ಬೆಂಗಳೂರು: ಗ್ರಾಹಕರಿಂದ ಆನ್ಲೈನ್ ಮೂಲಕ ಹಣವನ್ನು ಪಡೆದಿದ್ದು, ನಗರದ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಬಹಳ ಸಂಕಷ್ಟಗಳನ್ನು ಉಂಟುಮಾಡುತ್ತಿವೆ. ವಾಣಿಜ್ಯ
ನಾಗರಾಜ್ ಗೌಡ ಹೆಸರಿನ ಈ ವ್ಯಾಪಾರಿಯು ಒಂದು ಚಿಕ್ಕ ಬೇಕರಿ ನಡೆಸುತ್ತಾರೆ, 2021 ರಿಂದ ಇವರಿಗೆ ವಾಣಿಜ್ಯ ತೆರಿಗೆ ಇಲಾಖೆಯವರು ತೆರಿಗೆ ಕೇಳಿಲ್ಲ. ಈಗ ಇದ್ಕಕ್ಕಿಂದ್ದಂತೆ ನಾಲ್ಕು ವರ್ಷಗಳ ಕಾಲ ನಡೆಸಿರುವ ವಹಿವಾಟಿನ ಮೇಲೆ ₹ 55 ಲಕ್ಷ ತೆರಿಗೆ ಕಟ್ಟಬೇಕಿದೆ, ಕೂಡಲೇ ಕಟ್ಟಿ ಅಂತ ನೋಟೀಸ್ ನೀಡಿದ್ದಾರೆ.
ಇದನ್ನೂ ಓದಿ: ಮತ್ತೆ ಜುಲೈ 11ರಂದು ದೆಹಲಿಯಲ್ಲಿ 3.7 ತೀವ್ರತೆಯ ಭೂಕಂಪ
“ನನ್ನ ಅಂಗಡಿ ಮಾರಿದರೆ ₹ 5 ಲಕ್ಷವೂ ಬರೋದಿಲ್ಲ, ₹ 55 ಲಕ್ಷ ಎಲ್ಲಿಂದ ತರಲಿ, ಅಧಿಕಾರಿಗಳು ಮಾಡಿದ ತಪ್ಪಿಗೆ ನಮ್ಮನ್ನು ಹೊಣೆಗಾರರನ್ನಾಗಿಸಲಾಗಿದೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತೆರಿಗೆ ಕಟ್ಟಬೇಕಿರುವುದನ್ನು ಮನ್ನಾ ಮಾಡಿಸದಿದ್ದರೆ ತಮಗೆ ಸಾವೇ ಗತಿ” ಎಂದು ನಾಗರಾಜ್ ಹೇಳುತ್ತಾರೆ.
ಇದನ್ನೂ ನೋಡಿ: LIVE | ನಾಡ ಉಳಿಸಿ ಸಮಾವೇಶ | ಬಲವಂತದ ಭೂ ಸ್ವಾಧೀನದ ವಿರುದ್ಧ ಅನ್ನದಾತರ ಧರಣಿ
