ಸಿಎಂ ಯಡಿಯೂರಪ್ಪರವರಿಗೆ ಕೋವಿಡ್‌ ಪಾಸಿಟಿವ್‌: ಆಸ್ಪತ್ರೆಗೆ ದಾಖಲು

ಬೆಂಗಳೂರು: ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿರುವುದರಿಂದ ಅವರನ್ನು ಮಣಿಪಾಲ ಆಸ್ಪತ್ರೆ ದಾಖಲು ಮಾಡಲಾಗಿದೆ.

ಮಣಿಪಾಲ್‌ ಆಸ್ಪತ್ರೆಯಲ್ಲಿ ಯಡಿಯೂರಪ್ಪ ಅವರ ಕುಟುಂಬದ ವೈದ್ಯರು ಇರುವುದರಿಂದ ಇಂದು ಮಧ್ಯಾಹ್ನ ಎರಡು ಗಂಟೆಗೆ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್‌ ಆಸ್ಪತ್ರೆ ಸ್ಥಳಾಂತರಿಸಲಾಗಿದೆ.

ಇದನ್ನು ಓದಿ: ಬೆಡ್ ಕೊರತೆ : ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗುವಷ್ಟರಲ್ಲಿ ನಿಂತೇ ಹೋಯ್ತು ಸೋಂಕಿತನ ಉಸಿರು

ಉಪಚುನಾವಣೆಯ ಸಂದರ್ಭದಲ್ಲಿ ಭಾಗವಹಿಸಿದ್ದ ಬಹುತೇಕ ಶಾಸಕರು ಮತ್ತು ಬಿಜೆಪಿ ನಾಯಕರಿಗೆ ಕೋವಿಡ್‌ ಪಾಸಿಟಿವ್‌ ಆಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ಚುನಾವಣಾ ಪ್ರಚಾರದಲ್ಲಿ ಸತತವಾಗಿ ಭಾಗವಹಿಸಿದ್ದಾರೆ. ಬುಧವಾರ ಸಂಜೆ ಜ್ವರ ಕಾಣಿಸಿಕೊಂಡಿದ್ದರೂ ಸಹ ನೆನ್ನೆ ಬೆಳಗಾವಿ ಚುನಾವಣಾ ಪ್ರಚಾರದಲ್ಲಿ ಮತ್ತೆ ಭಾಗವಹಿಸಿದ್ದಾರೆ.

ಅದಲ್ಲದೆ ನೆನ್ನೆ ಸಂಜೆ ಹಾಗೂ ಇಂದು ಸಹ ಸತತವಾಗಿ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೋವಿಡ್‌ ನಿಯಮಗಳನ್ನು ಪಾಲಿಸಲಿಲ್ಲ.

ಇದನ್ನು ಓದಿ: ರಾಜ್ಯದಲ್ಲಿ ದಾಖಲೆ ಬರೆದ ಕೊರೊನಾ : ಒಂದೇ ದಿನ 14 ಸಾವಿರ ಪ್ರಕರಣಗಳು ಪತ್ತೆ

ಇಂದು ಹೆಚ್ಚಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆಗಾಗಿ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೋವಿಡ್‌ ಪಾಸಿಟಿವ್‌ ಬಂದ ನಂತರ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಎಂ.ಎಸ್‌.ರಾಮಯ್ಯದಲ್ಲಿ ಚಿಕಿತ್ಸೆಯನ್ನು ಹಿರಿಯ ವೈದ್ಯಾಧಿಕಾರಿ ಗುರುದೇವ್‌ ಅವರು ಸಿಎಂ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಯಡಿಯೂರಪ್ಪನವರ ಪ್ರಾಥಮಿಕ ಸಂಪರ್ಕದಲ್ಲಿ ಬಹಳಷ್ಟು ಜನರಿದ್ದಾರೆ ಎಂದು ಕೇಳಿಬರುತ್ತಿದೆ. ಅವರೆಲ್ಲರೂ ಕೋವಿಡ್‌ ಟೆಸ್ಟ್‌ ಒಳಗಾಗುವುದು ಸೂಕ್ತವೆನಿಸುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Donate Janashakthi Media

Leave a Reply

Your email address will not be published. Required fields are marked *