ವೃತ್ತಿಪರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರಿಗೆ ವಿದೇಶದಲ್ಲಿ ಉದ್ಯೋಗ

ಬೆಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವು ರಾಜ್ಯದ ಯುವಕರಿಗೆ ಹೊರದೇಶಗಳಲ್ಲಿ ಉದ್ಯೋಗ ಒದಗಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಿದೆ.ಉದ್ಯೋಗ

ಇದರ ಭಾಗವಾಗಿ ಸ್ಲೊವೆನಿಯಾ ರಾಷ್ಟ್ರದಲ್ಲಿ ಬಿಇ, ಡಿಪ್ಲೊಮೊ, ಐಟಿಐ ಮತ್ತಿತರ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ 94 ಯುವಕರಿಗೆ ಉದ್ಯೋಗ ನೀಡುವಲ್ಲಿ ಕೌಶಲ್ಯಾಭಿವೃದ್ಧಿ ನಿಗಮವು ಯಶಸ್ವಿಯಾಗಿದೆ.

ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದಾಗಿ ಉದ್ಯೋಗವಿಲ್ಲದೆ ಕೆಲಸ ಅರಸುತ್ತಿದ್ದ ಯುವಕರು ಇದೀಗ ವಿದೇಶದಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದು, ತಮ್ಮ ಭವಿಷ್ಯವ ರೂಪಿಸಿಕೊಂಡಿದ್ದಾರೆ.

ಯುವಕರ ಕೌಶಲ್ಯಾ ಅರ್ಹತೆಗೆ ತಕ್ಕಂತೆ ಉದ್ಯೋಗಗಳನ್ನು ನೀಡಲಾಗುತ್ತಿದೆ. ಅವರಿಗೆ ಇಲ್ಲಿಯೇ ತರಬೇತಿ, ವೀಸಾ ವ್ಯವಸ್ಥೆ, ಗೃಹ ಇಲಾಖೆಯಲ್ಲಿ ದಾಖಲಾತಿಗಳ ಪ್ರಮಾಣಪತ್ರ ಪರಿಶೀಲನೆ ಮಾತ್ರವಲ್ಲದೆ ಹೊರರಾಷ್ಟ್ರಗಳಿಗೆ ತೆರಳುವವರಿಗೆ ಊಟ, ವಸತಿ ವ್ಯವಸ್ಥೆ, ಸಂಬಂಧಪಟ್ಟವರ ಭೇಟಿಗೆ ಬೇಕಾದ ಇನ್ನಿತರ ಸೌಲಭ್ಯಗಳನ್ನು ಸಹ ಇಲಾಖೆಯ ಅಧಿಕಾರಿಗಳೇ ನಿಗಾವಹಿಸುತ್ತಾರೆ.

ಐಟಿಬಿಟಿ, ವಿಜ್ಞಾನ, ಕೈಗಾರಿಕೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಮುಂಚೂಣಿಯಲ್ಲಿದೆ. ಇದನ್ನು ಮನಗಂಡ ಸ್ಲೊವೆನಿಯಾ ರಾಷ್ಟ್ರವು ಎರಡೂವರೆ ಸಾವಿರ ಅಸೆಂಬ್ಲಿ ಲೈನ್ ಆಪರೇಟರ್ ಗಳನ್ನು ನೇಮಕ ಮಾಡಿಕೊಳ್ಳಲು ಮುಂದೆ ಬಂದಿತ್ತು. ತಕ್ಷಣವೇ ಕಾರ್ಯ ಪ್ರವೃತ್ತರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ತಮ್ಮ ಅಧಿಕಾರಿಗಳ ತಂಡವನ್ನು ಸಿದ್ದವಿರಿಸಿ ವಿದೇಶಾಂಗ ವ್ಯವಹಾರಗಳ ಇಲಾಖೆ ಜೊತೆ ಒಡಂಬಡಿಕೆ ಮಾಡಿಕೊಂಡರು.

ಸ್ಲೊವೆನಿಯಾ ರಾಷ್ಟ್ರವು 2500 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಇಲಾಖೆ ವತಿಯಿಂದ ಅರ್ಹ ಅಭ್ಯರ್ಥಿಗಳನ್ನುಆಹ್ವಾನಿಸಲಾಯಿತು. ಇದರ ಮೊದಲ ಭಾಗವಾಗಿ 94 ಅಭ್ಯರ್ಥಿಗಳಿಗೆ — 54 ಮಂದಿ ಐಟಿಐ, 31 ಮಂದಿ
ಡಿಪ್ಲೊಮೊ ಮುಗಿಸಿದವರನ್ನು ಆ ದೇಶಕ್ಕೆ ಬೀಳ್ಕೊಡಲಾಗಿದೆ.

ಇದನ್ನು ಓದಿ : ಖ್ಯಾತ ಸಾಹಿತಿ ಪ್ರೊ. ಕಮಲ ಹಂಪನಾ ನಿಧನ

ಉಚಿತ ತರಬೇತಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಬಿಡದಿ ಸಮೀಪ ಇರುವ ಟೊಯೋಟಾ ಕೀರ್ಲೋಸ್ಕರ್‍ನಲ್ಲಿ ತರಬೇತಿ ನೀಡಲಾಯಿತು. ಈ ಮೊದಲು ಇಲ್ಲಿ ತರಬೇತಿ ಪಡೆಯಲು 35,000 ರೂ. ಖರ್ಚುವೆಚ್ಚವಾಗುತ್ತಿತ್ತು. ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳೇ ಇಲ್ಲಿ ತರಬೇತಿ ಪಡೆಯುತ್ತಾರೆ ಎಂಬುದನ್ನು ಮನಗಂಡ ಸಚಿವ ಪಾಟೀಲ್ಅವರು, ಯಾವುದೇ ಒಬ್ಬ ಅಭ್ಯರ್ಥಿಯು ಒಂದೇ ಒಂದು ಪೈಸಾಕಟ್ಟುವುದು ಬೇಡ. ಎಲ್ಲ ಹಣವನ್ನು ಇಲಾಖೆ ವತಿಯಿಂದಲೇ ಭರಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತರಬೇತಿ ಪಡೆದ ನಂತರ ಸ್ಲೊವೆನಿಯಾ ದಲ್ಲಿ ಇವರಿಗೆ ತಿಂಗಳಿಗೆ 970 ಯೂರೋ (86 ಸಾವಿರ ರೂ.) ವೇತನ ನೀಡಲಾಗುತ್ತಿದೆ. ಜೂನ್ 5ರಂದು ಮೊದಲ ತಂಡ ಹಾಗೂ ಜೂ.20ರಂದು 2ನೇ ತಂಡವನ್ನು ಬೀಳ್ಕೊಡಲಾಗಿದೆ. ಜೂ.24 ಮತ್ತು ಜು.1ರಂದು ಉಳಿದ ತಂಡಗಳು ಸ್ಲೋವಾಕಿಯಾಕ್ಕೆ ತೆರಳಲಿದೆ ಎಂದು ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಕೆಎಸ್‍ಡಿಸಿ ಇದೀಗ 37 ಚಾಲಕರನ್ನು ಹಂಗೇರಿಗೆ ದೇಶಕ್ಕೆ ಕಳುಹಿಸಿಕೊಟ್ಟಿದೆ. ಅಲ್ಲದೆ ಮಾರಿಷಸ್‍ಗೆ ವೆಲ್ಡರ್‍ಗಳು, ಬಾಯ್ಲರ್ತಯಾರಕರು ಮತ್ತು ಇತರ ಬ್ಲೂ ಕಾಲರ್ ಕೆಲಸಗಳಿಗಾಗಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಆಸ್ಟ್ರೇಲಿಯಾ, ಜಪಾನ್, ಫಿನ್ಲ್ಯಾಂಡ್, ಜರ್ಮನಿ, ನಾರ್ವೆಯಿಂದದಾದಿಯರ ಬೇಡಿಕೆಯನ್ನು ಪೂರೈಸಲು ಮುಂದಾಗಿದೆ. ಅಲ್ಲದೆ ಸ್ಲೊವೇನಿಯಾ ಕೂಡ ಹೆಚ್ಚುವರಿಯಾಗಿ ದೊಡ್ಡ ಸಂಖ್ಯೆಯ ಆಪರೇಟರ್‍ಗಳನ್ನು ಕೇಳಿಕೊಂಡಿದೆ. ಜೊತೆಗೆ ಗಲ್ಫ್ಮತ್ತು ಯುರೋಪ್ ರಾಷ್ಟ್ರಗಳಿಂದಲೂ ಬೇಡಿಕೆಗಳು ಬಂದಿದ್ದು, ಇದನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತಿದ್ದೇವೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ.ಕನಗವಲ್ಲಿ ಹೇಳಿದ್ದಾರೆ.

ಇಂಗ್ಲೀಷ್ ತರಬೇತಿ:

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಭಾಷೆ ಅಗತ್ಯ ಇರುವುದನ್ನು ಮನಗಂಡಿರುವ ಕೌಶಲ್ಯಾಭಿವೃದ್ಧಿ ನಿಗಮ ಆಯ್ಕೆಯಾಗುವ ಉದ್ಯೋ ಆಕಾಂಕ್ಷಿಗಳಿಗೆ ಉಚಿತವಾಗಿ ಇಂಗ್ಲೀಷ್ಭಾಷೆ ತರಬೇತಿ ನೀಡಲು ಮುಂದಾಗಿದೆ. ಇದಕ್ಕಾಗಿಯೇ ಇಂಗ್ಲೀಷ್ಭಾಷೆಯಲ್ಲಿ ಪರಿಣಿತಿ ಹೊಂದಿರುವವರನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಿದೆ.

ಇದನ್ನು ನೋಡಿ : ಆದಿಕವಿ ಪಂಪನ ಕುರಿತು ಕಮಲಾ ಹಂಪನಾ ಮಾತುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *