ಬೆಂಗಳೂರು: ಕರ್ನಾಟಕದಲ್ಲಿ ಅಪಾರ ಚಳಿ ಮುಂದುವರಿದಿದೆ. ಮುಂದಿನ ಆರು ದಿನಗಳ ವರೆಗೆ ರಾಜ್ಯದ ವಿವಿಧ ಭಾಗದಲ್ಲಿ ವಿಪರೀತ ಚಳಿ ಮುಂದುವರಿಯಲಿದೆ. ಸಂಕ್ರಾಂತಿಯ ವರೆಗೆ ಚಳಿ ಹೆಚ್ಚಾಗಿ ಇರಲಿದ್ದು, ಸಂಕ್ರಾಂತಿಯ ನಂತರ ಚಳಿ ಕಡಿಮೆ ಆಗಲಿದೆ. ಆದರೆ ಫೆಬ್ರವರಿ ಅಂತ್ಯದ ವರೆಗೆ ಇಲ್ಲವೇ ಮಾರ್ಚ್ ಎರಡನೇ ವಾರದ ವರೆಗೆ ಚಳಿ ಪ್ರಭಾವ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಮಾರ್ಚ್
ಇನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಣಭೀಕರ ಚಳಿ ಮುಂದುವರಿದಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಚಳಿ 10 ಡಿಗ್ರಿ ಸೆಲ್ಸಿಯಸ್ ವಿಜಯಪುರದಲ್ಲಿ ದಾಖಲಾಗಿದೆ. ಇನ್ನೊಂದು ವಾರದ ವರೆಗೆ ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಚಳಿ ಇರಲಿದೆ. ಮಾರ್ಚ್
ಉಳಿದಂತೆ ಕರಾವಳಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಯಾವ ಜಿಲ್ಲೆಗಳಲ್ಲಿ ಯಾವ ದಿನ ಚಳಿ ಇರಲಿದೆ ಎನ್ನುವ ಕಂಪ್ಲೇಟ್ ಮಾಹಿತಿ ಇಲ್ಲಿದೆ. ರಾಜ್ಯದಲ್ಲಿ ಜನವರಿ 12ರ ವರೆಗೆ ವಿವಿಧ ಭಾಗದಲ್ಲಿ ಮೈಕೊರೆಯುವ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಮಾರ್ಚ್
ಇದನ್ನೂ ಓದಿ: ಮದುವೆಗೆ ಸಾಲ ಕೊಡುವುದಾಗಿ ನಂಬಿಸಿ, ಯುವತಿಗೆ ಮದ್ಯ ಕುಡಿಸಿ ಆತ್ಯಾಚಾರವೆಸಗಿದ ಬಿಜೆಪಿ ಮುಖಂಡ
ಬೆಂಗಳೂರು ಹವಾಮಾನ ವರದಿ: ಬೆಂಗಳೂರಿನಲ್ಲೂ ಮುಂದಿನ ಒಂದು ವಾರಗಳ ಕಾಲ ಭಾರೀ ಚಳಿ ಮುಂದುವರಿಯಲಿದೆ. ಮುಂದಿನ 48 ಗಂಟೆಯ ಅವಧಿಯಲ್ಲಿ ಮೋಡವಿಲ್ಲದ ಆಕಾಶ ಇರಲಿದೆ. ಕೆಲವು ಪ್ರದೇಶದಲ್ಲಿ ಬೆಳಿಗ್ಗೆ ಸಮಯದಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಟ ತಾಪಮಾನವು ಕ್ರಮವಾಗಿ 29 ಡಿಗ್ರಿ ಸೆಲ್ಸಿಯಸ್ ಹಾಗೂ 15 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ತಾಪಮಾನದ ಮುನ್ಸೂಚನೆ: ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮೈಕೊರೆಯುವ ಚಳಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮುನ್ಸೂಚನೆ ಕೊಟ್ಟಿದೆ. ಬೀದರ್, ಕಲಬುರಗಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಕೊಪ್ಪಳ, ಹಾವೇರಿ, ವಿಜಯಪುರ, ಹಾಸನ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಆಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ.
ಅಂದರೆ ಈಗ ಇರುವುದಕ್ಕಿಂತ ಚಳಿ ಇನ್ನೂ ಜಾಸ್ತಿ ಆಗಲಿದೆ. ಇನ್ನು ಉತ್ತರ ಕನ್ನಡ ಹಾಗೂ ಗದಗದಲ್ಲಿ ಸಾಮಾನ್ಯಕ್ಕಿಂತ 3ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುವ ಸಾಧ್ಯತೆ ಇದೆ.
ಇನ್ನು ಚಿತ್ರದುರ್ಗ, ರಾಯಚೂರು, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಇಳಿಕೆಯಾಗಲಿದೆ. ಆದರೆ ದೊಡ್ಡ ಬದಲಾವಣೆ ಇಲ್ಲ ಅಂತ ಐಎಂಡಿ ರಿಪೋರ್ಟ್ ಹೇಳಿದೆ.
ಜನವರಿ 7: ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಚಳಿ ಇರಲಿದೆ. ವಿಜಯಪುರ, ಬೀದರ್, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಚಳಿ ಇರಲಿದೆ. ಈ ಭಾಗಗಳಲ್ಲಿ ಬೆಳಿಗ್ಗೆ ಸಮಯದಲ್ಲಿ ದಟ್ಟ ಮಂಜು ಆವರಿಸಿರಲಿದೆ.
ಜನವರಿ 8: ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಹಾಗೂ ಚಾಮರಾಜನಗರ, ವಿಜಯಪುರ, ಬೀದರ್, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಭಾಗದಲ್ಲಿ ಮೈಕೊರೆಯುವ ಚಳಿ ಇರಲಿದೆ. ಇನ್ನು ಜನವರಿ 9ಕ್ಕೂ ಈ ಭಾಗದಲ್ಲಿ ಚಳಿ ಮುಂದುವರಿಯಲಿದೆ.
ಇದನ್ನೂ ನೋಡಿ: 1000 ದಿನಗಳನ್ನು ಪೂರೈಸಿ ಇಂದಿಗೂ ಮುಂದುವರಿದ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟದ ಆಳ ಅಗಲ…