ಕಾಮನ್‌ವೆಲ್ತ್‌ ಗೇಮ್ಸ್‌ಗಿಂದು ಅದ್ದೂರಿ ಚಾಲನೆ – ಪದಕಗಳ ಬೇಟೆಗೆ ಟೀಂ ಇಂಡಿಯಾ ಸಜ್ಜು

  • ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ಗೆ ಇಂದು ಚಾಲನೆ
  • ಮಿನಿ ಒಲಿಂಪಿಕ್ಸ್ ಎಂದೇ ಹೆಸರಾಗಿರುವ ಕಾಮನ್‌ವೆಲ್ತ್ ಗೇಮ್ಸ್ ಕೂಟ
  • ಉದ್ಘಾಟನಾ ಕಾರ್ಯಕ್ರಮಕ್ಕೆ 30,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸುವ ನಿರೀಕ್ಷೆ 

ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವ ಚರ್ತು ವಾರ್ಷಿಕ ಕ್ರೀಡಾಕೂಟ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಸಾಕಷ್ಟು ನಿರೀಕ್ಷೆಗಳ ಭಾರದೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ ಭಾರತದ ಪದಕದ ಆಧಾರಸ್ತಂಭವಾಗಿದ್ದ ಶೂಟಿಂಗ್ ಮತ್ತು ಆರ್ಚರಿ ಕ್ರೀಡೆಗಳನ್ನು ಈ ಬಾರಿ ಕೈಬಿಟ್ಟಿರುವುದು ದೊಡ್ಡ ಆಘಾತ ತಂದಿದೆ. ಶೂಟಿಂಗ್, ಆರ್ಚರಿ ಕ್ರೀಡೆಗಳನ್ನು ಕಡೆಗಣಿಸಿರುವ ಕೂಟದಲ್ಲಿ ಭಾರತೀಯ ಸ್ಪರ್ಧಿಗಳ ಮೇಲಿನ ನಿರೀಕ್ಷೆಗಳ ಭಾರ ಹಿಂದಿಗಿಂತಲೂ ಈಗ ಹೆಚ್ಚಾಗಿದೆ. ಏಕೆಂದರೆ ಕಳೆದ ಟೋಕಿಯೋ ಒಲಿಂಪಿಕ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಶತಮಾನದ ಸ್ವರ್ಣ ಪದಕ ಸೇರಿದಂತೆ 7 ಪದಕ ಗೆದ್ದು ಹೊಸ ಭರವಸೆ ಮೂಡಿಸಿರುವ ನವ ಭಾರತ ತಂಡದಲ್ಲಿ ಮತ್ತೊಂದು ಭರವಸೆ ಚಿಗುರೊಡೆದಿದೆ.ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟದ 22ನೇ ಆವೃತ್ತಿ ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ಜುಲೈ 28ರಿಂದ ಆಗಸ್ಟ್ 8ರವರೆಗೆ ನಡೆಯಲಿದೆ. 72 ಕಾಮನ್ ವೆಲ್ತ್ ದೇಶಗಳ 5 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು, 20 ಕ್ರೀಡೆಗಳ 280 ಸ್ಪರ್ಧೆಗಳಲ್ಲಿ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಭಾರತದ 215 ಕ್ಕೂ ಕ್ರೀಡಾಪಟುಗಳು ಹೊಸ ಭರವಸೆಯ ಭಾರದೊಂದಿಗೆ ಬ್ರಮಿಂಗ್ ಹ್ಯಾಮ್ ಗೆ ತಲುಪಿದ್ದಾರೆ. ಕೋಟ್ಯಂತರ ಅಭಿಯಾನಿಗಳು ಭಾರತೀಯರ ಯಶಸ್ಸಿಗೆ ಹಾರೈಸಿದ್ದಾರೆ.

2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಭಾರತ 26 ಚಿನ್ನ ಸೇರಿದಂತೆ 66 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನಿಯಾಗಿ ಹೋರಾಟ ಮುಗಿಸಿತ್ತು. ಆದರೆ 2010ರಲ್ಲಿ ತನ್ನ ಆತಿಥ್ಯದಲ್ಲಿ ನಡೆದ ಕೂಟದಲ್ಲಿ 101 ಪದಕ ಗೆಲ್ಲುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದು, ಸಿಡಬ್ಲ್ಯುಜಿ ಇತಿಹಾಸದಲ್ಲೇ ಭಾರತದ ಅತ್ಯುನ್ನತ ಶ್ರೇಷ್ಠ ಸಾಧನೆಯಾಗಿದೆ.

2002ರಿಂದ ಈವರೆಗೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಸಾಧನೆ
ವರ್ಷ-ಚಿನ್ನ-ಬೆಳ್ಳಿ-ಕಂಚು-ಒಟ್ಟು-ಸ್ಥಾನ
2022-30-22-17-69-4ನೇ
2006-22-17-11-50-4ನೇ
2010-38-27-36-101-2ನೇ
2014-15-30-19-64-5ನೇ
2018-26-20-20-66-3ನೇ

 ಪಿವಿ ಸಿಂಧು ಭಾರತದ ಧ್ವಜಧಾರಿ :  ಎರಡು ಬಾರಿ ಒಲಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಭಾರತದ ಧ್ವಜ ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ. “ಉದ್ಘಾಟನಾ ಸಮಾರಂಭದ ಭಾರತ ತಂಡದ ಧ್ವಜಧಾರಿಯಾಗಿ ಪಿವಿ ಸಿಂಧು ಅವರನ್ನು ಹೆಸರಿಸಲಾಗಿದೆ” ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಯ(ಐಒಎ) ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಒಟ್ಟು 164 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಭಾರತದಿಂದ ಒಟ್ಟು 215 ಅಥ್ಲೀಟ್‌ಗಳು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

100+ ಪದಕ ಭಾರತದ ಟಾರ್ಗೆಟ್‌ : ಭಾರತದ 214 ಕ್ರೀಡಾಪಟುಗಳು ಈ ಬಾರಿ ಕ್ರೀಡಾಕೂಟದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ 26 ಚಿನ್ನ ಸೇರಿ ಒಟ್ಟು 66 ಪದಕ ಗೆದ್ದಿದ್ದ ಭಾರತ ಈ ಬಾರಿ 100ಕ್ಕೂ ಹೆಚ್ಚು ಪದಕ ಗೆಲ್ಲುವ ಗುರಿ ಹೊಂದಿದೆ. 2010ರಲ್ಲಿ ನವದೆಹಲಿಯಲ್ಲಿ ಕ್ರೀಡಾಕೂಟ ನಡೆದಾಗ 38 ಚಿನ್ನ ಸೇರಿ ಒಟ್ಟು 101 ಪದಕ ಗೆದ್ದಿದ್ದ ಭಾರತಕ್ಕೆ ಈ ಬಾರಿ ಶೂಟಿಂಗ್‌, ಆರ್ಚರಿ ಇಲ್ಲದಿರುವುದರಿಂದ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ. ಶೂಟಿಂಗ್‌ನಲ್ಲಿ ಭಾರತಕ್ಕೆ ಈ ವರೆಗೂ 63 ಚಿನ್ನ ಸೇರಿ ಒಟ್ಟು 135 ಪದಕ ದೊರೆತಿದೆ. 2002ರಿಂದ ಪ್ರತಿ ಬಾರಿ ಭಾರತ ಪದಕ ಪಟ್ಟಿಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದೆ. ಈ ಬಾರಿಯೂ ಅದೇ ಗುರಿ ಹೊಂದಿದ್ದು, ವೇಟ್‌ಲಿಫ್ಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌, ಕುಸ್ತಿ ಹಾಗೂ ಟೇಬಲ್‌ ಟೆನಿಸ್‌ನಲ್ಲಿ ಹೆಚ್ಚು ಪದಕಗಳನ್ನು ನಿರೀಕ್ಷೆ ಮಾಡುತ್ತಿದೆ.

ಭಾರತ ತಂಡದ ವೇಳಾಪಟ್ಟಿ

ಜುಲೈ  29 ರಂದು ಅಶ್ವಿನಿ ಪೊನ್ನಪ್ಪ, ಸುಮೀತ್ ರೆಡ್ಡಿ (ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್) ಮೂಲಕ ಭಾರತ ಪದಕ ಬೇಟೆಯನ್ನು ಆರಂಭಿಸಲಿದೆ.

ಅಥ್ಲೆಟಿಕ್ಸ್:

30 ಜುಲೈ: ನಿತೇಂದರ್ ರಾವತ್ (ಪುರುಷರ ಮ್ಯಾರಥಾನ್)

2 ಆಗಸ್ಟ್: ಅವಿನಾಶ್ ಸೇಬಲ್ (ಪುರುಷರ 3000ಮೀ ಸ್ಟೀಪಲ್‌ಚೇಸ್)
ಮುರಳಿ ಶ್ರೀಶಂಕರ್ (ಪುರುಷರ ಲಾಂಗ್ ಜಂಪ್)
ಮುಹಮ್ಮದ್ ಅನೀಸ್ ಯಾಹಿಯಾ (ಪುರುಷರ ಲಾಂಗ್ ಜಂಪ್)
ಧನಲಕ್ಷ್ಮಿ ಸೇಕರ್ (ಮಹಿಳೆಯರ 100 ಮೀ)
ಜ್ಯೋತಿ ಯರ್ರಾಜಿ (ಮಹಿಳೆಯರ 100 ಮೀ ಹರ್ಡಲ್ಸ್)
ಮನ್‌ಪ್ರೀತ್ ಕೌರ್ (ಮಹಿಳೆಯರ ಶಾಟ್‌ಪುಟ್)
ನವಜೀತ್ ಕೌರ್ ಧಿಲ್ಲೋನ್ (ಮಹಿಳಾ ಡಿಸ್ಕಸ್ ಥ್ರೋ)

3 ಆಗಸ್ಟ್: ಐಶ್ವರ್ಯಾ ಬಿ (ಮಹಿಳಾ ಟ್ರಿಪಲ್ ಜಂಪ್)

5 ಆಗಸ್ಟ್: ಅಬ್ದುಲ್ಲಾ ಅಬೂಬಕರ್ (ಪುರುಷರ ಟ್ರಿಪಲ್ ಜಂಪ್)
ಪ್ರವೀಣ್ ಚಿತ್ರವೇಲ್ (ಪುರುಷರ ಟ್ರಿಪಲ್ ಜಂಪ್)
ಎಲ್ದೋಸ್ ಪಾಲ್ (ಪುರುಷರ ಟ್ರಿಪಲ್ ಜಂಪ್)
ನೀರಜ್ ಚೋಪ್ರಾ (ಪುರುಷರ ಜಾವೆಲಿನ್ ಥ್ರೋ)
ಡಿಪಿ ಮನು (ಪುರುಷರ ಜಾವೆಲಿನ್ ಥ್ರೋ)
ರೋಹಿತ್ ಯಾದವ್ (ಪುರುಷರ ಜಾವೆಲಿನ್ ಥ್ರೋ)
ಸಂದೀಪ್ ಕುಮಾರ್ (ಪುರುಷರ 10 ಕಿ.ಮೀ ಓಟದ ನಡಿಗೆ)
ಅಮಿತ್ ಖತ್ರಿ (ಪುರುಷರ 10 ಕಿಮೀ ಓಟದ ನಡಿಗೆ)
ಐಶ್ವರ್ಯಾ ಬಿ (ಮಹಿಳೆಯರ ಲಾಂಗ್ ಜಂಪ್)
ಆನ್ಸಿ ಸೋಜನ್ (ಮಹಿಳೆಯರ ಲಾಂಗ್ ಜಂಪ್)
ಅಣ್ಣು ರಾಣಿ (ಮಹಿಳೆಯರ ಜಾವೆಲಿನ್ ಥ್ರೋ)
ಶಿಲ್ಪಾ ರಾಣಿ (ಮಹಿಳೆಯರ ಜಾವೆಲಿನ್ ಥ್ರೋ)
ಮಂಜು ಬಾಲಾ ಸಿಂಗ್ (ಮಹಿಳೆಯರ ಹ್ಯಾಮರ್ ಥ್ರೋ)
ಸರಿತಾ ರೋಮಿತ್ ಸಿಂಗ್ (ಮಹಿಳೆಯರ ಹ್ಯಾಮರ್ ಥ್ರೋ)

6 ಆಗಸ್ಟ್: ಅಮೋಜ್ ಜಾಕೋಬ್ (ಪುರುಷರ 4×400 ಮೀ ರಿಲೇ)
ನೋಹ್ ನಿರ್ಮಲ್ ಟಾಮ್ (ಪುರುಷರ 4×400 ಮೀ ರಿಲೇ)
ಅರೋಕಿಯಾ ರಾಜೀವ್ (ಪುರುಷರ 4×400 ಮೀ ರಿಲೇ)
ಮುಹಮ್ಮದ್ ಅಜ್ಮಲ್ (ಪುರುಷರ 4×400 ಮೀ ರಿಲೇ)
ನಾಗನಾಥನ್ ಪಾಂಡಿ (ಪುರುಷರ 4×400 ಮೀ ರಿಲೇ)
ರಾಜೇಶ್ ರಮೇಶ್ (ಪುರುಷರ 4×400 ಮೀ ರಿಲೇ)
ಭಾವನಾ ಜಾಟ್ (ಮಹಿಳೆಯರ 10 ಕಿಮೀ ಓಟದ ನಡಿಗೆ)
ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 10 ಕಿಮೀ ಓಟದ ನಡಿಗೆ)
ಹಿಮಾ ದಾಸ್ (ಮಹಿಳೆಯರ 4×100 ಮೀ ರಿಲೇ)
ದ್ಯುತಿ ಚಂದ್ (ಮಹಿಳೆಯರ 4×100 ಮೀ ರಿಲೇ)
ಶ್ರಬಾನಿ ನಂದಾ (ಮಹಿಳೆಯರ 4×100 ಮೀ ರಿಲೇ)
ಎಂವಿ ಜಿಲ್ನಾ (ಮಹಿಳೆಯರ 4×100 ಮೀ ರಿಲೇ)
ಎನ್ ಎಸ್ ಸಿಮಿ (ಮಹಿಳೆಯರ 4×100ಮೀ ರಿಲೇ)

ಬ್ಯಾಡ್ಮಿಂಟನ್

29 ಜುಲೈ: ಅಶ್ವಿನಿ ಪೊನ್ನಪ್ಪ (ಮಿಶ್ರ ಡಬಲ್ಸ್)
ಬಿ ಸುಮೀತ್ ರೆಡ್ಡಿ (ಮಿಶ್ರ ಡಬಲ್ಸ್)

3 ಆಗಸ್ಟ್: ಪಿವಿ ಸಿಂಧು (ಮಹಿಳಾ ಸಿಂಗಲ್ಸ್)
ಆಕರ್ಷಿ ಕಶ್ಯಪ್ (ಮಹಿಳಾ ಸಿಂಗಲ್ಸ್)
ಲಕ್ಷ್ಯ ಸೇನ್ (ಪುರುಷರ ಸಿಂಗಲ್ಸ್)
ಕಿಡಂಬಿ ಶ್ರೀಕಾಂತ್ (ಪುರುಷರ ಸಿಂಗಲ್ಸ್)

4 ಆಗಸ್ಟ್: ಟ್ರೀಸಾ ಜಾಲಿ (ಮಹಿಳಾ ಡಬಲ್ಸ್)
ಗಾಯತ್ರಿ ಗೋಪಿಚಂದ್ (ಮಹಿಳಾ ಡಬಲ್ಸ್)
ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ (ಪುರುಷರ ಡಬಲ್ಸ್)
ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್)

ಬಾಕ್ಸಿಂಗ್

30 ಜುಲೈ: ಅಮಿತ್ ಪಂಗಲ್ (ಪುರುಷರ 51 ಕೆಜಿ)
ಮೊಹಮ್ಮದ್ ಹುಸಾಮುದ್ದೀನ್ (ಪುರುಷರ 57 ಕೆಜಿ)
ಶಿವ ಥಾಪಾ (ಪುರುಷರ 63.5 ಕೆಜಿ)
ರೋಹಿತ್ ಟೋಕಾಸ್ (ಪುರುಷರ 67 ಕೆಜಿ)
ಸುಮಿತ್ ಕುಂದು (ಪುರುಷರ 75 ಕೆಜಿ)
ಆಶಿಶ್ ಚೌಧರಿ (ಪುರುಷರ 80 ಕೆಜಿ)
ಸಂಜೀತ್ (ಪುರುಷರ 92 ಕೆಜಿ)
ಸಾಗರ್ (ಪುರುಷರ 92+ಕೆಜಿ)
ನಿತು (ಮಹಿಳೆಯರ 48 ಕೆಜಿ)
ನಿಖತ್ ಜರೀನ್ (ಮಹಿಳೆಯರ 50 ಕೆಜಿ)
ಜಾಸ್ಮಿನ್ (ಮಹಿಳೆಯರ 60 ಕೆಜಿ)
ಲೊವ್ಲಿನಾ ಬೊರ್ಗೊಹೈನ್ (ಮಹಿಳೆಯರ 70 ಕೆಜಿ)

ಮಹಿಳಾ ಟಿಟ್ವಂಟಿ ಕ್ರಿಕೆಟ್:

29 ಜುಲೈ: ಭಾರತ vs ಆಸ್ಟ್ರೇಲಿಯಾ
31 ಜುಲೈ: ಭಾರತ vs ಪಾಕಿಸ್ತಾನ
3 ಆಗಸ್ಟ್: ಭಾರತ vs ಬಾರ್ಬಡೋಸ್

ಪುರುಷರ ಹಾಕಿ

31 ಜುಲೈ: ಭಾರತ vs ಘಾನಾ
1 ಆಗಸ್ಟ್: ಭಾರತ vs ಇಂಗ್ಲೆಂಡ್
3 ಆಗಸ್ಟ್: ಭಾರತ vs ಕೆನಡಾ
4 ಆಗಸ್ಟ್: ಭಾರತ vs ವೇಲ್ಸ್

ಮಹಿಳೆಯರ ಹಾಕಿ

29 ಜುಲೈ: ಭಾರತ vs ಘಾನಾ
30 ಜುಲೈ: ಭಾರತ vs ವೇಲ್ಸ್
2 ಆಗಸ್ಟ್: ಭಾರತ vs ಇಂಗ್ಲೆಂಡ್
3 ಆಗಸ್ಟ್: ಭಾರತ vs ಕೆನಡಾ

ವೇಟ್​ ಲಿಫ್ಟಿಂಗ್​:

30 ಜುಲೈ: ಮೀರಾಬಾಯಿ ಚಾನು (ಮಹಿಳೆಯರ 55 ಕೆಜಿ)
ಸಂಕೇತ್ ಮಹದೇವ್ (ಪುರುಷರ 55 ಕೆಜಿ)
ಚನಂಬಮ್ ರಿಷಿಕಾಂತ ಸಿಂಗ್ (ಪುರುಷರ 55 ಕೆಜಿ)

31 ಜುಲೈ: ಬಿಂದ್ಯಾರಾಣಿ ದೇವಿ (ಮಹಿಳೆಯರ 59 ಕೆಜಿ)
ಜೆರೆಮಿ ಲಾಲ್ರಿನ್ನುಂಗಾ (ಪುರುಷರ 67 ಕೆಜಿ)
ಅಚಿಂತಾ ಶೆಯುಲಿ (ಪುರುಷರ 73 ಕೆಜಿ)

1 ಆಗಸ್ಟ್: ಪಾಪಿ ಹಜಾರಿಕಾ (ಮಹಿಳೆಯರ 64 ಕೆಜಿ)
ಅಜಯ್ ಸಿಂಗ್ (ಪುರುಷರ 81 ಕೆಜಿ)

2 ಆಗಸ್ಟ್: ಉಷಾ ಕುಮಾರ (ಮಹಿಳೆಯರ 87 ಕೆಜಿ)
ಪೂರ್ಣಿಮಾ ಪಾಂಡೆ (ಮಹಿಳೆಯರ 87+ಕೆಜಿ)
ವಿಕಾಸ್ ಠಾಕೂರ್ (ಪುರುಷರ 96 ಕೆಜಿ)
ರಾಗಲಾ ವೆಂಕಟ್ ರಾಹುಲ್ (ಪುರುಷರ 96 ಕೆಜಿ)

Donate Janashakthi Media

Leave a Reply

Your email address will not be published. Required fields are marked *