ಧರ್ಮದ ಕಾರಣಕ್ಕೆ ವಿರೋಧಿಸುತ್ತಿರುವವರ ವಿರುದ್ಧ ಪ್ರತಿಭಟನೆ
ಮೈಸೂರು: ಖ್ಯಾತ ಸಾಹಿತಿ, ಕನ್ನಡಕ್ಕೆ ಬೂಕರ್ ಗರಿ ಮೂಡಿಸಿದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಕರಾಗಿ ಆಗಮಿಸುತ್ತಿರುವುದನ್ನು ಕೇವಲ ಧರ್ಮದ ಕಾರಣಕ್ಕೆ ವಿರೋಧಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಜನರಂಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬೆಂಬಲ
ನಗರದ ನ್ಯಾಯಾಲಯದ ಮುಂಭಾಗ ಗಾಂಧಿ ಪ್ರತಿಮೆ ಎದುರು ಆಗಸ್ಟ್ 30ರಂದು ಜಮಾವಣೆಗೊಂಡ ಪ್ರಗತಿಪರ ಸಂಘಟನೆಗಳ ಒಕ್ಕೂಟ, ರೈತಪರ ಸಂಘಟನೆಗಳು, ದಲಿತ ಸಂಘಟನೆಗಳು, ನೆಲೆ-ಹಿನ್ನೆಲೆ, ಎಡ ಪಕ್ಷಗಳು, ಸಿಪಿಐ(ಎಂ) ಸೇರಿದಂತೆ ಅನೇಕ ಜನಪರ ಮುಖಂಡರು ಕನ್ನಡಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ದೊರಕಿಸಿದ ಬಾನು ಮುಷ್ತಾಕ್ ಅವರೇ ದಸರಾ ಉದ್ಘಾಟಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಬೆಂಬಲ
ದಸರಾ ಹಿನ್ನೆಲೆಯಲ್ಲಿ ಕೋಮುವಾದಿಗಳ ಮನುಷ್ಯ ವಿರೋಧಿ ಧೋರಣೆ ಮತ್ತೆ ಜಗಜ್ಜಾಹೀರಾಗುತ್ತಿದೆ. ಧರ್ಮದ ಹೆಸರಿನಲ್ಲಿ ಸವಾಜದಲ್ಲಿ ಕಂದಕವನ್ನು ಹೆಚ್ಚು ಮಾಡುವ ಕೆಲಸದಲ್ಲಿಯೇ ನಿರತರಾಗಿರುವ ಧೂತರಿಗೆ ಧಿಕ್ಕಾರ, ಕೋಮುವಾದಿಗಳಿಗೆ ಧಿಕ್ಕಾರ, ಸಾಮರಸ್ಯ ಮೊಳಗಲಿ, ಶಾಂತಿಯುತ ದಸರಾ ನಡೆಯಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಬಲ
ಇದನ್ನೂ ಓದಿ: ಅಮೇರಿಕಾ |ತಮಾಷೆ ಮಾಡಲು ಮನೆಯ ಬೆಲ್ ಬಾರಿಸಿದಕ್ಕೆ 11 ವರ್ಷದ ಬಾಲಕನ ಮೇಲೆ ಗುಂಡಿನ ದಾಳಿ
ಪತ್ರಕರ್ತ ಟಿ. ಗುರುರಾಜ್ ಮಾತನಾಡಿ, ದಸರಾವನ್ನು ನಾಡಹಬ್ಬ ಎನ್ನುತ್ತೇವೆ ಅದಕ್ಕೆ ಧರ್ಮದ ಕೆಸರು ಮೆತ್ತಿ ಕೇಸರೀಕರಣ ಮಾಡುವ ಕೆಲಸಮಾಡಲಾಗುತ್ತಿದೆ. ಶೋಭ ಕರಂದ್ಲಾಜೆ ಹೆಣ್ಣಾಗಿ ತಾಕತ್ ಇದ್ದರೆ ಬೆಟ್ಟ ಹತ್ತಲಿ ಎನ್ನುತ್ತಾರೆ. ಅವರಿಗೆ ಯಾರಾದರೂ ಬೆಟ್ಟ ಬರೆದುಕೊಟ್ಟರೇ, ಪ್ರತಾಪ ಸಿಂಹ ಅವರ ಕಣ್ಣಿಗೆ ಬಾನು ಮುಷ್ತಾಕ್ ಸೀರೆ ತೊಡುವುದು ಕಾಣಲಿಲ್ಲವೇ ಎಂದು ಪ್ರಶ್ನಿಸಿದರು. ಬೆಂಬಲ
ಹಿರಿಯ ರಂಗಕರ್ಮಿ ಜನಾರ್ಧನ್ (ಜನ್ನಿ) ಮಾತನಾಡಿ, ನಾಡಿಗೆ ಸಾಂಸ್ಕೃತಿಕವಾಗಿ ದೊಡ್ಡ ಹಿನ್ನೆಲೆ ಇದೆ. ಇದು ಆರ್‌ಎಸ್‌ಎಸ್‌ನವರ ಮನೆಯಲ್ಲ. ನಿಮ್ಮ ನಡೆ, ನುಡಿ ಎಲ್ಲರಿಗೂ ಗೊತ್ತಾಗಿದೆ. ನೀಚ ಮಟ್ಟಕ್ಕೆ ಬಂದು ತಲುಪಿದ್ದೀರಿ. ಬಾನು ಮುಷ್ತಾಕ್ ಬಗ್ಗೆ ಮಾತನಾಡಲು ಬಿಜೆಪಿಯವರು ಅಯೋಗ್ಯರು. ಸರ್ಕಾರ ಯಾರ ಮಾತನ್ನು ಕೇಳಬಾರದು. ಬಾನು ಮುಷ್ತಾಕ್ ಅವರಿಂದಲೇ ದಸರಾ ಉದ್ಘಾಟಿಸಬೇಕು ಎಂದರು.
ನೃಪತುಂಗ ಕನ್ನಡ ಶಾಲೆಯ ಕಾರ್ಯದರ್ಶಿ ಸವಿತ ಪ.ಮಲ್ಲೇಶ್ ಮಾತನಾಡಿ, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ವಿರೋಧಿಸುತ್ತಿರುವರು ಸಂವಿಧಾನ ಗೌರವಿಸದವರು. ಸಂವಿಧಾನ ಗೌರವಿಸದವರು ದೇಶದಲ್ಲಿ ವಾಸ ಮಾಡಲು ಯೋಗ್ಯರಲ್ಲ. ಜಾತ್ಯತೀತ ದೇಶದಲ್ಲಿ ಕೋಮುವಾದಿಗಳಿಗೆ ಕೆಲಸ ಇಲ್ಲ. ಬಾನು ಮುಷ್ತಾಕ್ ಅವರೆ ದಸರಾ ಉದ್ಘಾಟಿಸಬೇಕು ಎಂದು ಒತ್ತಾಯಿಸಿದರು.
ಸಿಪಿಎಂ ಪಕ್ಷದ ಕೆ.ಬಸವರಾಜು ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ತಂದು ಕೊಟ್ಟ ಬಾನು ಅವರನ್ನು ದಸರಾ ಉದ್ಘಾಟಿಸುತ್ತಿರುವುದು ಸೂಕ್ತ. ಕೆಲವರು ರಾಜಕೀಯ ಲಾಭಕ್ಕಾಗಿ ಕರ್ನಾಟಕದ ಹೆಸರಿಗೆ ಕೆಸರೆರಚುತ್ತಿದ್ದಾರೆ. ಇವರಿಗೆ ಧಿಕ್ಕಾರ ಎಂದು ಕಿಡಿಕಾರಿದರು.
ರಂಗಕರ್ಮಿ ಸಿ.ಬಸಲಿಂಗಯ್ಯ ಮಾತನಾಡಿ, ಬಾನು ಮುಷ್ತಾಕ್ ಅವರನ್ನು ವಿರೋಧಿಸುತ್ತಿರುವರ ಮಿದುಳಿಗೆ ಲಕ್ವ ಹೊಡೆದಿದೆ. ಧರ್ಮವನ್ನು ರಾಜಕೀಯಕ್ಕೆ ತರಲಾಗುತ್ತಿದೆ. ಇದು ಈಡೇರಬಾರದು ಎಂದು ಹೇಳಿದರು.
ಸಿಪಿಐ(ಎಂ)ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ‌್ಯ, ರತಿರಾವ್, ಸಿ.ಬಸವಲಿಂಗಯ್ಯ, ಪ್ರೊ.ಕಾಳಚನ್ನೇಗೌಡ, ಧನಂಜಯ ಎಲಿಯೂರು, ಹೊಸಕೋಟೆ ಬಸವರಾಜು, ನೆಲೆ ಹಿನ್ನಲೆ ಗೋಪಾಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಹೋರಾಟಗಾರ ಮೋಹನ್ ಕುಮಾರ್ ಗೌಡ, ಅಶೋಕಪುರಂ ರಾಜಣ್ಣ, ಕೆ.ಬಾಲಕೃಷ್ಣ, ಲತಾಬಿದ್ದಪ್ಪ, ಸುಶೀಲಾ, ಪಿ.ಆರ್.ರಜಿತಾ, ವಿಜಯ ಕುಮಾರ್, ಅಹಿಂದ ಜವರಪ್ಪ, ಖಲೀಂ, ವಕೀಲ ಬಾಬು ರಾಜ್, ಚಂದ್ರು, ಸಿ.ಎನ್.ನರಸಿಂಹ ಮೂರ್ತಿ, ಮೋಹನ್, ಬಲರಾಮ್, ಬಾಲಾಜಿರಾವ್, ವರುಣ ನಾಗರಾಜು, ಲಾ.ಜಗನ್ನಾಥ್, ಪಾಷಾ, ನಾ.ದಿವಾಕರ್, ರಾಘವೇಂದ್ರ, ವರಹಳ್ಳಿ ಆನಂದ ಪ್ರತಿಭಟನೆಯಲ್ಲಿ ಹಾಜರಿದ್ದರು.
ಕೋಟ್:
ಸಂವಿಧಾನವೇ ನಮ್ಮ ರಾಷ್ಟ್ರೀಯ ಧರ್ಮ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮಾತನ್ನು ಬಿಜೆಪಿಯವರು ಇಂದಿಗೂ ಅರ್ಥ ಮಾಡಿಕೊಂಡಿಲ್ಲ. ಬೂಕರ್ ಪ್ರಶಸ್ತಿಯನ್ನು ಧರ್ಮ ನೋಡಿ ಕೊಟ್ಟಿಲ್ಲ. ಇಡೀ ನಾಡಿಗೆ ಸಲ್ಲಿಸಿದ ಗೌರವ ಇದಾಗಿದೆ.
ಇದನ್ನೂ ನೋಡಿ: ವಚನಾನುಭವ 33 | ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ Janashakthi Media
