ಕಾಮನ್‌ವೆಲ್ತ್‌ ಕ್ರೀಡಾ ಕೂಟ: ಒಂದೇ ದಿನ ಆರು ಪದಕ; 3 ಚಿನ್ನ, 1 ಬೆಳ್ಳಿ , 2 ಕಂಚು

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಭಾರತದ ಅಥ್ಲೇಟ್‌ಗಳ ಪದಕದ ಬೇಟೆ ಮುಂದುವರೆದಿದ್ದು, ಒಂದೇ ದಿನ ಭರ್ಜರಿ ಪದಕಗಳನ್ನು ಬಾಚಿಕೊಂಡಿದ್ದಾರೆ. 8ನೇ ದಿನದ ಅಂತ್ಯಕ್ಕೆ ಒಟ್ಟು 26 ಪದಕಗಳನ್ನು ಭಾರತಕ್ಕೆ ಲಭಿಸಿದೆ.

8ನೇ ದಿನದಂದು ಆರು ಪದಕಗಳು ಗೆಲ್ಲಲು ಸಾಧ್ಯವಾಗಿದ್ದು, ಮೂರು ಚಿನ್ನ, ಒಂದು ಬೆಳ್ಳಿ, ಎರಡು ಕಂಚು ಲಭಿಸಿದೆ. ಬಜರಂಗ್‌ ಪುನಿಯ, ದೀಪಕ್‌ ಪುನಿಯಾ ಮತ್ತು ಸಾಕ್ಷಿ ಮಲಿಕ್‌ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.  ಅಂಶು ಮಲಿಕ್‌ ಬೆಳ್ಳಿ ಪದಕ ಮತ್ತು ದಿವ್ಯಾ ಕಕ್ರಾನ್‌, ಮೋಹಿತ್‌ ಗ್ರೇವಾಲ್‌ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆ ಕುಸ್ತಿಯಲ್ಲಿ ಮೂರು ಚಿನ್ನದ ಪದಕ ಗಳಿಸಲು ಸಾಧ್ಯವಾಗಿದೆ.

ಪುರುಷರ 65 ಕೆಜಿ ವಿಭಾಗದಲ್ಲಿ ಬಜರಂಗ್‌ ಪುನಿಯ ಸತತ 2ನೇ ಬಾರಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು ಕೆನಡಾದ  ಮೆಕ್‌ನೀಲ್‌ ಅವರನ್ನು 9-2 ಅಂತರದಿಂದ ಚಿತ್‌ ಮಾಡಿದರು. ಮೊದಲ ಸುತ್ತಿನಲ್ಲೇ 4-0 ಮುನ್ನಡೆ ಸಾಧಿಸಿದ ಬಜರಂಗ್‌ ಪುನಿಯ ಚಿನ್ನವನ್ನು ಖಾತ್ರಿ ಪಡಿಸಿದರು.

ವನಿತೆಯರ 62 ಕೆಜಿ ಫೈನಲ್‌ನಲ್ಲಿ ಸಾಕ್ಷಿ ಮಲಿಕ್‌ ಕೆನಡಾದ ಅನಾ ಗೊಂಜಾಲೆಸ್‌ ಅವರನ್ನು ಮಣಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಫೈನಲ್‌ಗೆ ಲಗ್ಗೆಯಿಟ್ಟ ಮತ್ತೊಬ್ಬರೆಂದರೆ ದೀಪಕ್‌ ಪುನಿಯ (86 ಕೆಜಿ) ಚಿನ್ನದ ಪದಕ ಪಡೆಯುವ ಮೂಲಕ  ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಮೊದಲ ಬಾರಿಗೆ ಪದಕ ಗೆದ್ದ ಹಿರಿಮೆ ತಮ್ಮದಾಗಿಸಿಕೊಂಡರು.

ವನಿತೆಯರ 57 ಕೆಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಅಂಶು ಮಲಿಕ್‌ ನೈಜೀರಿಯಾದ ಒಡೊನಾಯೊ ಲಡೆಕ್ಯುರೋಯ್‌ ವಿರುದ್ಧ 4-8 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡರು.

ಸೆಮಿಫೈನಲ್‌ನಲ್ಲಿ ಪರಾಭವಗೊಂಡ ಮೋಹಿತ್‌ ಗ್ರೇವಾಲ್‌ (ಪುರುಷರ 125 ಕೆಜಿ) ಮತ್ತು ದಿವ್ಯಾ ಕಕ್ರಾನ್‌ (ವನಿತೆಯರ 68 ಕೆಜಿ) ಕಂಚಿನ ಪದಕಕ್ಕೆ ಪೈಪೋಟಿ ನಡೆಸಲಿದ್ದಾರೆ.

ಜುಲೈ 29ರಿಂದ ಆರಂಭವಾದ ಕಾಮನ್‌ವೆಲ್ತ್‌ ಕ್ರೀಡಾಕೂಟದ  8ನೇ ದಿನದ ಅಂತ್ಯದ ಸ್ಪರ್ಧೆಯಲ್ಲಿ 9 ಜಿನ್ನ, 8 ಬೆಳ್ಳಿ, 9 ಕಂಚಿನ ಪದಕ ಜಯಿಸಿದ್ದು, ಇದುವರೆಗೆ ಒಟ್ಟು 26 ಪದಕವನ್ನು ಗೆಲ್ಲುವಲ್ಲಿ ಅಥ್ಲೇಟ್‌ಗಳು ಯಶಸ್ವಿಯಾಗಿದ್ದಾರೆ. ಆಗಸ್ಟ್‌ 08ರಂದು ಸ್ಪರ್ಧೆ ಕೊನೆಗೊಳ್ಳಲಿದೆ.

Donate Janashakthi Media

Leave a Reply

Your email address will not be published. Required fields are marked *