ಕಮಿಷನ್‌ ಆರೋಪ:ಪ್ರಿಯಾಂಕಾ ಅವರ ಎಕ್ಸ್‌ ಖಾತೆ ನಿರ್ವಾಹಕನ ವಿರುದ್ಧ ಎಫ್‌ಐಆರ್‌

ಇಂದೋರ್‌: ಮಧ್ಯಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಪೋಸ್ಟ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ,ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕಮಲ್‌ನಾಥ್‌ ಮತ್ತು ಮಾಜಿ ಕೇಂದ್ರ ಸಚಿವ ಅರುಣ್‌ ಯಾದವ್‌ ಅವರ ಎಕ್ಸ್‌ ಖಾತೆಯನ್ನು ನಿರ್ವಹಿಸುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಇಂದೋರ್‌ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ಆಳ್ವಿಕೆಯಲ್ಲಿ ಮಾನವ ಹಕ್ಕುಗಳ ಬುಡಮೇಲು ಹಿಂದುತ್ವ ಸರ್ವಾಧಿಕಾರಶಾಹಿಗೆ ಹಕ್ಕುಗಳ ಆಯೋಗವೂ ಬಲಿ

ಪ್ರಿಯಾಂಕಾ ಸೇರಿದಂತೆ ಕಾಂಗ್ರೆಸ್‌ ನಾಯಕರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಜ್ಞಾನೇಂದ್ರ ಅವಸ್ತಿ ಎಂಬ ವ್ಯಕ್ತಿಯ ಹೆಸರಲ್ಲಿ ನಕಲಿ ಪತ್ರ ಹರಡಲಾಗಿದೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ನಿಮೇಶ್‌ ಪಾಠಕ್‌ ದೂರು ನೀಡಿದ್ದಾರೆ ಎಂದು ಇಂದೋರ್‌ ಪೊಲೀಸ್‌ ಕಮಿಷನರ್‌ ಮಾಹಿತಿ ತಿಳಿಸಿದ್ದಾರೆ.

ಶೇ 50 ರಷ್ಟು ಕಮಿಷನ್‌ ನೀಡುವಂತೆ ರಾಜ್ಯದ ಗುತ್ತಿಗೆದಾರರನ್ನು ಕೇಳಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *