ವಂಶೋದ್ಧಾರ’ದ ಬಗ್ಗೆ ನಟಿ ಶ್ರುತಿ ಮಾತಿನ ವಿರುದ್ಧ ಚುನಾವಣಾ ಆಯೋಗ ದೂರು

ಹಿರೇಕೆರೂರು: ಪಟ್ಟಣದಲ್ಲಿ ಏ.6ರಂದು ಬಿಜೆಪಿಯ ಕೇಸರಿ ಮಹಿಳಾ ಬ್ರಿಗೇಡ್ ವತಿಯಿಂದ ಏರ್ಪಡಿಸಿದ್ದ ‘ಮಹಿಳಾ ಸಂಗಮ’ ಕಾರ್ಯಕ್ರಮದಲ್ಲಿ ಚಿತ್ರನಟಿ ಶ್ರುತಿ ಮಾಡಿದ ಭಾಷಣ, ರಾಜಕೀಯ ಪಕ್ಷಗಳ ಕಾರ್ಯಕರ್ತರ ಗುಂಪುಗಳ ನಡುವೆ ದ್ವೇಷ ಮತ್ತು ವೈಮನಸ್ಸು ಭಾವನೆಗಳನ್ನುಂಟು ಮಾಡುವ ಹೇಳಿಕೆಯಾಗಿದೆ ಎಂದು ಆರೋಪಿಸಿ, ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.

ಬಿಜೆಪಿಯ ತಾರಾ ಪ್ರಚಾರಕಿಯಾಗಿ ಆಗಮಿಸಿದ್ದ ನಟಿ ಶ್ರುತಿ ತಮ್ಮ ಭಾಷಣದಲ್ಲಿ ‘ನಿಮ್ಮ ವಂಶ ಉದ್ಧಾರವಾಗಲು ಯಾರಿಗೆ ಮತ ನೀಡಬೇಕು, ಬೇರೆಯವರಿಗೆ ಮತ ಹಾಕಿದರೆ ಯಾರ ವಂಶ ಉದ್ಧಾರವಾಗುತ್ತದೆ’ ಎಂಬ ಬಗ್ಗೆ ನೀಡಿರುವ ಹೇಳಿಕೆಯು ವೈರತ್ವ ಉಂಟು ಮಾಡುವ ಮತ್ತು ಭೀತಿಯನ್ನು ಹುಟ್ಟಿಸುವ ಹೇಳಿಕೆಯಾಗಿದೆ ಎಂದು ಎಂಸಿಸಿ ನೋಡಲ್‌ ಅಧಿಕಾರಿ ಪಂಪಾಪತಿ ನಾಯಕ್‌ ವಿಡಿಯೊ ದಾಖಲೆ ಸಹಿತ ಹಿರೇಕೆರೂರು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಆಧ್ಯಕ್ಷ:ಭಾ .ಮ ಹರೀಶ್

ಕೆಪಿಸಿಸಿ ವಕ್ತಾರ ಲಕ್ಷ್ಮಣ ನಟಿಯ ಹೇಳಿಕೆ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *