ಬೆಂಗಳೂರು : ಬಿಗ್‌ಬಾಸ್ ಟಿವಿ ಶೋ ಕಾರ್ಯಕ್ರಮದಲ್ಲಿ ಭಾಗಹಿಸಿದ್ದಕ್ಕಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರಿಗೆ ದೂರು ನೀಡಲಾಗಿದೆ.
ಕನ್ನಡ ಹೋರಾಟಗಾರ ಸಿಎಂ ಶಿವಕುಮಾರ್ ಪ್ರದೀಪ್ ವಿರುದ್ಧ ಸ್ಪೀಕರ್ಗೆ ಲಿಖಿತ ದೂರು ನೀಡಿದ್ದಾರೆ. ಪ್ರದೀಪ್ ಈಶ್ವರ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದೂರಿನಲ್ಲಿ ಶಿವಕುಮಾರ್ ಮನವಿ ಮಾಡಿದ್ದಾರೆ. ಒಬ್ಬ ಶಾಸಕರು ಹೀಗೆ ಮಾಡೋದು ಸರಿಯಲ್ಲ, ಆತ ಒಬ್ಬ ಜವಬ್ದಾರಿಯುತ ವ್ಯಕ್ತಿ , ಆದರೆ ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಒಬ್ಬ ಜನಪ್ರತಿನಿಧಿ ಟಿವಿ ಶೋಗೆ ಹೋಗಿದ್ದಾರೆ. ಶಾಸಕರು ಹೀಗೆ ಮಾಡೋದು ಸರಿಯಲ್ಲ ಕೂಡಲೇ ಅವರನ್ನ ವಜಾ ಮಾಡಬೇಕು ಎಂದು ಶಿವಕುಮಾರ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್
ಒಂದು ವೇಳೆ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯಿಂದ ಆಚೆ ಬರದೇ ಹೋದರೆ, ನಾವು ಬಿಗ್ ಬಾಸ್ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ. ಈ ಬಗ್ಗೆ ನಾವು ಸಿಎಂ ಅವರಿಗೂ ಕೂಡ ಮನವಿ ಮಾಡ್ತೀವಿ. ಕೂಡಲೇ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ಚುನಾವಣೆ ಮುಗಿಯುವವರೆಗೆ ನಟ ಸುದೀಪ್ ಕಾರ್ಯಕ್ರಮ ಪ್ರಸಾರ ಮಾಡದಂತೆ ಆಯೋಗಕ್ಕೆ ಮನವಿ ಬಿಗ್ ಬಾಸ್
ಪ್ರದೀಪ್ ನಿಜಕ್ಕೂ ಸ್ಪರ್ಧಿಯೇ? ಅತಿಥಿಯೇ? : ಬಿಗ್ ಬಾಸ್ ಉದ್ಘಾಟನೆಗೊಂಡ ಮೊದಲ ದಿನವೇ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ. ಸ್ಪರ್ಧಿಗಳು ಕೂಡ ಪ್ರದೀಪ್ ಈಶ್ವರ್ ಪ್ರವೇಶದಿಂದ ಆಶ್ಚರ್ಯಚಕಿತರಾಗಿದ್ದಾರೆ. ಹಾಗಾದರೆ ಪ್ರದೀಪ್ ನಿಜಕ್ಕೂ ಸ್ಪರ್ಧಿಯೇ? ಅತಿಥಿಯೇ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.
ಒಂದು ಕ್ಷೇತ್ರದ ಹಾಲಿ ಶಾಸಕರಾಗಿರುವ ಅವರು 100 ದಿನ ನಡೆಯುವ ಬಿಗ್ ಬಾಸ್ ಆಟದಲ್ಲಿ ಸ್ಪರ್ಧಿಯಾಗಿ ಹೇಗೆ ಭಾಗವಹಿಸಲು ಸಾಧ್ಯೆ? ಕ್ಷೇತ್ರದಲ್ಲಿ ಸಮಸ್ಯೆ ಬಂದರೆ ಅಲ್ಲಿ ಏನು ಮಾಡಬೇಕು? ಸಮಸ್ಯೆಗೆ ಪರಿಹಾರ ಮಾಡುವವರು ಯಾರು? ಬಿಗ್ ಬಾಸ್ ನಿಯಮದ ಪ್ರಕಾರ ಅಲ್ಲಿ ಯಾವುದೇ ಮೊಬೈಲ್ ಸಂಪರ್ಕ ಇರೋದಿಲ್ಲ, ಅಷ್ಟೇ ಅಲ್ಲದೆ ಹೊರಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗುವುದಿಲ್ಲ, ಹೀಗಿರುವಾಗ ಪ್ರದೀಪ್ ಈಶ್ವರ್ ನಡೆ ಹಲವು ಅನುಮಾನ ಸೃಷ್ಟಿಸಿದೆ.
ಅಧಿಕಾರದಲ್ಲಿದ್ದಾಗ, ಅದು ಸರ್ಕಾರದ ಭಾಗವಾಗಿ ಜನಪ್ರತಿನಿಧಿಗಳ ಸೇವೆ ಮಾಡುವುದನ್ನು ಬಿಟ್ಟು, ಬಿಗ್ ಬಾಸ್ ಮನೆಗೆ ಹೋಗೋದು ಎಷ್ಟು ಸರಿ? ಎಂಬ ಅಭಿಪ್ರಾಯ ಸದ್ಯ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭಾರೀ ಚರ್ಚೆ ಆಗುತ್ತಿದೆ. ಬಿಗ್ ಬಾಸ್
ಚಿಕ್ಕಬಳ್ಳಾಪುರದ ಮಾನ ಮರ್ಯಾದೆ ಕಳೆದಿದ್ದಾರೆ: ಡಾ ಸುಧಾಕರ್ : ಒಬ್ಬ ರಾಜಕಾರಣಿ, ಜನಪ್ರತಿನಿಧಿಯಾಗಿ ಶಾಸಕರಾಗಿ ಈ ರೀತಿಯ ಶೋಗೆ ಹೋಗಿದ್ದು ಇದೆ ಮೊದಲು, ಬಿಗ್ ಬಾಸ್‌ಗೆ ಹೋಗುವ ಮೂಲಕ ನಗೆಪಾಟೀಲಿಗೆ ಈಡಾಗಿದ್ದಾರೆ. ಒಬ್ಬ ಎಂಎಲ್‌ಎ ಬಿಗ್ ಬಾಸ್‌ಗೆ ಹೋಗಿ ಕುಣಿದಾಡಿರುವುದು ಇದೇ ಮೊದಲು. ಇದೊಂದು ನಾಚಿಕೆಗೇಡಿನ ಸಂಗತಿ. ಬಿಗ್ ಬಾಸ್‌ನಲ್ಲಿ ಭಾಗಿಯಾಗುವ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾನ ಮರ್ಯಾದೆ ಕಳೆದಿದ್ದಾರೆ ಎಂದು ಸುಧಾಕರ್ ವ್ಯಂಗ್ಯವಾಡಿದರು.
ಇತ್ತ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ರಾಜಕಾರಣಿ ಈ ಶೋ ಬೇಕಿತ್ತಾ ಎಂದು ಮಾಜಿ ಸಚಿವ ಡಾ. ಕೆ ಸುಧಾಕರ್ ಕಿಡಿಕಾರಿದ್ದಾರೆ.
ಈ ವಿಡಿಯೋ ನೋಡಿ : ಸುದೀಪ್ ಅಭಿನಯದ ಚಿತ್ರಗಳ ಪ್ರಸಾರ ನಿಲ್ಲಿಸಿ : ವಕೀಲರ ಆಗ್ರಹ ಬಿಗ್ ಬಾಸ್