ಬೆಂಗಳೂರು: ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ತೇಜೋವಧೆ ನಡೆಸಿದ್ದಾರೆಂದು ಆರೋಪಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ಐಪಿಎಸ್ ಅಧಿಕಾರಿ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ.
ನ್ಯಾಯಾಲಯದಲ್ಲಿ ಸಚಿವರ ವಿರುದ್ಧ ದೂರು ದಾಖಲಿಸಲು ಅನುಮತಿ ಕೋರಿದ್ದರು. ನ್ಯಾಯಾಲಯ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಎಚ್‌ಡಿಕೆ ಹಾಗೂ ಪುತ್ರನ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಂಗೇನಹಳ್ಳಿ ಡಿ ನೋಟಿಫಿಕೇಶನ್ ಹಗರಣದಲ್ಲಿ ಲೋಕಾಯುಕ್ತ ವಿಚಾರಣೆಗೆ ಎಚ್‌ಡಿಕೆ ಹಾಜರಾಗಿದ್ದರು . ಬಳಿಕ ಸುದ್ದಿಗೋಷ್ಠಿ ನಡೆಸಿ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದರು. ಎಂ ಚಂದ್ರಶೇಖರ್ 20 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ.
ಇದನ್ನೂ ಓದಿ: “ಕಾಯಿರಿ, ಯೋಚಿಸಿ, ನಂತರ ಪ್ರತಿಕ್ರಿಯಿಸಿ” ಡಿಜಿಟಲ್ ವಂಚನೆಗಳ ಬಗ್ಗೆ ಮೋದಿಯವರ ‘ಮೂರು ಮಂತ್ರಗಳು’!!
ಕಾಂಗ್ರೆಸ್ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ಭಾರೀ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆಂದು ಆರೋಪಿಸಿದ್ದಲ್ಲದೇ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಎಚ್‌ಡಿಕೆ ಸರ್ಕಾರದ ಗೃಹಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.
ರಾಜ್ಯಪಾಲರ ಅನುಮತಿಗಾಗಿ ಕಾಯುತ್ತಿರುವ ಕುಮಾರಸ್ವಾಮಿ ವಿಚಾರಣೆಯ ಮನವಿಯ ಮಾಹಿತಿ ಸೋರಿಕೆ ಬಗ್ಗೆ ಚಂದ್ರಶೇಖರ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಕೋರಿದ್ದರು. ಈ ಬಗ್ಗೆ ಕಿಡಿಕಾರಿದ್ದ ಎಚ್‌ಡಿಕೆ ಈ ಚಂದ್ರಶೇಖರ್ ಯಾರು, ಇವರೇನು ಸಿಎಂ ಆಗಿದ್ದಾರಾ ಅಥವಾ ಸಚಿವರಾಗಿದ್ದಾರಾ ಎಂದು ಹರಿಹಾಯ್ದಿದ್ದ ಎಚ್‌ಡಿಕೆ ಇವರು ಯಾರು ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ ಎಂದು ಟೀಕಿಸಿದ್ದರು.
ಜೊತೆಗೆ, ಎಡಿಜಿಪಿ ಚಂದ್ರಶೇಕರ್, ಕುಮಾರಸ್ವಾಮಿ ಒಬ್ಬರು ವಿಚಾರಾಧೀನ ಆರೋಪಿ ಎಂದು ಸಂಬೋಧಿಸಿದ್ದರು. ಜೊತೆಗೆ, ಜಾರ್ಜ್ ಬರ್ನಾಡ್ ಶಾ ಅವರ ಉಕ್ತಿಯೊಂದನ್ನು ಉಲ್ಲೇಖಿಸಿ ಹಂದಿಯೊಂದಿಗೆ ಜಗಳ ಮಾಡಬಾರದು. ಅದರಿಂದ ನೀವು ಕೊಳಕಾದರೆ ಹಂದಿಗೆ ಆನಂದವಾಗುತ್ತದೆ ಎಂದು ಪರೋಕ್ಷವಾಗಿ ಎಚ್‌ಡಿಕೆ ಅವರನ್ನು ಹಂದಿಗೆ ಹೋಲಿಸಿದ್ದರು. ಇದರಿಂದ ಜೆಡಿಎಸ್ ಮುಖಂಡುರ ಕೋಪಾವಿಷ್ಟರಾಗಿ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದರು.
ಇದನ್ನೂ ನೋಡಿ: ಮರಕುಂಬಿ ಪ್ರಕರಣ : ಗ್ರೌಂಡ್ ರಿಪೋರ್ಟ್ – ” ಉಳುಮೆಗೆ ಭೂಮಿ ಕೇಳಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದರು”