ಚಾಮರಾಜನಗರ : ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಭಾಗಿಯಗಿದ್ದಾರೆ ಎಂದು ದೂರು ನೀಡಿದ್ದ ಮೈಸೂರಿನ ಸ್ನೇಹಮಯಿ ಕೃಷ್ಣ ವಿರುದ್ಧ ಇದೀಗ ಆರ್‌ಟಿಐ ಕಾರ್ಯಕರ್ತರು ಒಬ್ಬರು ಲಕ್ಷಾಂತರ ರೂಪಾಯಿ ನನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಚಾಮರಾಜನಗರದ ಆರ್‌ಟಿಐ ಕಾರ್ಯಕರ್ತ ಕರುಣಾಕರ್ ಎನ್ನುವವರು, ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ದೂರು ನೀಡಿದ್ದಾರೆ. 3,ಲಕ್ಷ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಈ ಕುರಿತು ಚಾಮರಾಜನಗರದಲ್ಲಿ ದೂರುದಾರ ಕರುಣಾಕರ್ ಹೇಳಿಕೆ ನೀಡಿದ್ದು, ಹಣ ಕೊಡಿ ಅಂತ ಸಾಲದ ರೂಪದಲ್ಲಿ ಸ್ನೇಹ ಮಹಿ ಕೃಷ್ಣ ಕೇಳುತ್ತಾರೆ. ಬಳಿಕ ಬಡ್ಡಿ ಸಮೇತ ಹಣ ವಾಪಸ್ ಕೊಟ್ಟು ನಂಬಿಕೆಗಳಿಸುತ್ತಾರೆ.
ಇದನ್ನು ಓದಿ : ಪ್ರಜ್ವಲ್ ರೇವಣ್ಣ ವಿಡಿಯೋ ಮತ್ತು ಆಡಿಯೊದಲ್ಲಿ ಗುರುತನ್ನು ದೃಢಪಡಿಸಿದೆ: ಎಸ್ಐಟಿ
ನಂತರ ಮತ್ತೆ ನನ್ನ ಬಳಿ 3,00,000 ಹಣ ಪಡೆದಿದ್ದಾರೆ. ಹಣಕೊಡಲು ಸಾಧ್ಯವಿಲ್ಲದಿದ್ದಾಗ ರಿವರ್ಸ್ ಆಗುತ್ತಾರೆ. ಪತ್ನಿಗೆ ಹುಷಾರಿಲ್ಲ, ಮಕ್ಕಳ ಸ್ಕೂಲ್ ಫೀಸ್ ಕಟ್ಟಬೇಕು ಎಂದು ಸಾಲ ಪಡೆದಿದ್ದರು. ಯಾರ ಬಳಿಯೂ ಚೆಕ್ ಅಥವಾ ಆರ್ಟಿಜಿಎಸ್ ಮೂಲಕ ಹಣ ಪಡೆಯಲ್ಲ.ಎಲ್ಲಾ ಹಣ ನಗದು ಮೂಲಕವೇ ಸ್ನೇಹಮಯಿ ಕೃಷ್ಣ ಪಡೆದುಕೊಂಡಿದ್ದಾರೆ.
ಲೈಸನ್ಸ್ ಇಲ್ಲದೆ ಫೈನಾನ್ಸ್ ಮಾಡುತ್ತಿದ್ದಾರೆಂದು ನಮ್ಮ ವಿರುದ್ಧವೇ ದೂರು ದಾಖಲಿಸಿದ್ದಾರೆ.ಈ ಹಿಂದೆ 2013ರಲ್ಲಿ ನನ್ನ ವಿರುದ್ಧ ಚೀಟಿಂಗ್ ಕೇಸ್ ದಾಖಲಾಗಿತ್ತು. ಆ ವೇಳೆ ನನ್ನನ್ನು ಬಿಡಿಸಿದ್ದನು. ನಂತರ ನಮ್ಮಿಬ್ಬರ ಸ್ನೇಹ ಬೆಳೆಯಿತು. ಬಳಿಕ ಸ್ನೇಹಮಯಿ ಕೃಷ್ಣ 3 ಲಕ್ಷ ರೂಪಾಯಿ ನನ್ನ ಬಳಿ ಸಾಲ ಪಡೆದಿದ್ದಾನೆ ಎಂದು ಚಾಮರಾಜನಗರದಲ್ಲಿ ಆರ್‌ಟಿಐ ಕಾರ್ಯಕರ್ತ ಕರುಣಾಕರ್ ಹೇಳಿಕೆ ನೀಡಿದರು.
ಹಾಗಾಗಿ ತಮ್ಮ ವಿರುದ್ಧ ಲಕ್ಷಾಂತರ ರೂಪಾಯಿ ವಂಚನೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸ್ನೇಹಮಯಿ ಶ್ರಾವರು ಇದೀಗ ಚಾಮರಾಜನಗರದ ಎಸಿಜಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ನೋಡಿ : ಸಿಎಂ ವಿರುದ್ಧ ಎಫ್‌ಐಆರ್ ಸಾಧ್ಯವಿಲ್ಲ