“ಕಲೆಕ್ಷನ್‌ ಕೊಡಿ, ನಿಗಮ ಮಂಡಳಿ ಅಧಿಕಾರ ಪಡಿ”: ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ನಿಗಮ ಮಂಡಳಿ ನೇಮಕ ಕುರಿತಂತೆ ಸರ್ಕಾರದಲ್ಲಿ ಚರ್ಚೆ ನಡೆಯುತ್ತಿದ್ದು, ಇಲ್ಲಿಯೂ ಕಲೆಕ್ಷನ್‌ ದಂಧೆ ನಡೆಯುತ್ತಿದೆ ಎಂದ ಬಿಜೆಪಿ ಟೀಕಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕಕೊಂಡಿರು ಬಿಜೆಪಿ, ಈಗಾಗಲೇ ವರ್ಗಾವಣೆಯನ್ನು ಫೋನ್‌ ಕರೆಯಲ್ಲೇ ನಿಭಾಯಿಸುವ ವ್ಯವಸ್ಥಿತ ದಂಧೆಯನ್ನಾಗಿ ಮಾಡಿಕೊಂಡಿರುವ ಸಿದ್ದರಾಮಯ್ಯನವರ ಸರ್ಕಾರ ನಿಗಮ ಮಂಡಳಿ ಹರಾಜಿಗೆ ಇಷ್ಟು ದಿನ ಕಾಯತ್ತಿತ್ತು. ಈ ಹಿಂದೆ ವ್ಯವಹಾರ ಸರಿಯಾಗಿ ಕುದುರದ ಕಾರಣ ಮುಂದೂಡಲಾಗಿದ್ದ ನಿಗಮ ಮಂಡಳಿ ಹುದ್ದೆಗಳ ಹರಾಜು ಪ್ರಕ್ರಿಯೆ ಬಗ್ಗೆ  ಅವರು ದೆಹಲಿಯಿಂದ ಬಂದು ಸಮಾಲೋಚನೆಗಳನ್ನು ನಡೆಸಿದ್ದಾರೆ. ಪರಿಣಾಮವಾಗಿ ನಿಗಮ ಮಂಡಳಿ ಹುದ್ದೆಗೆ ಕೊಡಬೇಕಾದ ಕಲೆಕ್ಷನ್‌ ಪ್ರಮಾಣ ಮತ್ತೆ ಚರ್ಚೆಗೆ ಬಂದಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದೆ.

ಅಲ್ಲದೆ ನಿಗಮ ಮಂಡಳಿಗಳನ್ನು ಪಡೆಯಲು ಕೋಟಿ ಕೋಟಿ ಹಣ ಕೊಡಬೇಕು ಎಂದು ಆರೋಪಿಸಿರುವ ಬಿಜೆಪಿ, ಕಲೆಕ್ಷನ್‌ ಪಟ್ಟಿಯನ್ನು ಸಿದ್ದರಾಮಯ್ಯ ಚಿತ್ರದ ಜೊತೆ ಪೋಸ್ಟ್‌ ಮಾಡಿದೆ.

ಇದನ್ನೂ ಓದಿ: ಬರ ಪರಿಹಾರಕ್ಕಾಗಿ 800 ಕೋಟಿ ರೂ ಬಿಡುಗಡೆ: ಸಿಎಂ ಸಿದ್ದರಾಮಯ್ಯ

ಜನನ, ಮರಣ ಪ್ರಮಾಣಪತ್ರ ಪಡೆಯುವುದು ಮೂಲಭೂತ ಹಕ್ಕು ಎಂಬ ಕಾರಣಕ್ಕೆ ಅದನ್ನು ಇದುವರೆಗೂ ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ಅದರ ಮೇಲೆಯೂ 100 ರಿಂದ 1000ದವರೆಗೂ ಶುಲ್ಕ ವಿಧಿಸಿ ಮರಣದಲ್ಲೂ ದಂಧೆ ನಡೆಸಲು ಕಾಂಗ್ರೆಸ್‌ ಸರ್ಕಾರ ಮುಂದಾಗಿರುವುದು ಖಂಡನೀಯ. ಜನರಿಂದ ಹಕ್ಕುಗಳನ್ನೇ ಕಸಿದುಕೊಳ್ಳುವ ಈ ನಿರ್ಧಾರ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಆಗುತ್ತಿದೆ ಎಂದರೆ ಅವರು ಅದಿನ್ನೆಂಥಾ ಮಾನವತಾ ವಿರೋಧಿ ಎಂಬುದು ಸಾಬೀತಾಗಿದೆ ಎಂದೂ ಬಿಜೆಪಿ ಟೀಕಿಸಿದೆ.

ವಿಡಿಯೋ ನೋಡಿ: ಸರ್ಕಾರದ ಕಿವಿ ಹಿಂಡಿದ ಮಾಧ್ಯಮದ ಕತ್ತು ಹಿಸುಕುವ ಕೇಂದ್ರ ಸರ್ಕಾರ – ಸಿದ್ದನಗೌಡ ಪಾಟೀಲ್‌ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *