ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಎರಡನೇ ದಿನ ಭಾರತ ವೇಟ್‌ಲಿಫ್ಟಿಂಗ್‌ನಲ್ಲಿ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಪುರುಷರ 55 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಸಂಕೇತ್ ಮಹದೇವ್ ಸಾಗರ್ 248 ಕೆಜಿ ಬಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
🇮🇳 wins its 1️⃣st 🏅 at @birminghamcg22 🤩#SanketSargar in a smashing performance lifted a total of 248 Kg in 55kg Men’s 🏋️♀️ to clinch 🥈at #B2022
Sanket topped Snatch with best lift of 113kg & lifted 135kg in C&J
Congratulations Champ!
Wish you a speedy recovery#Cheer4India pic.twitter.com/oDGLYxFGAA— SAI Media (@Media_SAI) July 30, 2022
ಮಹಾರಾಷ್ಟ್ರ ಮೂಲದ ಸಂಕೇತ್ ಸಾಗರ್ ಭಾರತಕ್ಕೆ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ಸಂಕೇತ್ ಕೊನೆಯ ಕ್ಷಣದಲ್ಲಿ ಗಾಯಗೊಂಡ ಕಾರಣ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಗಾಯಗೊಂಡರೂ 21 ವರ್ಷದ ಸಂಕೇತ್ ಕ್ಲೀನ್ ಮತ್ತು ಜರ್ಕ್ ಸುತ್ತಿನ ಅಂತಿಮ ಪ್ರಯತ್ನದಲ್ಲಿ 138 ಕೆಜಿ ಎತ್ತುವ ಪ್ರಯತ್ನಕ್ಕೆ ಮರಳಿದರು. ಆದರೆ ಅವನ ಬಲ ಮೊಣಕೈ ಭಾರವನ್ನು ಹೊರಲು ಅವಕಾಶ ನೀಡಲಿಲ್ಲ. ಹೀಗಾಗಿ ರಜತ ಪದಕವೇ ಅಂತಿಮವಾಯಿತು.
ಮಲೇಶ್ಯಾದ ಬಿನ್ ಕಸ್ದನ್ ಮೊಹಮದ್ ಅನಿಕ್ ಅವರು ಅಂತಿಮ ಪ್ರಯತ್ನದಲ್ಲಿ 142 ಕೆಜಿ ತೂಕ ಎತ್ತಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡರು. ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ ಸಂಕೇತ್ ಅವರ ಅತ್ಯುತ್ತಮ ಲಿಫ್ಟ್ ಮೊದಲ ಪ್ರಯತ್ನದಲ್ಲಿ 135 ಕೆಜಿ ಎತ್ತುವಲ್ಲಿ ಯಶಸ್ವಿಯಾದರು. ಸಂಕೇತ್ ಮಹಾದೇವ್ ಅವರು ಕಳೆದ ವರ್ಷ ಡಿಸೆಂಬರ್ ನಲ್ಲಿ ತಾಷ್ಕೆಂಟ್ ಉಜ್ಬೇಕಿಸ್ತಾನ್‌ನಲ್ಲಿ ನಡೆದ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕ ಪಡೆದಿದ್ದರು