನ ವಿಜ್ಞಾನ ಜಾಥಾ, ಸಾಕ್ಷರತಾ ಚಳುವಳಿ ಮತ್ತು ಸಮತಾ ಮಹಿಳಾ ಚಳುವಳಿಯ ಭಾಗವಾಗಿ ಕೆಲಸ ಮಾಡಿದೆ. ಮಹಿಳಾ ಸಹಕಾರಿಯೂ ಅಂದಿನಿಂದಲೇ ಆರಂಭಿಸಿದವರು. ಬದುಕಿನಲ್ಲಿ ಸಾಮರ್ಥ್ಯವನ್ನು ಅಳವಡಿಸಿಕೊಂಡವರು, ಕೋಮುವಾದವನ್ನು ಅಸಮಾನತೆಯನ್ನು ಮಹಿಳೆಯರ ಮೇಲಿನ ಎಲ್ಲಾ ರೀತಿಯ ತಾರತಮ್ಯವನ್ನು ತೀವ್ರವಾಗಿ ಖಂಡಿಸಿದರು. ಉತ್ತರ ಕನ್ನಡ ಜಿಲ್ಲೆಗೆ ಜಾನಪದ ವಿಶ್ವವಿದ್ಯಾಲಯ ಬೇಕೆಂದು ಚಿಂತನ ಸಹಯಾನದಂತಹ ಸಂಘಟನೆಗಳು ಹಕ್ಕೊತ್ತಾಯ ಮಂಡಿಸುತ್ತಿವೆ ಜೊತೆಯಾದರು ಜೋಯಿಡಾಕ್ಕೆ ಜಾನಪದ ವಿವಿಯ ಒಂದು ಅಧ್ಯಯನ ಶಾಖೆ ಬರಲಿಕ್ಕೆ ಶ್ರಮಿಸಿದರು. ತಮ್ಮ ದೇಹವನ್ನು ಸಂಶೋಧಕರಿಗೆ ಧಾರೆ ಎರೆಯುವ ಮೂಲಕ ಜೀವಮಾನದ ಮತ್ತೊಂದು ಸಾಧನೆ ಮಾಡಿ ಸಾವಿನಲ್ಲೂ ತನ್ನ ಆದರ್ಶಗಳ ಮೂಲಕ ಜೀವಂತವಾಗಿದ್ದಾರೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಸಿಪಿಐಎಂ ಉತ್ತರ ಕನ್ನಡ ಜಿಲ್ಲಾ ಸಮಿತಿ ತನ್ನ ಅಂತಿಮ ನಮನಗಳನ್ನು ತಿಳಿಸುತ್ತದೆ ಮತ್ತು ಅವರ ಬಾಳಸಂಗತಿ ಹಿರಿಯ ಸಾಹಿತಿ ವಿದ್ವಾಂಸ ಡಾ. ಎನ್.ಆರ್. ನಾಯಕರಿಗೂ ಕುಟುಂಬದ ಸದಸ್ಯರಿಗೂ ಜೊತೆಗಿದ್ದು ಸಾಂತ್ವನವನ್ನು ಹೇಳುತ್ತೇವೆ.
ಇದನ್ನೂ ನೋಡಿ: ಕಾರ್ಲ್ ಮಾರ್ಕ್ಸ್ ಜನ್ಮದಿನದ : ವಿಶೇಷ ಮಾರ್ಕ್ಸರವರ ಜೀವನ ಮತ್ತು ಚಿಂತನೆವಿಶ್ಲೇಷಣೆ ಡಾ. ಬಿ.ಆರ್. ಮಂಜುನಾಥ
