ಬೆಂಗಳೂರು : ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಸಿಪಿಐಎಂ ಮತ್ತಿತರೆ ಎಡ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳ ಕರೆಯ ಮೇರೆಗೆ ರಾಜ್ಯದ ಮತದಾರರು ಕೋಮುವಾದಿ ಹಾಗೂ ಜನ ವಿರೋಧಿ ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸಿ ಸೌಹಾರ್ಧತೆಯನ್ನು ಎತ್ತಿ ಹಿಡಿದ ಮತದಾರರನ್ನು ಸಿಪಿಐಎಂ ಅಭಿನಂದಿಸುತ್ತದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.
ಹಣ ಮತ್ತು ಜಾತಿ ಹಾಗೂ ಕೋಮು ರಾಜಕಾರಣದ ತೀವ್ರ ಪ್ರಜಾಪ್ರಭುತ್ವ ವಿರೋಧಿ ಭರಾಟೆಯ ನಡುವೆಯು ಸಿಪಿಐಎಂ ಪಕ್ಷದ ಮೇಲೆ ವಿಶ್ವಾಸವಿಟ್ಟು ಬಾಗೇಪಲ್ಲಿ ಮುಂತಾದೆಡೆ ಉತ್ತಮ ಮತದಾನ ಮಾಡಿ ಬೆಂಬಲಿಸಿದ್ದಕ್ಕೆ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಿಪಿಐಎಂ ರಾಜ್ಯ ಸಮಿತಿ ಸಲ್ಲಿಸುತ್ತದೆ. ಮುಂಬರುವ ಹೊಸ ಸರಕಾರದ ಜನಪರ ನೀತಿಗಳನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಅದೇ ರೀತಿ, ಜನ ವಿರೋಧಿ ಹಳಸಲು ಜಾಗತೀಕರಣದ ನೀತಿಗಳನ್ನು ಜಾರಿಗೆ ತರುವ ಯಾವುದೇ ಪ್ರಯತ್ನಗಳನ್ನು ಸಿಪಿಐಎಂ ಎಡ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳ ಜೊತೆ ಸೇರಿ ಪ್ರತಿರೋಧಿಸಿ ಎಂದಿನಂತೆ ಜನಪರವಾಗಿ ನಿಲ್ಲುತ್ತದೆ ಮತ್ತು ರಾಜ್ಯದ ಸೌಹಾರ್ಧತೆಗಾಗಿ ಕಾರ್ಯ ನಿರ್ವಹಿಸುತ್ತದೆ.
ರೈತ – ಕಾರ್ಮಿಕ ವಿರೋದಿ ತಿದ್ದುಪಡಿ ಕಾಯ್ದೆಗಳ ಹಾಗೂ ನೂತನ ಶಿಕ್ಷಣ ನೀತಿ ವಾಪಾಸಾತಿಗೆ ಸಿಪಿಐಎಂ ಆಗ್ರಹ :* ಮುಂಬರುವ ಸರಕಾರ ತನ್ನ ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿಯೇ ರೈತ ವಿರೋಧಿ ಹಾಗೂ ಕಾರ್ಪೋರೇಟ್ ಕಂಪನಿ ಕೃಷಿ ಪರವಾದ ಮೂರು ಕೃಷಿ ಕಾಯ್ದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020, ಏಪಿಎಂಸಿ ತಿದ್ದುಪಡಿ ಕಾಯ್ದೆ – 2020 ಮತ್ತು ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ – 2020 ಹಾಗೂ ಕಾರ್ಮಿಕ ಕೆಲಸದ ವಿಸ್ಥರಿಸಿ ಲೂಟಿಗೊಳಪಡಿಸುವ ಕಾರ್ಮಿಕ ವಿರೋದಿ ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ – 2023 ಮಾತ್ರವಲ್ಲಾ, ನೂತನ ಶಿಕ್ಷಣ ನೀತಿಯ ಜಾರಿಯನ್ನು ವಾಪಾಸು ಪಡೆದಿರುವುದಾಗಿ ಪ್ರಕಟಿಸುವಂತೆ ಮುಂಬರುವ ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.